ದೇಶದ ಕೃಷಿ ನೀತಿ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಕೃಷಿ ಸಮ್ಮೇಳನ ವೇದಿಕೆಯಾಗಲಿ : ರಾಜ್ಯ ರೈತ ಸಂಘಟನೆಗಳ ಒಕ್ಕೂಟ

Kurubur Shantakumar with Chief Minister of Karmataka
 • ಬೆಂಗಳೂರಿನಲ್ಲಿ ರಾಷ್ಟ್ರೀಯ ಕೃಷಿ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ
 • ಅಭಿವೃದ್ಧಿ ಯೋಜನೆಗಳ ಬಗ್ಗೆ ಗಂಭೀರ ಚಿಂತನೆ ನಡೆಸಲು ರೈತರ ಒತ್ತಾಯ

ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕೃಷಿ ಸಮ್ಮೇಳನ ದೇಶದ ರೈತರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳ ಬಗ್ಗೆ ಗಂಭೀರ ಚಿಂತನೆಗೆ ವೇದಿಕೆಯಾಗಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದೆ.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಕುರುಬೂರು ಶಾಂತಕುಮಾರ್ ಇಂದು ಒತ್ತಾಯ ಪತ್ರ ಸಲ್ಲಿಸಿದರು.

ಈ ಪತ್ರದಲ್ಲಿರುವ  ಸಂಘಟನೆಯ ಒತ್ತಾಯಗಳು

 • ಕೃಷಿ ಉತ್ಪನ್ನಗಳಿಗೆ ಖಾತರಿ ಕನಿಷ್ಠ ಬೆಂಬಲ ಬೆಲೆ ಕಾಯಿದೆ ಜಾರಿಗೆ ತರುವ ವಿಷಯ.
 • ಡಾ ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಮಾನದಂಡ ಜಾರಿಗೊಳಿಸುವ ಬಗ್ಗೆ.
 • ಕಬ್ಬಿನ ಎಫ್ಆರ್‌ಪಿ ನಿಗದಿ ಮಾಡುವಾಗ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿ.
 • ಎಲ್ಲ ಕೃಷಿ ಉತ್ಪನ್ನಗಳಿಗೆ ಎಲ್ಲ ಪ್ರದೇಶಗಳಿ ಎಲ್ಲಾ ಬೆಳೆಗಳಿಗೂ ಫಸಲ್ ಭೀಮಾ ಬೆಳೆ ವಿಮೆ ಜಾರಿ ಮಾಡುವ ಬಗ್ಗೆ.
 • ರೈತರ ಕೃಷಿ ಸಾಲ ನೀತಿ ಬದಲಾವಣೆ ಮಾಡುವ ಬಗ್ಗೆ.
 • ರಾಜ್ಯ ಸರ್ಕಾರ ಮಳೆ ಹಾನಿ ಬೆಳೆ ನಷ್ಟ ಪರಿಹಾರ ಮಾನದಂಡ ಬದಲಿಸದೇ ಹೋದರೆ ರೈತರಿಗೆ ನ್ಯಾಯ ಸಿಗುವುದಿಲ್ಲ. 
 • ಮಳೆ ಹಾನಿ ಪ್ರದೇಶಗಳಿಗೆ ಮುಖ್ಯಮಂತ್ರಿ ಹಾಗೂ ಮಂತ್ರಿಗಳು ಭೇಟಿ ನೀಡಿ ವೀಕ್ಷಣೆ ಮಾಡಿದರೆ ಸಾಲದು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ (National Disaster Response Fund –NDRF) ಬೆಳೆ ನಷ್ಟ ಪರಿಹಾರ ಮಾನದಂಡವೂ ಬದಲಾಗಬೇಕು.
 • ಕುದುರೆ ಜೂಜು, ಬೆಟ್ಟಿಂಗ್, ಕ್ಯಾಸಿನೋಗಳಿಗೆ ವಿನಾಯಿತಿ ನೀಡಲಾಗಿದೆ. ಆದರೆ, ಬಡ ರೈತರ ಕೃಷಿ ಉತ್ಪನ್ನಗಳಾದ ಮಜ್ಜಿಗೆ, ಮೊಸರು, ಹಪ್ಪಳ, ರಸಗೊಬ್ಬರ, ಕೀಟನಾಶಕಗಳಿಗೆ ಜಿಎಸ್‌ಟಿ ವಿಧಿಸಿರುವುದು ಸಮಂಜಸವಲ್ಲ.
 •  ಒಂದೆಡೆ ಸರ್ಕಾರ ರೈತರಿಗೆ ಸಹಾಯಧನ, ಪ್ರೋತ್ಸಾಹಧನ ನೀಡುತ್ತದೆ. ಆದರೆ ಮತ್ತೊಂದೆಡೆ ಜಿಎಸ್‌ಟಿ ವಿಧಿಸಿ ವಸೂಲಿ ಮಾಡುತ್ತದೆ. ಇದು ಸರ್ಕಾರದ ದ್ವಂದ್ವ  ನೀತಿ. ಈ ದ್ವಂದ್ವವನ್ನು ನಿಲ್ಲಿಸಬೇಕು.
 • ಮೇಲ್ಕಂಡ ಅಂಶಗಳ ಬಗ್ಗೆ ರಾಷ್ಟ್ರೀಯ ಕೃಷಿ ಸಮ್ಮೇಳನದಲ್ಲಿ ಗಂಭೀರವಾಗಿ ಚಿಂತನೆ ನಡೆಸಬೇಕೆಂದು ರಾಜ್ಯದ ರೈತರು ಒತ್ತಾಯಿಸಿದ್ದಾರೆ.
ನಿಮಗೆ ಏನು ಅನ್ನಿಸ್ತು?
1 ವೋಟ್