ಕಳಪೆ ಬೀಜ ವಿತರಣೆ | 276 ಪ್ರಕರಣ ದಾಖಲು; 416 ಪರವಾನಗಿ ರದ್ದು

Duplicate Seeds
  • ಸಬ್ಸಿಡಿಯನ್ನು ಮುಂದುವರಿಸಲಾಗಿದೆ
  • 55 ಲಕ್ಷ ರೂಪಾಯಿ ದಂಡ ವಸೂಲಿ

ಕಳಪೆ ಬಿತ್ತನೆ ಬೀಜ ಪೂರೈಸುವ ವ್ಯಾಪಾರಿಗಳ ವಿರುದ್ಧ ಒಟ್ಟು 276 ಪ್ರಕರಣ ದಾಖಲಿಸಲಾಗಿದೆ ಮತ್ತು 416 ಪರವಾನಗಿಗಳು ರದ್ದುಗೊಳಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಬಿ.ಸಿ. ಪಾಟೀಲ, "ಕಳಪೆ ಬೀಜ ಪೂರೈಕೆ ಮಾಡುವವರನ್ನು ಪತ್ತೆ ಹಚ್ಚಿ, ಅವರಿಂದ ಸರಿಸುಮಾರು 55 ಲಕ್ಷ ರೂಪಾಯಿ ದಂಡವನ್ನು ವಸೂಲಿ ಮಾಡಲಾಗಿದೆ" ಎಂದರು.

ಕಳಪೆ ಬೀಜ ಮಾರಾಟ ಮಾಡುವ ವಂಚನೆ ಪ್ರಕರಗಳು ಕಂಡಲ್ಲಿ ಕೂಡಲೇ ಕೃಷಿ ಜಾಗೃತ ಕೋಶಕ್ಕೆ ಮಾಹಿತಿ ನೀಡುವಂತೆ ರೈತರಿಗೆ ಮತ್ತು ಸಾರ್ವಜನಿಕರಿಗೆ ಸಚಿವ ಬಿ.ಸಿ. ಪಾಟೀಲ ಮನವಿ ಮಾಡಿದರು. 

ರೈತರಿಗೆ ಅಗತ್ಯವಾದ ಎಲ್ಲ ರೀತಿಯ ನೆರವುಗಳನ್ನೂ ಸರ್ಕಾರ ನೀಡುತ್ತಿದ್ದು, ರೈತರು ಸೌಲಭ್ಯಗಳನ್ನು ಬಳಸಿಕೊಂಡು ಉತ್ಪಾದನೆಗಳನ್ನು ಹೆಚ್ಚಿಸಿ  ಲಾಭ ಗಳಿಸುವಂತೆ ಮಾರ್ಗದರ್ಶನ ನೀಡಿದರು.

ರಸಗೊಬ್ಬರ ಮೊದಲಾಗಿ ಪ್ರಸ್ತುತ ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿಯನ್ನು ಮುಂದುವರಿಸಲಾಗಿದೆ. ಸ್ಪ್ರಿಂಕ್ಲರ್‌ ವ್ಯವಸ್ಥೆಗಳಿಗೆ ಶೇಕಡ 90 ರಷ್ಟು ರಿಯಾಯಿತಿ ಜಾರಿಯಲ್ಲಿದೆ ಎಂದು ಹೇಳಿದರು. ಇದನ್ನು ಸದುಪಯೋಗ ಪಡಿಸಿಕೊಳ್ಳಲು ಸೂಚಿಸಿದರು.
 

ನಿಮಗೆ ಏನು ಅನ್ನಿಸ್ತು?
0 ವೋಟ್