ಕೇಂದ್ರ ಸರ್ಕಾರದಿಂದ 52,460 ಟನ್‌ ಈರುಳ್ಳಿ ಖರೀದಿ

Onion
  • 2022ರ ಮೇ 31ಕ್ಕೆ 52,460 ಟನ್ ಈರುಳ್ಳಿ ಖರೀದಿ
  • ಹಿಂಗಾರು ಅವಧಿಗೆ 2.5 ಲಕ್ಷ ಟನ್‌ಗಳ ಗುರಿ

ಭಾರತ ಸರ್ಕಾರ 2022 ಮೇ 31ಕ್ಕೆ ಕೊನೆಗೊಂಡಂತೆ ಈ ಸಾಲಿನ ಹೆಚ್ಚುವರಿ ದಾಸ್ತಾನು ಮಾಡಲು 52,460 ಟನ್‌ ಈರುಳ್ಳಿಯನ್ನು ಖರೀದಿಸಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸರ್ಕಾರ ಕಳೆದ ಕೆಲವು ವರ್ಷಗಳಿಂದ ಕಡಿಮೆ ಇಳುವರಿ ಅವಧಿಯ ಕೊರತೆಯನ್ನು ತುಂಬಲು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಡಲು ಹೆಚ್ಚುವರಿ ದಾಸ್ತಾನನ್ನು ಮಾಡುತ್ತಿದೆ. ಈ ಖರೀದಿಗಳನ್ನು ರಾಷ್ಟ್ರೀಯ ಕೃಷಿ ಸಹಕಾರ ಮಹಾ ಮಂಡಲದ ಮೂಲಕ ಮಾಡಲಾಗುತ್ತಿದೆ.

ಈ ದಾಸ್ತಾನಿನ ಗುರಿ 2022ರ ಹಿಂಗಾರು ಬೆಳೆಯ ಅವಧಿಗೆ 2.5 ಲಕ್ಷ ಟನ್‌ಗಳಾಗಿವೆ. ಇದನ್ನು 2022-23 ನಡುವೆ ಸಾಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಕೃಷಿ ಸಚಿವಾಲಯದ ಅಂದಾಜಿನ ಪ್ರಕಾರ ದೇಶದ ಈರುಳ್ಳಿ ಉತ್ಪನ್ನವು ಶೇ. 16.81 ಹೆಚ್ಚಳ ಕಂಡಿದೆ. 2021-22ರಲ್ಲಿ 26.64 ಲಕ್ಷ ಟನ್‌ಗಳ ಉತ್ಪಾದನೆಯಾಗಿತ್ತು. 2022-23ರಲ್ಲಿ ಈ ಉತ್ಪಾದನೆ 31.12 ಲಕ್ಷ ಟನ್‌ಗಳಾಗಬಹುದೆಂದು ಅಂದಾಜಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್