
- 2021-22ನೇ ಸಾಲಿನ ಕೃಷಿ ಗಣತಿ ಕಾರ್ಯಕ್ಕೆ ಚಾಲನೆ
- ಸ್ಮಾರ್ಟ್ ಫೋನುಗಳು ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಕೆ
2021-22 ನೇ ಸಾಲಿನ ಕೃಷಿ ಗಣತಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಬಾರಿಯ ಗಣತಿಯಲ್ಲಿ ಸ್ಮಾರ್ಟ್ ಫೋನುಗಳು ಮತ್ತು ಟ್ಯಾಬ್ಲೆಟ್ ಮಾದರಿಯ ಆಧುನಿಕ ತಂತ್ರಜ್ಞಾನವನ್ನು ಬಳಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಕೃಷಿ ಗಣತಿಗೆ ಚಾಲನೆ ನೀಡಿ ಮಾತನಾಡುತ್ತಿದ್ದ ತೋಮರ್, "11ನೇ ಕೃಷಿ ಗಣತಿಯ ದತ್ತಾಂಶ ಸಂಗ್ರಹಣೆಗೆ ವಿವಿಧ ಮಾನದಂಡಗಳನ್ನು ಅಳವಡಿಸಲಾಗಿದೆ. ಇದೇ ಮೊದಲ ಬಾರಿಗೆ ಗೇಣಿದಾರರು ಮತ್ತು ಗೇಣಿ ಭೂಮಿಯ ಬಗ್ಗೆ ಸಹ ಮಾಹಿತಿ ಸಂಗ್ರಹಿಸಲಾಗುತ್ತದೆ" ಎಂದು ಹೇಳಿದ್ದಾರೆ.
"ಈ ಗಣತಿಯು 2022ರ ಆಗಸ್ಟ್ ತಿಂಗಳಿನಿಂದ ಆರಂಭವಾಗುತ್ತದೆ. ಸಾಮಾನ್ಯವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಈ ಗಣತಿ ನಡೆಯಬೇಕು. ಆದರೆ ಈ ಬಾರಿ ಕೊರೋನ ಕಾರಣದಿಂದ ಮಾಡಲಾಗಿರಲಿಲ್ಲ" ಎಂದು ಅವರು ತಿಳಿಸಿದರು.
2011ರ ಕೃಷಿ ಗಣತಿ ಪ್ರಕಾರ ಭೂ ಒಡೆತನದ ದರ್ಜೆಗಳು
- ಅತಿಸಣ್ಣ ರೈತರು: ಒಂದು ಹೆಕ್ಟೇರಿಗಿಂತ ಕಡಿಮೆ.
- ಸಣ್ಣ ರೈತರು: 1 ರಿಂದ 2 ಹೆಕ್ಟೇರ್
- ಕೆಳಮಧ್ಯಮ ರೈತರು: 2 ರಿಂದ 4 ಹೆಕ್ಟೇರ್
- ಮಧ್ಯಮ ರೈತರು: 4 ರಿಂದ 10 ಹೆಕ್ಟೇರ್
- ದೊಡ್ಡ ರೈತರು: 10 ಹೆಕ್ಟೇರಿಗಿಂತ ಮೇಲ್ಪಟ್ಟು.
ಭಾರತದಲ್ಲಿ ಯಾವ ಯಾವ ರೈತರು ಎಷ್ಟೆಷ್ಟು?
- ಅತಿಸಣ್ಣ ರೈತರು ಶೇಕಡ 67 ಭಾಗ
- ಸಣ್ಣ ರೈತರು: ಶೇಕಡ 18 ಭಾಗ
- ದೊಡ್ಡ ರೈತರು: ಶೇಕಡ 0.7 ಭಾಗ