ರಾಸಾಯನಿಕ ಬಳಸದೆ ನೈಸರ್ಗಿಕ ಕೃಷಿಗೆ ಸರ್ಕಾರದ ಪ್ರಸ್ತಾಪ

Agriculture
  • ಬೆಂಗಳೂರು, ಶಿವಮೊಗ್ಗ, ರಾಯಚೂರು, ಧಾರವಾಡದಲ್ಲಿ ಪ್ರಯೋಗ
  • ಪ್ರತೀ ಕೃಷಿ ವಿವಿಯ 1 ಸಾವಿರ ಹೆಕ್ಟೇರ್‌ನಲ್ಲಿ ನಡೆಸಲು ಪ್ರಸ್ತಾಪ

ರಾಜ್ಯ ಕೃಷಿ ಇಲಾಖೆಯು ಮೊದಲ ಬಾರಿಗೆ ನೈಸರ್ಗಿಕ ಕೃಷಿ ನಡೆಸಲು ಪ್ರಸ್ತಾವನೆ ಸಲ್ಲಿಸಿದ್ದು, ನಾಲ್ಕು ವಿಶ್ವವಿದ್ಯಾಲಯಗಳಿಗೆ ಹೊಂದಿಕೊಂಡಿರುವ ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ತಲಾ 1,000 ಎಕರೆಯಂತೆ ಈ ಪ್ರಯೋಗ ನಡೆಸಲು ಆಸಕ್ತಿ ವಹಿಸಿದೆ.

ಈ ಮುಂಗಾರು ಪೂರ್ವದಲ್ಲಿ, ಬೆಂಗಳೂರು, ಧಾರವಾಡ, ರಾಯಚೂರು ಮತ್ತು ಶಿವಮೊಗ್ಗದಲ್ಲಿರುವ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಸರ್ಕಾರವು ರಾಸಾಯನಿಕ ಮುಕ್ತ ಕೃಷಿಯ ಅಧ್ಯಯನ ಕೈಗೆತ್ತಿಕೊಳ್ಳುವ ಬಗ್ಗೆ ಪ್ರಸ್ತಾಪ ಮಾಡಿದೆ.

ಈ ಹಿನ್ನೆಲೆಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಈದಿ‌ನ.ಕಾಂ ಮಾತನಾಡಿಸಿದಾಗ, "ಬೆಂಗಳೂರು ವಿವಿ ಸೇರಿದಂತೆ ನಾಲ್ಕು ವಿವಿಯ ಜವಾಬ್ದಾರಿಗೆ 1000 ಹೆಕ್ಟೇರ್‌ನಂತೆ ನೀಡಿ ಒಟ್ಟು 4,000 ಎಕರೆಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಬಳಸದೆ ಬೆಳೆ ತೆಗೆಯುವ ನೈಸರ್ಗಿಕ ಕೃಷಿ ವಿಧಾನದ ಬಗ್ಗೆ ಪ್ರಸ್ತಾಪ ಮಾಡಿದೆ. ಆದರೆ ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯಿಂದ ಸರಿಯಾದ ಮಾರ್ಗದರ್ಶನ ಇನ್ನಷ್ಟೇ ಬರಬೇಕಿದೆ.‌ ಯಾವ ರೀತಿಯಲ್ಲಿ ಸರ್ಕಾರ ನೀಡುವ ಮಾರ್ಗದರ್ಶನ ನೀಡುತ್ತದೆಯೋ ಅದೇ ರೀತಿ ಮುಂದುವರಿಸುತ್ತೇವೆ" ಎಂದು ತಿಳಿಸಿದ್ದಾರೆ.

ಇದನ್ನು ಓದಿದ್ದೀರಾ? ರೈತರ ಪ್ರತಿಭಟನೆಗೆ ಮಣಿದು ರಾಗಿ ಖರೀದಿಗೆ ಸಜ್ಜಾದ ಬೊಮ್ಮಾಯಿ ಸರ್ಕಾರ

ರಾಜ್ಯ ಸರ್ಕಾರವು ದೇಶದಲ್ಲೇ ಮೊದಲ ಬಾರಿಗೆ ನೈಸರ್ಗಿಕ ಕೃಷಿಗೆ ಒತ್ತು ನೀಡಿದೆ.  ರಾಸಾಯನಿಕ ಮುಕ್ತ ತರಕಾರಿ ಮತ್ತು ಹಣ್ಣುಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ.

ಪ್ರದೇಶಾಧಾರಿತ ಬೆಳೆಗಳತ್ತ ಗಮನಹರಿಸುವ ಬಗ್ಗೆ ಕೃಷಿ ಇಲಾಖೆ ಆಸಕ್ತಿ ಹೊಂದಿದ್ದು, ಒಂದು ವೇಳೆ ಕೃಷಿ ವಿವಿಗಳಲ್ಲಿ ಇದರ ಪ್ರಯೋಗ ನಡೆದು ಉತ್ತಮ ಇಳುವರಿ ಬಂದರೆ ನೈಸರ್ಗಿಕ ಕೃಷಿ ಪದ್ಧತಿಯನ್ನು ರೈತರಿಗೆ ತಿಳಿಸಿಕೊಡುವ ಬಗ್ಗೆ ಸರಕಾರ ಚಿಂತನೆ ನಡೆಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್