ಬೆಂಗಳೂರು | ಐದು ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಗೆ ಬಿಬಿಎಂಪಿ ಚಿಂತನೆ

  • ಶೇ. 40ಕ್ಕಿಂತ ಹೆಚ್ಚು ಬೀದಿ ವ್ಯಾಪಾರಿ ಹೊಂದಿರುವ ಪಟ್ಟಣದಲ್ಲಿ ಸಮಿತಿ ರಚಿಸಬೇಕು
  • ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಮೂಲಕ ಮಾರಾಟ ಸ್ಥಳ ಗುರುತಿಸುವಿಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಐದು ವರ್ಷಗಳ ನಂತರ ಬೀದಿ ಬದಿ ವ್ಯಾಪಾರಿಗಳು ಮತ್ತು ಮಾರಾಟ ಪ್ರದೇಶಗಳ ಸಮೀಕ್ಷೆ ನಡೆಸಲು ಮುಂದಾಗಿದೆ. 

ಬೀದಿ ಬದಿ ವ್ಯಾಪಾರಿಗಳ ಸಮೀಕ್ಷೆಯನ್ನು ವಲಯ ಮಟ್ಟದಲ್ಲಿ ವಲಯ ಆಯುಕ್ತರು ನಡೆಸುತ್ತಾರೆ. ಸಮೀಕ್ಷೆ ನಡೆಸುವ ಮೊದಲು, ಬೀದಿ ವ್ಯಾಪಾರಿಗಳ ಸಂಘಗಳೊಂದಿಗೆ ಸಭೆ ನಡೆಸಲಾಗುತ್ತದೆ. ಅದಾದ ನಂತರ ಸಮೀಕ್ಷೆಗೆ ಸದಸ್ಯರನ್ನು ಸಹ ನೋಂದಾಯಿಸಲಾಗುತ್ತದೆ. ಈ ಬಾರಿ ಬಿಬಿಎಂಪಿಯು ಮಾರಾಟಗಾರರು ಮತ್ತು ವ್ಯಾಪಾರದ ಪ್ರದೇಶಗಳನ್ನು ಗುರುತಿಸಲು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಪಿಎಸ್‌) ಆಧಾರಿತ ಅಪ್ಲಿಕೇಶನ್‌ಗಳನ್ನು ಬಳಸುತ್ತದೆ ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಮಕ್ಕಳಿಗೆ ಅರ್ಧ ಟಿಕೆಟ್ | ಕಂಬದ ಆಟಕ್ಕೆ ಮುಂದಾದ ಕೆಎಸ್‌ಆರ್‌ಟಿಸಿ!

ಪಾಲಿಕೆ ಸಮೀಕ್ಷಾ ತಂಡವು ಬೀದಿ ಬದಿಯಲ್ಲಿ ವ್ಯಾಪಾರ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ವ್ಯಾಪಾರಿಗಳ ಸಂಪೂರ್ಣ ಮಾಹಿತಿ ಹಾಗೂ ದಾಖಲೆಗಳನ್ನು ಕಲೆ ಹಾಕಲಿದೆ. ರಸ್ತೆ, ಗಲ್ಲಿ, ಓಣಿ, ಫುಟ್‌ಪಾತ್‌, ಸಾರ್ವಜನಿಕ ಉದ್ಯಾನ ಸೇರಿದಂತೆ ಇನ್ನಿತರ ಕಡೆ ನಿಗದಿತ ಸ್ಥಳಗಳಲ್ಲಿ ವ್ಯಾಪಾರಸ್ಥರ ಪಟ್ಟಿ ಸಿದ್ಧಗೊಂಡ ನಂತರ ಅವರಿಗೆ ಗುರುತಿನ ಚೀಟಿ, ಪ್ರಮಾಣ ನೀಡಲಾಗುತ್ತದೆ.

AV Eye Hospital ad

ಈ ಸಮೀಕ್ಷೆಯು, ಬೀದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ನಡೆಸಲಾಗುತ್ತಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಬಿಬಿಎಂಪಿಗೆ ನಾಗರಿಕ ಸಂಸ್ಥೆ ಯೋಜಿಸಿರುವ ಸೌಲಭ್ಯಗಳನ್ನು ನೀಡಲಾಗುತ್ತದೆ. 

ಬೀದಿ ವ್ಯಾಪಾರಿಗಳ (ಜೀವನದ ರಕ್ಷಣೆ ಮತ್ತು ಬೀದಿ ವ್ಯಾಪಾರದ ನಿಯಂತ್ರಣ) ಕಾಯಿದೆ, 2014ರ ಪ್ರಕಾರ ನಗರದೊಳಗೆ ಮಾರಾಟ ವಲಯಗಳನ್ನು ಒದಗಿಸುತ್ತದೆ, ಶೇ. 40ಕ್ಕಿಂತ ಹೆಚ್ಚು ಬೀದಿ ವ್ಯಾಪಾರಿಗಳ ಪ್ರಾತಿನಿಧ್ಯವನ್ನು ಹೊಂದಿರುವ ಪಟ್ಟಣ, ಮಾರಾಟ ಸಮಿತಿಯನ್ನು ರಚಿಸಬೇಕು ಎನ್ನುವುದು ಈ ಕಾಯ್ದೆಯ ನಿಯಮವಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app