ಯಾದಗಿರಿ: ಅತಿವೃಷ್ಟಿಯಿಂದಾಗಿ 12 ಸಾವಿರ ಹೆಕ್ಟೇರ್‌ ಬೆಳೆ ನಾಶ; ಹತ್ತಿ, ಹೆಸರು ಬೆಳೆಗಳಿಗೆ ಅಪಾರ ಹಾನಿ

Rains damage over 12K hectares of standing crops in Yadgir district
  • 12,181.71 ಹೆಕ್ಟೇರ್‌ ಭೂಮಿಯಲ್ಲಿದ್ದ ಬೆಳೆ ನಾಶ
  • ಯಾದಗಿರಿ ತಾಲ್ಲೂಕಿನಲ್ಲೇ 8,629.87 ಹೆಕ್ಟೇರ್ ಅಲ್ಪಾವಧಿ ಬೆಳೆ ಹಾನಿ

ಈ ಬಾರಿಯ ಮುಂಗಾರಿನ ಮಳೆ ಪ್ರಭಾವದಿಂದಾಗಿ ಅನೇಕ ಜಿಲ್ಲೆಗಳಲ್ಲಿ ವಿವಿಧ ಬೆಳೆಗಳು ಹಾನಿಗೀಡಾಗಿರುವ ವರದಿಗಳ ಬೆನ್ನಲ್ಲೇ ಯಾದಗಿರಿಯ ಹಾನಿಯ ಚಿತ್ರಗಳು ಹೊರಬಂದಿವೆ. ಈ ಜಿಲ್ಲೆಯೊಂದರಲ್ಲೇ ಸುಮಾರು 12,181.71 ಹೆಕ್ಟೇರ್‌ ಭೂಮಿಯಲ್ಲಿದ್ದ ನಿಂತ ಬೆಳೆ ನಾಶವಾಗಿರುವ ಸುದ್ದಿ ಜನರನ್ನು ಚಿಂತೆಗೀಡುಮಾಡಿದೆ.

ಜುಲೈ ತಿಂಗಳಿನಲ್ಲಿ ಘಟ್ಟಿಸಿದ ವಿಪರೀತ ಮಳೆಯಿಂದಾಗಿ ಜಿಲ್ಲೆಯಲ್ಲಿ ಅನೇಕ ಬೆಳೆಗಳು ತೀವ್ರ ಹಾನಿಗೀಡಾಗಿವೆ. ಮುಖ್ಯವಾಗಿ, 5,325.71 ಹೆಕ್ಟೇರ್‌ ವಿಸ್ತಾರದಲ್ಲಿದ್ದ ಹತ್ತಿ, 2,577.04 ಹೆಕ್ಟೇರ್ ವಿಸ್ತಾರದಲ್ಲಿದ್ದ ತೊಗರಿ, 25.44  ಹೆಕ್ಟೇರ್ ವಿಸ್ತಾರದಲ್ಲಿದ್ದ ಕಬ್ಬು, 62.48 ಹೆಕ್ಟೇರ್ ವಿಸ್ತಾರದಲ್ಲಿದ್ದ ಸಜ್ಜೆ, 18.80 ಹೆಕ್ಟೇರ್ ವಿಸ್ತಾರದಲ್ಲಿದ್ದ ಭತ್ತ ಮತ್ತು 41,172 ಹೆಕ್ಟೇರ್ ವಿಸ್ತಾರದಲ್ಲಿದ್ದ  ಹೆಸರು ಗಣನೀಯ ಹಾನಿಗೀಡಾಗಿವೆ.

ಅಲ್ಪಾವಧಿಯ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಹೆಸರು ತೀವ್ರ ಹಾನಿಗೀಡಾಗಿದ್ದು ರೈತರನ್ನು ಕಂಗಾಲಾಗಿಸಿದೆ. ಯಾದಗಿರಿ ತಾಲ್ಲೂಕು ಒಂದರಲ್ಲೇ ಒಟ್ಟಾರೆ 8,629.87 ಹೆಕ್ಟೇರ್‌ನಷ್ಟು ಅಲ್ಪಾವಧಿ ಬೆಳೆಗಳು ನೆಲಕಚ್ಚಿವೆ. ಇದರಲ್ಲಿ 4,650.47 ಹೆಕ್ಟೇರ್‌ ಹತ್ತಿ ಬೆಳೆ ಹಾನಿಗೀಡಾಗಿದ್ದರೆ, 3163.40 ಹೆಕ್ಟೇರ್‌ ಹೆಸರು ಬೆಳೆ ನಾಶವಾಗಿದೆ. ಹಾಗೆಯೇ ಗುರುಮಿಟ್ಕಲ್‌ ತಾಲ್ಲೂಕಿನಲ್ಲಿ  1,376 ಹೆಕ್ಟೇರ್ ತೊಗರಿ, 985.40 47 ಹೆಕ್ಟೇರ್ ಹೆಸರು ಬೆಳೆಗಳು ಹಾಳಾಗಿವೆ ಎಂದು ಕೃಷಿ ಇಲಾಖೆ ಹೇಳಿದೆ. 

ಹಾನಿಗೀಡಾಗಿರುವ ರೈತರು ಸದ್ಯಕ್ಕೆ ಸರ್ಕಾರದತ್ತ ಮುಖ ಮಾಡಿದ್ದು, ಪರಿಹಾರಕ್ಕಾಗಿ ಎದುರು ನೋಡುತ್ತಿದ್ದಾರೆ. ಜಿಲ್ಲೆಯನ್ನು “ಅತಿವೃಷ್ಟಿ ಪ್ರಭಾವಿತ” ಎಂದು ಘೋಷಿಸಿ, ಕನಿಷ್ಠ ಎಕರೆಗೆ 50,000 ರೂಪಾಯಿ ಪರಿಹಾರ ಘೋಷಿಸಬೇಕೆಂದು ರೈತ ನಾಯಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸರ್ಕಾರ ತುರ್ತು ಕ್ರಮ ತೆಗೆದುಕೊಳ್ಳದೇ ಹೋದಲ್ಲಿ ಆಗುವ ರೈತರ ಜೀವಹಾನಿಗಳಿಗೆ ಸರ್ಕಾರವೇ ಹೊಣೆ ಎಂದು ಯಾದಗಿರಿಯ ರೈತರು ಹೇಳುತ್ತಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್