
- ಬಿಎಂಆರ್ಸಿಎಲ್ಗೆ ಜೂನ್ 6 ರಂದು ಒಟ್ಟು ₹ 1.2 ಕೋಟಿ ಆದಾಯ
- ಪ್ರತಿದಿನ 4.5 ಲಕ್ಷ ಮಂದಿ 'ನಮ್ಮ ಮೆಟ್ರೋ'ದಲ್ಲಿ ಪ್ರಯಾಣಿಸುತ್ತಿದ್ದಾರೆ
ರಾಜ್ಯ ರಾಜಧಾನಿಯಲ್ಲಿ ಕೋವಿಡ್ ಸೋಂಕು ಕಡಿಮೆಯಾದ ಬಳಿಕ ಮೊದಲ ಬಾರಿಗೆ ಜುಲೈ 4ರಂದು 'ನಮ್ಮ ಮೆಟ್ರೋ'ದಲ್ಲಿ ದಾಖಲೆಯ 5.07 ಲಕ್ಷ ಜನರು ಪ್ರಯಾಣಿಸಿರುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ತಿಳಿಸಿದೆ.
ಕೋವಿಡ್ನಿಂದ ಮೆಟ್ರೋ ಸಂಚಾರ ನಿಲ್ಲಿಸಿದ್ದ ಬಿಎಂಆರ್ಸಿಎಲ್ ಸೆಪ್ಟೆಂಬರ್ 7, 2020ರಂದು ಸೇವೆ ಪುನಾರಾರಂಭಿಸಿತ್ತು. ಕಳೆದ ಎರಡು ತಿಂಗಳಿನಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಜೂನ್ 6ರಂದು ಬಿಎಂಆರ್ಸಿಎಲ್ಗೆ ಒಟ್ಟು ₹ 1.2 ಕೋಟಿ ಆದಾಯವಾಗಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುತ್ತದೆ. ಕೋವಿಡ್ ಸೋಂಕು ಕಡಿಮೆಯಾದ ಬಳಿಕ ಹಲವು ನೌಕರರು ಮೆಟ್ರೋದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಸದ್ಯಕ್ಕೆ ಪ್ರತಿದಿನ ಸರಾಸರಿ 4.5 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದಾರೆ ಎಂದು ಬಿಎಂಆರ್ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಜುಲೈ 21ರಂದು ಹಲವೆಡೆ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್ ವ್ಯತ್ಯಯ: ಬೆಸ್ಕಾಂ
ನಮ್ಮ ಮೆಟ್ರೋ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 5 ಗಂಟೆಯಿಂದ ರಾತ್ರಿ 11ರವರೆಗೆ ಸೇವೆ ನೀಡುತ್ತಿದೆ. ಭಾನುವಾರದಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 11ರವರೆಗೆ ಸೇವೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.