ದೆಹಲಿಗರನ್ನು ಕೃಷಿಕರನ್ನಾಗಿ ಮಾಡಲು ಹೊರಟ ಆಮ್ ಆದ್ಮಿ ಪಕ್ಷ : 'ನಗರ ಕೃಷಿ'ಯ ಆರಂಭ

ಇದರಲ್ಲಿ ಮಹಿಳೆಯರ ಪಾತ್ರ ಹೆಚ್ಚಿರುತ್ತದೆ. ಅವರ ಆದಾಯವೂ ವೃದ್ಧಿಯಾಗುತ್ತದೆ. ಈ ಮೂಲಕ ಐದು ವರ್ಷಗಳಲ್ಲಿ 25,000 ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ. ತರಬೇತಿಗೆ ಬಂದವರಿಗೆ ಒಟ್ಟಾರೆ 10,000 ನಗರ ಕೃಷಿ ಕಿಟ್ ಗಳನ್ನು ವಿತರಿಸಲಾಗುತ್ತದೆ. ಅವುಗಳ ಪೈಕಿ 5,000 ಮಳೆಗಾಲದ ಕಿಟ್‌ಗಳಾದರೆ, 5,000 ಬೇಸಿಗೆ ಕಾಲದ ಕಿಟ್‌ಗಳಾಗಿರಲಿವೆ.
New Delhi

ದೆಹಲಿಯ ಆಮ್ ಆದ್ಮಿ ಪಕ್ಷ ಇನ್ನೊಂದು ಜನಪರ ಸಾಹಸಕ್ಕೆ ಕೈ ಹಾಕಿದೆ. ದೆಹಲಿ ಪ್ರಜೆಗಳನ್ನು ಕೃಷಿಕರನ್ನಾಗಿ ಮಾಡಲು ತಯಾರಿ ನಡೆಸಿದೆ. “ನಗರ ಕೃಷಿ” ಪರಿಕಲ್ಪನೆಯನ್ನು ಆಚರಣೆಗೆ ತರಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಐದು ವರ್ಷಗಳಲ್ಲಿ 25,000 ಜನರಿಗೆ ಉದ್ಯೋಗ ಒದಗಿಸಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Image
Urban farming Concept New Delhi

ದೆಹಲಿಯ ಜನರು ತಮ್ಮ ಮನೆಯ, ಮಾಳಿಗೆಗಳ ಲಭ್ಯ ಜಾಗಗಳಲ್ಲಿ ಅಗತ್ಯವಾದ ದೈನಂದಿನ ಬಳಕೆಯ ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆದುಕೊಳ್ಳುವುದು ಈ ಯೋಜನೆಯ ಸಾರಾಂಶ.  ಈ ಯೋಜನೆಯಲ್ಲಿ ಎರಡು ವಿಭಾಗಗಳಿವೆ. ಮೊದಲನೆಯದಾಗಿ, ಅವರವರ ಮನೆಯ ಅಗತ್ಯಗಳಿಗೆ ಅನುಗುಣವಾಗಿ ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆದುಕೊಳ್ಳುವ “ಮನೆ ಕೃಷಿಕರ” ವಿಭಾಗ ಮತ್ತು ಮನೆ ಅಥವಾ ಸುತ್ತಮುತ್ತ ಸ್ವಲ್ಪ ಹೆಚ್ಚು ಜಾಗವಿದ್ದಲ್ಲಿ ಹೆಚ್ಚು ಹಣ್ಣು, ತರಕಾರಿ, ಸೊಪ್ಪುಗಳನ್ನು ಬೆಳೆದು ಅದನ್ನು ಮಾರಾಟ ಮಾಡುವ “ವ್ಯಾಪಾರಿ ಕೃಷಿಕರ” ವಿಭಾಗ.

ಇದರಿಂದ ಮನೆಯ ಅಗತ್ಯಗಳನ್ನು ಸ್ವಂತ ಕೃಷಿಯ ಮೂಲಕ ಪಡೆಯುವ ಜನರಿಗೆ ದೈನಂದಿನ ಖರ್ಚು ವೆಚ್ಚಗಳಲ್ಲಿ ಉಳಿತಾಯ ಆಗುತ್ತದೆ. ಇನ್ನು ಉಳಿದವರು ಹೆಚ್ಚು ಬೆಳೆದು ಮಾರಾಟ ಮಾಡುವುದರಿಂದ ಅವರು ಹೆಚ್ಚಿನ ಆದಾಯ ಗಳಿಸಬಹುದು. ಇದರಲ್ಲಿ ಮಹಿಳೆಯರ ಪಾತ್ರ ಹೆಚ್ಚಿರುತ್ತದೆ. ಅವರ ಆದಾಯವೂ ವೃದ್ಧಿಯಾಗುತ್ತದೆ. ಈ ಮೂಲಕ ಮುಂದಿನ ಕೆಲವೇ ವರ್ಷಗಳಲ್ಲಿ ಸಾವಿರಾರು ಉದ್ಯೋಗ ಸೃಷ್ಟಿಯಾಗುತ್ತವೆ ಎಂದು ವಿವರಿಸಿದರು.

ಇವರನ್ನು ಏಕಾಏಕಿ ಇದರಲ್ಲಿ ತೊಡಗಿಸುವುದಿಲ್ಲ. ಗೃಹ ಕೃಷಿ ಆಯ್ಕೆ ಮಾಡಿಕೊಂಡವರಿಗೆ ಒಟ್ಟಾರೆ 400 ತರಬೇತಿ ಶಿಬಿರಗಳನ್ನು ಯೋಜಿಸಲಾಗಿದೆ. ಹಾಗೆಯೇ, ವ್ಯಾಪಾರಿ ಕೃಷಿಕರಿಗೆ 600 ಶಿಬಿರಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಹೊರಗಿನಿಂದ ತಜ್ಞರನ್ನು ನೇಮಿಸಲಾಗಿದೆ. ಇಡೀ ಯೋಜನೆಯ ಉಸ್ತವಾರಿಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ ವಹಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? | ಗರ್ಭಪಾತ ನಿಷೇಧ | ಬೇರೆ ರಾಜ್ಯಗಳಿಗೆ ಪ್ರಯಾಣಿಸುವ ಮಹಿಳೆಯರ ರಕ್ಷಣೆ ಸರ್ಕಾರದ ಹೊಣೆ ಎಂದ ಜೋ ಬೈಡನ್‌

ಇಲ್ಲಿನ ತರಬೇತಿಗೆ ಬಂದವರಿಗೆ ಒಟ್ಟಾರೆ 10,000 ನಗರ ಕೃಷಿ ಕಿಟ್‌ಗಳನ್ನು ವಿತರಿಸಲಾಗುತ್ತದೆ. 5,000 ಮಳೆಗಾಲದ ಕಿಟ್‌ಗಳು ಮತ್ತು 5,000 ಬೇಸಿಗೆ ಕಾಲದ ಕಿಟ್‌ಗಳು. ಪ್ರತಿ ಕಿಟ್ 5-25 ಗ್ರಾಂಗಳವರೆಗೆ 10 ತರಹದ ತರಕಾರ ಬೀಜಗಳನ್ನೂ ಮತ್ತು ತಲಾ 100 ಗ್ರಾಂ ಉಳ್ಳ ಮೂರು ತರಹದ ಜೈವಿಕ ಫಲವತ್ಕಾರಕಗಳನ್ನು ಹಾಗೂ ಒಂದು ಕೇಜಿ ಜೈವಿಕ ಗೊಬ್ಬರವನ್ನೂ ಒಳಗೊಂಡಿರುತ್ತದೆ. ಇದರ ಜೊತೆಯಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬೆಳೆಯುವ ಮಾಹಿತಿ ಪುಸ್ತಕವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.

ಕಳೆದ 26ನೇ ಮಾರ್ಚ್ 2021ರಂದು ಮಂಡಿಸಲಾದ ಬಜೆಟ್ ಭಾಷಣದಲ್ಲಿ ಉಪ ಮುಖ್ಯ ಮಂತ್ರಿ ಮನೀಶ್ ಸಿಸೋಡಿಯ ಈ ಯೋಜನೆಯನ್ನು ವಿಧಾನ ಸಭೆಯಲ್ಲಿ ಪ್ರಕಟಿಸಿದ್ದರು. ಇದನ್ನು ಪರಿಸರ ಮಂತ್ರಿ ಗೋಪಾಲ್ ರಾಯ್ ಮುಂದುವರೆಸಿದ್ದರು. ಕೇಜ್ರಿವಾಲ್ ಅವರ ಯೋಜನೆಯ ಬಗ್ಗೆ ಮಾತನಾಡಿದ ದೆಹಲಿಯ ಆಟೋ ಚಾಲಕನೊಬ್ಬ,, ಇದರ ಹಿಂದೆ ಅನೇಕರ ಶ್ರಮ, ಅಪಾರ ಹಿನ್ನೆಲೆ ಕಾರ್ಯ ನಡೆದಿರುವುದು ಗೋಚರವಾಗುತ್ತದೆ ಎಂದು ಪ್ರಶಂಸಿಸಿದ್ದಾನೆ.

ನಿಮಗೆ ಏನು ಅನ್ನಿಸ್ತು?
1 ವೋಟ್