ದನದ ಕೊಟ್ಟಿಗೆ ನಿರ್ಮಾಣಕ್ಕೆ ಅನುದಾನ ಹೆಚ್ಚಿಸಿದ ರಾಜ್ಯ ಸರ್ಕಾರ

Karnataka farmers to get more money for cattle sheds under MGNREGS Scheme
  • ಎಲ್ಲ ವರ್ಗದ ರೈತರಿಗೆ ₹57,000 ನೀಡಲು ತೀರ್ಮಾನ
  • ರಾಜ್ಯದ ರೈತರಿಗೆ ಖುಷಿ ನೀಡಿದ ಬೊಮ್ಮಾಯಿ ಸರ್ಕಾರ

ರೈತರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ, ದನದ ಕೊಟ್ಟಿಗೆ ನಿರ್ಮಿಸಿಕೊಳ್ಳಲು ನೀಡುವ ಅನುದಾನದ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

ದನ-ಕರು, ಕುರಿ, ಆಡು-ಮೇಕೆ, ಹಂದಿ ಹಾಗೂ ಕೋಳಿಗಳಿಗೆ ಶೆಡ್‌ಗಳನ್ನು ನಿರ್ಮಿಸಲು ರೈತರಿಗೆ ವೈಯಕ್ತಿಕ ನೀಡುವ ಹಣದ ಪ್ರಮಾಣವನ್ನು ಹೆಚ್ಚಳ ಮಾಡಲು ಸರ್ಕಾರ ಯೋಜಿಸಿದೆ. ಅಲ್ಲದೆ, ಈ ಯೋಜನೆಯಡಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಇತರೆ ರೈತರಿಗಿಂತ ಹೆಚ್ಚಿನ ಅನುದಾನ ಪಡೆದುಕೊಳ್ಳುವ ವ್ಯವಸ್ಥೆಯನ್ನು ತೆಗೆದು ಹಾಕಿದೆ.

ಈ ಸುದ್ದಿ ಓದಿದ್ದೀರಾ? ಕುರಿಗಾಹಿ ಮತ್ತು ಖರೀದಿದಾರರಿಗೆ ಸೇತು ಬಂಧುವಾದ 'ಮೊಬೈಲ್ ಆ್ಯಪ್'

ದನದ ‌ಕೊಟ್ಟಿಗೆ ಅಥವಾ ಗೋಶಾಲೆ ನಿರ್ಮಿಸಲು ಪ್ರತಿ ಎಸ್‌ಸಿ/ಎಸ್‌ಟಿ ರೈತರಿಗೆ ₹43,500 ಹಾಗೂ ಇತರೆ ಸಮುದಾಯದ ರೈತರಿಗೆ ₹19,625 ರೂ ಸಹಾಯಧನವಿತ್ತು. ಈಗ ಬೊಮ್ಮಾಯಿ ಸರ್ಕಾರ ಎಲ್ಲ ವರ್ಗದ ರೈತರಿಗೆ ಸರಿಸಮನಾಗಿ ₹57,000 ನೀಡಲು ತೀರ್ಮಾನಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ಮನರೇಗಾ) ಈ ಸಹಾಯಧನವನ್ನು ರೈತರಿಗೆ ವಿತರಿಸಲಾಗುತ್ತದೆ.

ನಿಮಗೆ ಏನು ಅನ್ನಿಸ್ತು?
1 ವೋಟ್