ಬೆಂಗಳೂರು ಮಳೆ ಅವಾಂತರ | ನೆರೆ ನಂತರ ಟ್ರೋಲ್ ಕಾಟ ಶುರು; ಬೆಂಗಳೂರಿನಲ್ಲಿ ಮುಳುಗಿದ ಟೈಟಾನಿಕ್!

  • ಬೆಂಗಳೂರಿನ ನೆರೆ ಬಗ್ಗೆ ಮತ್ತೆ ಟ್ವಿಟರ್‌ನಲ್ಲಿ ಆರಂಭವಾದ ಟ್ರೋಲ್
  • ಬೆಂಗಳೂರಿನಲ್ಲಿ ಕೆಲಸ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ!

ರಾಜ್ಯ ರಾಜಧಾನಿಯಲ್ಲಿ ಭಾರೀ ಮಳೆಯಾದ ಕಾರಣ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದ ಜನ ಪರದಾಡಿದ್ದರು. ನಗರದ ಪರಿಸ್ಥಿತಿಯ ಬಗ್ಗೆ ಟ್ವಿಟರ್‌ನಲ್ಲಿ ಟ್ರೋಲ್‌ಗಳು ಹರಿದಾಡುತ್ತಿವೆ.

‘ಬೆಂಗಳೂರಿನಲ್ಲಿ ಒಂದು ದಿನ’ ಎಂದು ಬರೆದಿರುವ ವಿಡಿಯೋ ಟ್ವಿಟರ್‌ನಲ್ಲಿ ವೈರಲ್‌ ಆಗಿದೆ. ಈ ವಿಡಿಯೋಗೆ ಹಲವು ಮಂದಿ ಕಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋ ನಾಲ್ಕು ಭಾಗಗಳಲ್ಲಿ ಇದೆ. 'ಬೆಂಗಳೂರಿನ ಜನರಿಗಾಗಿ' ಎಂಬ ಶೀರ್ಷಿಕೆಯಡಿ ಮೊದಲ ಭಾಗದಲ್ಲಿ ಚಿಂಪಾಂಜಿಯು ಕಾರು ಚಲಾಯಿಸುತ್ತಿದ್ದು, ‘ಕೇವಲ ನಾಲ್ಕು ಕಿಲೋಮೀಟರ್ ತಲುಪಲು ಮೂರು ಗಂಟೆ ಮುಂಚಿತವಾಗಿ ಮನೆಯಿಂದ ಹೊರಟಿದ್ದೇನೆ” ಎಂದು ಬರೆಯಲಾಗಿದೆ.

ಎರಡನೆಯ ಭಾಗದಲ್ಲಿ ಚಿಪಾಂಜಿಯು ತಲೆ ಅಲ್ಲಾಡಿಸುತ್ತಿದ್ದು, ’ಬೆಂಗಳೂರಿನ ವ್ಯಕ್ತಿ ತನ್ನ ಸ್ಟಾರ್ಟ್-ಅಪ್ ಯೋಜನೆಯನ್ನು ವಿವರಿಸುತ್ತಿದ್ದಾನೆ” ಎಂದಿದೆ.

ಮೂರನೆಯ ಭಾಗದಲ್ಲಿ ಕೋತಿಯೊಂದು ಲ್ಯಾಪ್‌ಟಾಪ್ ಬಳಸುತ್ತಿದ್ದು, ’ಬೆಂಗಳೂರಿಗನಲ್ಲದ ವ್ಯಕ್ತಿ ಕಚೇರಿ ಫೈಲ್‌ನಲ್ಲಿ 'Kannada' ಬದಲಾಗಿ 'Kannad' ಎಂದು ಟೈಪ್ ಮಾಡಿ ತಲೆಕೆಡಿಸಿಕೊಳ್ಳುತ್ತಿರುವುದು” ತೋರಿಸಲಾಗಿದೆ.

ನಾಲ್ಕನೇ ಭಾಗದಲ್ಲಿ 'ಉತ್ತರ ಭಾರತದ ವ್ಯಕ್ತಿಯೋರ್ವ ರಸ್ತೆ ಎಂದುಕೊಂಡು ಸರೋವರದಲ್ಲಿ ಸಿಲುಕಿಕೊಂಡಿದ್ದಾನೆ. ವಿಡಿಯೋದಲ್ಲಿ ವ್ಯಕ್ತಿಯೋರ್ವ ನಾಯಿಯನ್ನು ಸಂರಕ್ಷಿಸುತ್ತಿದ್ದಾನೆ' ಎಂಬುದನ್ನು ತೋರಿಸಲಾಗಿದೆ.

ಈ ವಿಡಿಯೋಗೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. “ಬೆಂಗಳೂರು ಜನರು ತಮ್ಮ ಮಕ್ಕಳಿಗೆ ಪ್ರತಿದಿನ ಕಚೇರಿಗೆ ಹೋಗಲು ನದಿಯನ್ನು ಹೇಗೆ ದಾಟುತ್ತಿದ್ದರು ಎಂದು ಹೇಳುತ್ತಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ

“ಬೆಂಗಳೂರಿನಲ್ಲಿ ಕೆಲಸ ಪಡೆಯಲು ಕೋಡಿಂಗ್ ಸಾಕಾಗುವುದಿಲ್ಲ. ಈಜು ಗೊತ್ತಿರಬೇಕು” ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

'ಟೈಟಾನಿಕ್' ಚಿತ್ರದ ಮುಂದಿನ ಭಾಗವನ್ನು ಚಿತ್ರಿಸಲು ವಾಜರಹಳ್ಳಿ ನೂರಡಿ ರಸ್ತೆಯನ್ನು ಆಯ್ಕೆ ಮಾಡಲಾಗಿದ್ದು ಚಿತ್ರೀಕರಣವನ್ನು ಸದ್ಯದಲ್ಲೇ ಆರಂಭಿಸಲಾಗುವುದು' ಎಂದು ಚಿತ್ರದ ತಾಂತ್ರಿಕ ತಂಡ ಇದೀಗ ತಾನೇ ಪ್ರಕಟಿಸಿದೆ. ಕನಕಪುರ ರಸ್ತೆಯ ವಾರ್ಡ್ 198 ಅನ್ನು ಇದಕ್ಕಾಗಿ ಆಯ್ಕೆ ಮಾಡಿರುವುದು ನಮಗೆಲ್ಲ ಅತ್ಯಂತ ಹೆಮ್ಮೆಯ ವಿಷಯ" ಎಂದು 'ಚೇಂಜ್‌ ಮೇಕರ್‍ಸ್‌ ಆಫ್ ಕನಕಪುರ ರೋಡ್' ಟ್ವೀಟ್‌ ಮಾಡಿ ಫೋಟೊ ಹಂಚಿಕೊಂಡಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್