ಊಟಿಯಾದ ಸಿಲಿಕಾನ್‌ ವ್ಯಾಲಿ; ಉಣ್ಣೆ ಬಟ್ಟೆಗಳ ಮೊರೆ ಹೋದ ಬೆಂಗಳೂರಿಗರು

  • 2012ರ ನಂತರ ನವೆಂಬರ್‌ನಲ್ಲಿ ಕನಿಷ್ಠ ತಾಪಮಾನ ದಾಖಲು
  • ಡಿಸೆಂಬರ್‌ನಲ್ಲಿ ಚಳಿಯ ತೀವ್ರತೆ ಹೆಚ್ಚಾಗಲಿದೆ; ಹವಾಮಾನ ಇಲಾಖೆ

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಚಳಿ ತೀವ್ರಗೊಳ್ಳುತ್ತಿರುವ ಕಾರಣ ನಗರದ ಜನರ ಮೈನಡುಗಲು ಆರಂಭವಾಗಿದೆ. ಹತ್ತು ವರ್ಷಗಳ ನಂತರ ನಗರದಲ್ಲಿ 13.9 ಡಿಗ್ರಿ ಸೆಲ್ಸಿಯಸ್‌ ನ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.  2012ರ ನಂತರ  ದಾಖಲಾಗಿರುವ ನವೆಂಬರ್‌ನ ಕನಿಷ್ಠ ತಾಪಮಾನ ಇದಾಗಿದೆ. 

ಸೋಮವಾರದಂದು ನಗರದಲ್ಲಿ ಗಂಟೆ ಹತ್ತಾದರೂ ಹಲವೆಡೆ ಸೂರ್ಯನ ದರ್ಶನವೇ ಆಗಿರಲಿಲ್ಲ. ಗಿರಿಧಾಮಗಳಲ್ಲಿ ಇರುವಷ್ಟೇ ತಾಪಮಾನ ಬೆಂಗಳೂರಿನಲ್ಲೂ ದಾಖಲಾಗಿತ್ತು. ನಗರದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ತಂಪಾದ ವಾತಾವರಣ ಜನರ ಮೈನಡುಗಿಸುವಂತೆ ಮಾಡುತ್ತಿದೆ. ಚಳಿ ಮತ್ತು ಮಳೆಯಿಂದಾಗಿ ಕೈಗಳು ಮಂಜುಗಡ್ಡೆಯಂತೆ ಮರಗಟ್ಟಿವೆ.

The circulation over BOB near North TN and South AP as visible from air while flying over.
Bad weather over North and North West.#ChennaiRain #bangalorerains #chennaiweatherupdates pic.twitter.com/djprlO6QiU

ಈ ಸುದ್ದಿ ಓದಿದ್ದೀರಾ?: ಮದುವೆಯಾಗುತ್ತಿದ್ದೀರಾ? ಹಾಗಾದರೆ ಹೀಗೂ ಒಂದು ಅವಕಾಶವಿದೆ

ಬೆಳಿಗ್ಗೆ, ಸಂಜೆ ಹಾಗೂ ರಾತ್ರಿ ವೇಳೆ ಅಲ್ಲದೇ ಮಧ್ಯಾಹ್ನವೂ ಚಳಿ ಹೆಚ್ಚಾಗಿರುವುದರಿಂದ ಬೆಂಗಳೂರಿಗರು ಸ್ವೆಟರ್‌, ಕಿವಿಗೆ ಹತ್ತಿ ಹಾಗೂ ಟೋಪಿಯ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಅದಲ್ಲದೆ ಚಳಿ, ಶೀತದ ವಾತಾವರಣವು ಹೆಚ್ಚಾಗಿ ವಯಸ್ಕರು ಮತ್ತು ಮಕ್ಕಳ ಮೇಲೆ ಪರಿಣಾಮ ಬೀರುವುದರಿಂದ ಕಷಾಯ ಮತ್ತಿತ್ತರ ಮನೆ ಮದ್ದುಗಳನ್ನು ಅವಲಂಬಿಸಿದ್ದಾರೆ. 

ಮಂಗಳವಾರದಿಂದ ಶುಕ್ರವಾರದವರೆಗೆ ನಗರದಲ್ಲಿ ಭಾಗಶಃ ಮೋಡ ಮುಸುಕಿದ ವಾತಾವರಣ ಇರಲಿದ್ದು, ಸಾಧಾರಣ ಮಳೆ ಸುರಿಯುವ ಸಾಧ್ಯತೆಯಿದೆ. ಡಿಸೆಂಬರ್‌ನಲ್ಲಿ ಚಳಿಯ ತೀವ್ರತೆ ಮತ್ತಷ್ಟು ಹೆಚ್ಚಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

2012ರ ನವೆಂಬರ್ 21ರಂದು ಬೆಂಗಳೂರಿನಲ್ಲಿ 13.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಅದಾದ ಬಳಿಕ ನವೆಂಬರ್ ತಿಂಗಳಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಇದಾಗಿದೆ. 1967ರ ನವೆಂಬರ್ 15ರಂದು ಬೆಂಗಳೂರಿನಲ್ಲಿ 9.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನದ ದಾಖಲೆ ನಿರ್ಮಾಣವಾಗಿತ್ತು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app