ತಮಿಳುನಾಡು | ದಲಿತ ರೈತರನ್ನು ಮುಟ್ಟದ ಪ್ರಧಾನ ಮಂತ್ರಿ ಬೆಳೆ ವಿಮಾ ಯೋಜನೆ

  • ಕೇವಲ ಶೇ. 1 ರಷ್ಟು ದಲಿತ ರೈತರು ಮಾತ್ರ ʻಪಿಎಂಎಫ್‌ಬಿವೈʼ ಫಲ ಪಡೆದಿದ್ದಾರೆ
  • ಪ. ಜಾತಿಗಳಿಗೆ ಹೋಲಿಸಿದರೆ ಪ. ಪಂಗಡದ ರೈತರು ಹೆಚ್ಚಿನ ಲಾಭ ಪಡೆದಿದ್ದಾರೆ

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ (ಪಿಎಂಎಫ್‌ಬಿವೈ)ಯಡಿ ಪರಿಶಿಷ್ಟ ಜಾತಿ ರೈತರನ್ನು ಒಳಗೊಳ್ಳುವಲ್ಲಿ ತಮಿಳುನಾಡು ಸರ್ಕಾರ ಅತ್ಯಂತ ಹಿಂದೆ ಉಳಿದಿದೆ.  

ಬೆಳೆ ವಿಮಾ ಯೋಜನೆ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಅಂಕಿ ಅಂಶಗಳ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ (2019-2021) ಈ ಯೋಜನೆಯ ಫಲ ಪಡೆದ ಪರಿಶಿಷ್ಟ ಜಾತಿಯವರ ಪ್ರಮಾಣ ಶೇ 1 ಮಾತ್ರ.

2021ರ ಹಿಂಗಾರಿನಲ್ಲಿ ಪಿಎಂಎಫ್‌ಬಿವೈ ವೆಬ್‌ಸೈಟ್‌ನಲ್ಲಿ ತಮಿಳುನಾಡಿನ ಹೆಚ್ಚಿನ ರೈತರು ನೋಂದಣಿ  ಮಾಡಿಕೊಂಡಿದ್ದರು. ಆದರೆ, ಕೊಯಮತ್ತೂರು, ಈರೋಡ್, ಕೃಷ್ಣಗಿರಿ, ತೇಣಿ ಹಾಗೂ ತಿರುಪ್ಪೂರ್ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿಯ ಒಬ್ಬ ರೈತರೂ ಈ ಯೋಜನೆಯ ಫಲ ಪಡೆದಿಲ್ಲ. 

ಪರಿಶಿಷ್ಟ ಜಾತಿಗಳಿಗೆ ಹೋಲಿಸಿದರೆ ಪರಿಶಿಷ್ಟ ಪಂಗಡದ ಹೆಚ್ಚು ರೈತರು ಈ ಯೋಜನೆಯ ಫಲ ಪಡೆದಿದ್ದಾರೆ. ಈ ಯೋಜನೆಯಲ್ಲಿ ಪರಿಶಿಷ್ಟ ಪಂಗಡಗಳ ರೈತರ ಒಳಗೊಳ್ಳುವಿಕೆ ಶೇಕಡಾ 4.53 ರಿಂದ 10.15ರವರೆಗೆ ಹೆಚ್ಚಾಗಿದೆ. ತಮಿಳುನಾಡಿನ ಈ ಸ್ಥಿತಿ ಛತ್ತೀಸ್‌ಗಢ, ತ್ರಿಪುರಾದಲ್ಲಿಯೂ ಇದೆ. ಈ ಎರಡೂ ರಾಜ್ಯಗಳಲ್ಲಿ ಪಿಎಂಎಫ್‌ಬಿವೈನಲ್ಲಿ ದಾಖಲಾಗಿರುವ ಪರಿಶಿಷ್ಟ ಜಾತಿಯ ರೈತರ ಸಂಖ್ಯೆ ಎರಡಂಕಿಯೂ ದಾಟಿಲ್ಲ. 

ಈ ಸುದ್ದಿ ಓದಿದ್ದೀರಾ?: ಎಂಎಸ್‌ಪಿ ಸಮಿತಿಯಲ್ಲಿ ಪಂಜಾಬ್ ರೈತರಿಗಿಲ್ಲ ಸ್ಥಾನ; ಇರುವವರೆಲ್ಲ ರೈತ ವಿರೋಧಿಗಳು; ಸಂಸದೆ ಹರ್‌ಸಿಮ್ರತ್‌ ಕೌರ್‌

ಇನ್ನು, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಭತ್ತ ಪ್ರಮುಖ ಬೆಳೆ. ಆದರೆ ಪರಿಶಿಷ್ಟ ಜಾತಿಯ ರೈತರು ಹೆಚ್ಚಾಗಿ ಭತ್ತ ಬೆಳೆಯುವುದಿಲ್ಲ. ಅವರು ರಾಗಿ ಮತ್ತು ಎಣ್ಣೆ ಕಾಳುಗಳನ್ನು ಬೆಳೆಯುವುದರಿಂದ ಈ ಯೋಜನೆಯ ಫಲ ಪಡೆಯಲು ಸಾಧ್ಯವಾಗುತ್ತಿಲ್ಲ.

2021ರ ಮುಂಗಾರಿನಲ್ಲಿ ತಿರುವಣ್ಣಾಮಲೈನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ದಾಖಲಾದ ರೈತರ ಪೈಕಿ ಶೇಕಡಾ 36 ರಷ್ಟು ರೈತರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಇಲ್ಲಿ ರಾಗಿ ಪ್ರಮುಖ ಬೆಳೆ. ಹಾಗಾಗಿ ಬಹುತೇಕ ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. 

ನಿಮಗೆ ಏನು ಅನ್ನಿಸ್ತು?
1 ವೋಟ್