ಸಾವಯವ ಕೃಷಿಯಲ್ಲಿ ರೈತನ ಸಾಧನೆ

ಸಾವಯವ ಕೃಷಿಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಅಕ್ಕಿಯು ಕೆ.ಜಿಗೆ 100 ರೂ.ಗಳಿಂದ 130 ರೂ.ವರೆಗೆ ಮಾರಾಟವಾಗುತ್ತಿದೆ.

ಆಂಧ್ರ ಪ್ರದೇಶದ ರೈತ ಯಮಲಾ ಜಗದೀಶ್‌ ರೆಡ್ಡಿ ಸಾವಯವ ಕೃಷಿಯಲ್ಲಿ ಭತ್ತ, ರಾಗಿ, ಮಾವು ಬೆಳೆದು ಭಾರಿ ಯಶಸ್ಸು ಕಂಡಿದ್ದಾರೆ.

ಚಿತ್ತೂರು ಜಿಲ್ಲೆಯ ದಂಡುವರಿಪಲ್ಲೆ ಗ್ರಾಮದ ರೈತರಾಗಿರುವ ಜಗದೀಶ್, ತಮ್ಮ 20 ಎಕರೆ ಕೃಷಿ ಭೂಮಿಯಲ್ಲಿ ಭತ್ತ, ರಾಗಿ, ಮಾವು ಬೆಳೆಯುತ್ತಿದ್ದಾರೆ. ಅಲ್ಲದೆ, ಯಾವುದೇ ರಾಸಾಯನಿಕ ಬಳಸದೆ ಬೆಲ್ಲ ಮತ್ತು ಕಾಡಲೇಕಾಯಿ ಎಣ್ಣೆ ಉತ್ಪಾದಿಸುತ್ತಿದ್ದಾರೆ. 

2010ರಲ್ಲಿ ಶಿಕ್ಷಣ ಮೊಟಕುಗೊಳಿಸಿ ಕೃಷಿಯೆಡೆಗೆ ಮುಖ ಮಾಡಿದ ಜಗದೀಶ್‌, ಹಲವು ಸಂದರ್ಭಗಳಲ್ಲಿ ಅಪಾರ ನಷ್ಟ ಅನುಭವಿಸಿದ್ದರು. ಈ ವೇಳೆ, 2012ರಲ್ಲಿ ಸುಭಾಷ್‌ ಪಾಳೇಖರ್‌ ಎಂಬುವವರು ತಿರುಪತಿಯಲ್ಲಿ ನಡೆಸಿದ್ದ ಸಾವಯವ ಕೃಷಿ ವಿಚಾರ ಸಂಕಿರಣದಲ್ಲಿ ಜಗದೀಶ್‌ ಭಾಗವಹಿಸಿದ್ದರು. 

ನಂತರ ಅವರು ಸಾವಯವ ಕೃಷಿಯನ್ನು ಆರಂಭಿಸಿದರು. ಬಳಿಕ, ಕೃಷಿಯು ಅವರ ಕೈಹಿಡಿಯಿತು. ಜಗದೀಶ್‌ ವಿವಿಧ ದೇಸಿ ತಳಿಯ ಭತ್ತ ಬೆಳೆಯುತ್ತಿದ್ದಾರೆ. ಸಾವಯವ ಕೃಷಿಯ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ. ಹೀಗಾಗಿ, ಸಾವಯವ ಪದ್ದತಿಯಲ್ಲಿ ಬೆಳೆದ ಭತ್ತದ ಅಕ್ಕಿ ಕೆ.ಜಿಗೆ 100 ರೂ.ಗಳಿಂದ 130 ರೂ.ವರೆಗೆ ಮಾರಾಟವಾಗುತ್ತಿದೆ.

ʼನಾನು ಮಣ್ಣನ್ನು ರಾಸಾಯನಿಕ ಮತ್ತು ಕೀಟನಾಶಕಗಳಿಂದ ರಕ್ಷಿಸಲು ಸಾವಯವ ಕೃಷಿ ಆರಂಭಿಸಿದೆ. ದೇಶಾದ್ಯಂತ ಅನೇಕ ಕಾರ್ಯಾಗಾರಗಳನ್ನು ನಡೆಸಿ ರೈತರಿಗೆ ಸಾವಯವ ಕೃಷಿ ಅಳವಡಿಸಿಕೊಳ್ಳಲು ತಿಳುವಳಿಕೆ ನೀಡುತ್ತಿದ್ದೇನೆʼ ಎನ್ನುತ್ತಾರೆ ಜಗದೀಶ್.‌

ಸಾವಯವ ಕೃಷಿ ಪದ್ದತಿಯಲ್ಲಿ ಎಕರೆಗೆ 200 ಲೀಟರ್‌ ರಸಗೊಬ್ಬರ ಬೇಕಾಗುತ್ತದೆ. ಗೊಬ್ಬರದ ತಯಾರಿಕೆಗೆ ಹಸುವಿನ ಸಗಣಿ, ಮೂತ್ರ, ಹಸಿರು ಗೊಬ್ಬರ, ಕಪ್ಪು ಬೀನ್ಸ್‌ ಹಿಟ್ಟು ಮತ್ತು ಅರಣ್ಯದ ಮಣ್ಣು ಬಳಸುತ್ತೇವೆ ಎಂದು ಜಗದೀಶ್ ವಿವರಿಸಿದ್ದಾರೆ.

ಜಗದೀಶ್‌ ಅವರು 12 ಎಕರೆಯಲ್ಲಿ ಮಾವು ಬೆಳೆ ಬೆಳೆಯುತ್ತಿದ್ದಾರೆ. ಎಲ್ಲ ಜಾತಿಯ ಮಾವುಗಳನ್ನು ಬೆಳೆಯುತ್ತಿದ್ದು, ಎಕರೆಗೆ 4.2 ಟನ್‌ ಇಳುವರಿ ಬರುತ್ತಿದೆ. ಪ್ರತಿ ವರ್ಷ 50ಟನ್‌ ಮಾವು ಇಳುವರಿಯನ್ನು ಅವರು ಪಡೆಯುತ್ತಿದ್ದಾರೆ.

ಕೃಷಿಯಷ್ಟೇ ಅಲ್ಲದೆ, ಕಡಲೆಕಾಯಿ ಎಣ್ಣೆಯನ್ನು ಸಾವಯವ ಪದ್ಧತಿಯಲ್ಲಿ ತಯಾರಿಸುತ್ತಾರೆ. ಅವರ ಉತ್ಪನ್ನಗಳಿಗೆ ಭಾರಿ ಬೇಡಿಕೆ ಇದೆ. ವಾಟ್ಸ್‌ಆಪ್ ಗ್ರೂಪ್‌ಗಳ ಮೂಲಕ, ಜನರ ಬೇಡಿಕೆಗನುಗುಣವಾಗಿ ಅಕ್ಕಿ, ಬೆಲ್ಲ, ಕಡಲೇಕಾಯಿ ಎಣ್ಣೆ, ಖಾರದ ಪುಡಿಗಳನ್ನು ಮಾರಾಟಮಾಡುತ್ತಾರೆ.

ನೈಸರ್ಗಿಕ ಕೃಷಿಗಾಗಿ ಜಗದೀಶ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ ‘ಇನೋವೇಟಿವ್ ಫಾರ್ಮರ್ʼ ಪ್ರಶಸ್ತಿ ನೀಡಿ ಗೌರವಿಸಿದೆ. ಆಂಧ್ರಪ್ರದೇಶ ಸರ್ಕಾರ ʼಆದರ್ಶ ರೈತʼ ಪ್ರಶಸ್ತಿ ನೀಡಿ ಗೌರವಿಸಿದೆ. 

ನಿಮಗೆ ಏನು ಅನ್ನಿಸ್ತು?
1 ವೋಟ್