ವಿದ್ಯುತ್ ಅವಘಡದಿಂದ ಕಬ್ಬು ಬೆಳೆ ನಾಶ | ರೈತ ಕಂಗಾಲು

Kabbu bele haani

ಕಲ್ಬುರ್ಗಿ ಕಮಲಾಪುರ ತಾಲೂಕಿನ ಕಿನ್ನಿ ಸಡಕ್ ಗ್ರಾಮದಲ್ಲಿ ವಿದ್ಯುತ್ ಅವಘಡ ಸಂಭವಿಸಿ ಅಪಾರ ಪ್ರಮಾಣದ ಕಬ್ಬು ಬೆಳೆ ಬೆಂಕಿಗೆ ಆಹುತಿಯಾಗಿದ್ದು, ವರ್ಷದ ವರಮಾನ ಕಳೆದುಕೊಂಡ ರೈತ, ಸರ್ಕಾರದ ಪರಿಹಾರಕ್ಕೆ ಮನವಿ ಮಾಡುತ್ತಿದ್ದಾರೆ.‌

ಕಲ್ಬುರ್ಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕಿನ್ನಿ ಸಡಕ್ ಗ್ರಾಮದ ರೈತ ರಾಮಚಂದ್ರ ಅವರಿಗೆ ಸೇರಿದ ನಾಲ್ಕು ಎಕರೆ ಕಬ್ಬು ಬೆಳೆ ಶಾರ್ಟ್‌ಸರ್ಕ್ಯೂಟ್‌ನಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿದ್ಯುತ್ ತಂತಿ ಹೊಲದ ಸಮೀಪದಿಂದ ಹಾದು ಹೋಗಿರುವುದರಿಂದ ಈ ಪ್ರಮಾದ ಸಂಭವಿಸಿದೆ.

Image
ಸುಟ್ಟು ಕರಕಲಾದ ಬೆಳೆಯ ನಡುವೆ ರೈತ
ಸುಟ್ಟು ಕರಕಲಾದ ಕಬ್ಬಿನ ಬೆಳೆಯ ನಡುವೆ ರೈತ

ಕಬ್ಬು ಬೆಳೆಯಲಾದ ಜಮೀನಿನಲ್ಲಿ ವಿದ್ಯುತ್ ತಂತಿ ಹಾದು ಹೋಗಿದ್ದು, ಇದರಲ್ಲಿ ಕಾಣಿಸಿಕೊಂಡ ಕಿಡಿಯಿಂದ ಬೆಂಕಿ ಕಾಣಿಸಿಕೊಂಡು ಗಾಳಿಗೆ ಇಡೀ ಕಬ್ಬಿನ ಗದ್ದೆಗೆ ವ್ಯಾಪಿಸಿದೆ. ಬೆಂಕಿಯಿಂದಾಗಿ ಇಡೀ ಪ್ರದೇಶದಲ್ಲಿ ಹೊಗೆ ಆವರಿಸಿತ್ತು.  

"ವಿದ್ಯುತ್‌ ತಂತಿಯಲ್ಲಿನ ಬೆಂಕಿ, ಗಾಳಿಯಿಂದ ಇಡೀ ಹೊಲವನ್ನು ಆವರಿಸಿದೆ. ಘಟನೆ ವೇಳೆ ಜಮೀನಿನ ಬಳಿ ಯಾರೂ ಇರಲಿಲ್ಲ. ಕಬ್ಬು ಬೆಳೆ ಹಾನಿ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ರೈತ ರಾಮಚಂದ್ರ ಹೇಳಿದರು.

ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿ ನಾಶವಾದ ಕಬ್ಬು ಬೆಳೆಗೆ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಿಕೊಡಬೇಕೆಂದು ರೈತ ಹಾಗೂ ಕುಟುಂಬ ಸದಸ್ಯರು ಮನವಿ ಮಾಡಿದ್ದಾರೆ.

Image
ಸುಟ್ಟು ಕರಕಲಾದ ಕಬ್ಬು ಬೆಳೆ ಅವಶೇಷ
ಸುಟ್ಟು ಕರಕಲಾದ ಕಬ್ಬು ಬೆಳೆ 
ನಿಮಗೆ ಏನು ಅನ್ನಿಸ್ತು?
3 ವೋಟ್