ಪ್ರಸ್ತುತ ವರ್ಷದ ಮುಂಗಾರು ಬಿತ್ತನೆ ಶೇ.46ರಷ್ಟು ಕುಂಠಿತ: ಕೃಷಿ ಇಲಾಖೆ

  • ಒಟ್ಟಾರೆ 1.96 ಲಕ್ಷ ಹೆಕ್ಟೇರ್‌ಗಳಲ್ಲಿ ಬೇಸಿಗೆ ಭತ್ತ ನಾಟಿ 
  • ಮುಂಗಾರು ಮಳೆ ತಡವಾದ ಕಾರಣ ಬಿತ್ತನೆ ನಿಧಾನ

ಕಳೆದ ಬೇಸಿಗೆಯಲ್ಲಿ ಒಟ್ಟಾರೆ 1.96 ಲಕ್ಷ ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆಯಾಗಿತ್ತು. ಇದಕ್ಕೆ ಹೋಲಿಸಿದರೆ ದೇಶದಲ್ಲಿ ಈ ಬಾರಿಯ ಮುಂಗಾರು ಬಿತ್ತನೆ ಶೇ.46ರಷ್ಟು ಕುಂಠಿತಗೊಂಡಿದೆ ಎಂದು ಕೃಷಿ ಇಲಾಖೆ ಸಂಗ್ರಹಿಸಿರುವ ದತ್ತಾಂಶ ಹೇಳುತ್ತಿದೆ.

"ಬೇಸಿಗೆಯ ಮಳೆ ದೇಶದ ಅರ್ಧ ಭಾಗವನ್ನು ಆವರಿಸಿತ್ತು. ಉಳಿದ ಕಡೆ ಶೇ. 2ರಿಂದ ಶೇ.36ರವರೆಗೆ ಕಡಿಮೆಯಾಗಿತ್ತು. ಆದರೆ ಮುಂಗಾರು ಮಳೆ ತಡವಾದ ಕಾರಣ ಬಿತ್ತನೆ ಸ್ವಲ್ಪ ನಿಧಾನವಾಗಿದೆ. ಈ ಮುಂಗಾರು ಈಗ ಬಲಗೊಳ್ಳುತ್ತಿದೆ. ಬಿತ್ತನೆಯೂ ಆರಂಭವಾಗಿದೆ. ಆದ್ದರಿಂದ ಪರಿಸ್ಥಿತಿ ಆಶಾದಾಯಕವಾಗಿದೆ" ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘದ ಅಧ್ಯಕ್ಷರಾದ ಬಿ ವಿ ಕೃಷ್ಣರಾವ್‌ ಹೇಳಿದ್ದಾರೆ.

"ಮುಂಗಾರು ಆರಂಭವಾಗುತ್ತಿದ್ದಂತೆ ರೈತರು ಸಾಮಾನ್ಯವಾಗಿ ಭತ್ತ, ಜೋಳ, ಹತ್ತಿ, ಸೋಯ, ಕಬ್ಬು ಮತ್ತು ಕಡಲೆಕಾಯಿ ಬೆಳೆಗಳತ್ತ ಗಮನ ಹರಿಸುತ್ತಾರೆ. ಈ ಬಿತ್ತನೆಗಳು ಸಾಂಪ್ರದಾಯಿಕವಾಗಿ ಜುಲೈ ತಿಂಗಳ ಕೊನೆಯವರೆಗೂ ನಡೆಯುತ್ತಿರುತ್ತವೆ" ಎಂದು ಅವರು ಹೇಳಿದರು.

"ಶೇ.50 ಭಾಗ ನೀರಾವರಿ ವಂಚಿತವಾಗಿರುವ ಭೂಮಿಯನ್ನು ಹೊಂದಿರುವ ಈ ದೇಶಕ್ಕೆ ಮುಂಗಾರು ಮಳೆ ಕೃಷಿಯ ಜೀವನಾಡಿಯಾಗಿದೆ. ಈ ಅವಧಿಯಲ್ಲಿ ದೇಶದ ಶೇ. 50ರಷ್ಟು ಜನಸಂಖ್ಯೆ ಉದ್ಯೋಗದಲ್ಲಿ ತೊಡಗುತ್ತದೆ.
ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯಕ್ಕೂ ಸಹ ಒಮ್ಮೆಲೇ ಬಿತ್ತನೆ ಪ್ರಮಾಣದ ಅಂಕಿ ಆಂಶಗಳು ಲಭ್ಯವಾಗುವುದಿಲ್ಲ. ಬಿತ್ತನೆ ನಡೆಯುತ್ತಾ ಹೋದಂತೆ ಅದು ರಾಜ್ಯಗಳಿಂದ ಮಾಹಿತಿಗಳನ್ನು ಸಂಗ್ರಹಿಸಿ ತನ್ನ ದತ್ತಾಂಶವನ್ನು ರೂಪಿಸಿ, ಪ್ರಕಟಿಸುತ್ತದೆ" ಎಂದು ಇಲಾಖೆಯ ಅಧಿಕಾರಿ ಹೇಳಿದ್ದಾರೆ.

"ಕಳೆದ ವರ್ಷದ 3.73 ದಶಲಕ್ಷ ಹೆಕ್ಟೇರುಗಳ ಬಿತ್ತನೆ ಪ್ರಮಾಣಕ್ಕೆ ಹೋಲಿಸಿದಲ್ಲಿ ಈ ವರ್ಷದ ಹತ್ತಿ ಬಿತ್ತನೆ ಕುಂಠಿತಗೊಂಡಿದೆ. ಈ ಬಾರಿ 3.18 ದಶಲಕ್ಷ ಹೆಕ್ಟೇರುಗಳಲ್ಲಿ ಮಾತ್ರ ಬಿತ್ತನೆಯಾಗಿದೆ. ಹೆಚ್ಚು ಹತ್ತಿ ಬೆಳೆಯುವ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಇದು ಸಂಭವಿಸಿರಬಹುದು" ಎಂದು ಅವರು ಹೇಳುತ್ತಾರೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ: ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

"ಸೋಯಾಬೀನ್‌ ಈ ಬಾರಿ ಚೇತರಿಕೆ ಕಂಡಿದ್ದು 27,80,000 ಹೆಕ್ಟೇರುಗಳಲ್ಲಿ ಬಿತ್ತನೆಯಾಗಿದೆ. 2021ರ ಇದೇ ಅವಧಿಯಲ್ಲಿ 12,50,000 ಹೆಕ್ಟೇರುಗಳಲ್ಲಿ ಬಿತ್ತನೆಯಾಗಿತ್ತು. ಪ್ರೋಟೀನ್ ಅಕ್ಕಿ (ಪಲ್ಸ್‌ ರೋಸ್)‌ ಕಳೆದ ಬಾರಿ 1,32,000 ಹೆಕ್ಟೇರುಗಳಲ್ಲಿ ಬಿತ್ತನೆಯಾಗಿದ್ದರೆ, ಈ ಬಾರಿ 20,2000 ಹೆಕ್ಟೇರುಗಳಲ್ಲಿ ಬಿತ್ತನೆಯಾಗಿದೆ" ಎಂದು ತಿಳಿಸಿದ್ದಾರೆ.

"ಕಬ್ಬು ಬಿತ್ತನೆಯಲ್ಲಿ ಹೆಚ್ಚಿನ ಬದಲಾವಣೆಗಳೇನಿಲ್ಲ. ಆದರೆ ಮುಂದಿನ ಕೆಲವು ದಿನಗಳಲ್ಲಿ ದ್ವಿದಳ ಧಾನ್ಯಗಳ ಬಿತ್ತನೆಯ ಪ್ರಮಾಣ ಇಳಿಕೆಯಾಗುವ ಸಾಧ್ಯತೆಗಳಿವೆ. ರೈತರು ಇವುಗಳ ಬದಲಾಗಿ ಇತರೆ ಲಾಭದಾಯಕ ಬೆಳೆಗಳಾದ ಹತ್ತಿ, ಸೊಯಾಬೀನ್‌ಗಳ ಕಡೆಗೆ ವಾಲುವ ಸಾಧ್ಯತೆಗಳಿವೆ" ಎಂದು ಮಹಾರಾಷ್ಟ್ರ ಮೂಲದ ವ್ಯಾಪಾರಿ ನಿತಿನ್‌ ಕಲಂತ್ರಿ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್