ದೆಹಲಿಯಲ್ಲಿ ಎಸ್‌ಕೆಎಂ ಸಭೆ: ಬೆಂಬಲ ಬೆಲೆ ಖಾತರಿಗೆ ಹೋರಾಟ ನಮ್ಮ ಕರ್ತವ್ಯ: ಕುರುಬೂರು ಶಾಂತಕುಮಾರ್

ರಾಜಕೀಯ ಪಕ್ಷಗಳು ವಾಮ ಮಾರ್ಗಗಳ ಮೂಲಕ ಚಳುವಳಿ ಒಳಗೆ ಸೇರಿ, ದಿಕ್ಕು ತಪ್ಪಿಸುವ ಪ್ರಯತ್ನಮಾಡುತ್ತಿವೆ. ನಾವೆಲ್ಲರೂ ಕೂಡಿ ಇದಕ್ಕೆ ಕಡಿವಾಣ ಹಾಕಬೇಕು.
Samyukata Kisan Mosrcha Meeting in Delhi
  • ರಾಜಕೀಯ ಪಕ್ಷಗಳು ಚಳವಳಿಗಳನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿವೆ 
  • ರಾಜಕೀಯ ಪಕ್ಷಗಳ ನೆರಳಿನಲ್ಲಿರುವವರನ್ನು ಎಸ್‌ಕೆಎಂನಿಂದ ದೂರವಿಡಬೇಕು.

ನವದೆಹಲಿಯ ಎನ್ ಡಿ ತಿವಾರಿ ಭವನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಸಭೆ ನಡೆಸಿ, ಹಲವು ಮಹತ್ವದ ತೀರ್ಮಾನಗಳನ್ನು ಕೈಗೊಂಡಿತು. ಮಂಗಳವಾರ ನಡೆದ ಸಭೆಯಲ್ಲಿ "ರಾಜಕೀಯ ಪಕ್ಷಗಳ ನೆರಳಿನಲ್ಲಿ ಕೆಲಸ ಮಾಡುವ ಮುಖಂಡರನ್ನು ಎಸ್‌ಕೆಎಂನಿಂದ  ದೂರವಿಡಬೇಕು, ಹಾಗೆಯೇ ಚುನಾವಣೆಯಲ್ಲಿ ನಿಂತು ಸೋತ ನಂತರ ಮತ್ತೆ ರೈತ ಹೋರಾಟಕ್ಕೆ ಬರುವ ಮುಖಂಡರನ್ನೂ ಎಸ್‌ಕೆಎಂನಿಂದ ಹೊರಗೆ ಇಡಬೇಕು" ಎಂದು ತೀರ್ಮಾನಿಸಲಾಯಿತು.  

ಆಗಸ್ಟ್ 22ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ರೈತರ ಬೃಹತ್ ರ್ಯಾಲಿ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.  ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಜಾರಿಗಾಗಿ ಮತ್ತು ರೈತ ಹೋರಾಟದಲ್ಲಿ ಮೃತರಾದ ಕುಟುಂಬಗಳಿಗೆ ಪರಿಹಾರ ಮತ್ತಿತರ ವಿಚಾರಗಳ ಬಗ್ಗೆ ಹೋರಾಟ ಮುಂದುವರಿಸಲು ತೀರ್ಮಾನಿಸಲಾಯಿತು.

ಸಂಯುಕ್ತ ಕಿಸಾನ್ ಮೋರ್ಚಾ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾಗವಹಿಸಿದ್ದ ಕುರುಬೂರು ಶಾಂತಕುಮಾರ್ ಮಾತನಾಡಿ, “ದೇಶದ ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗೆ ತರುವಂತೆ ಹೋರಾಟ ಮಾಡುವುದು ರೈತ ಸಂಘಟನೆಗಳ ಕರ್ತವ್ಯ ಎಂದು ಭಾವಿಸಬೇಕು. ರಾಜಕೀಯ ಪಕ್ಷಗಳು ವಾಮಮಾರ್ಗಗಳ ಮೂಲಕ ಚಳವಳಿ ಒಳಗೆ ಸೇರಿ, ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿವೆ. ನಾವೆಲ್ಲರೂ ಕೂಡಿ ಇದಕ್ಕೆ ಕಡಿವಾಣ ಹಾಕಬೇಕು. ದೇಶದ ರೈತರ ಹಿತದೃಷ್ಟಿಯಿಂದ ಪಕ್ಷಾತೀತ ಹೋರಾಟ ಮಾಡುವುದು ಅತ್ಯಗತ್ಯ" ಎಂದು

ಸಭೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಮುಖಂಡ ದಲ್ಜಿತ್ ಸಿಂಗ್ದಲೈವಾಲಾ, ಶಿವಕುಮಾರ್ ಕಕ್ಕ, ಅಭಿಮನ್ಯು ಕೋಹರ, ಕೆ ಬಿ ಬಿಜು ಸೇರಿದಂತೆ ದೇಶದ ವಿವಿಧ ರಾಜ್ಯಗಳ ಮುನ್ನೂರಕ್ಕೂ ಹೆಚ್ಚು ರೈತ ಮುಖಂಡರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್