ಅಮೃತ ಮಹೋತ್ಸವ| ಬಿಬಿಎಂಪಿ ಅಧಿಕಾರಿಗಳಿಗೆ ಧ್ವಜ ಮಾರಾಟ ಮಾಡುವ ಗುರಿ

  • ಬಿಬಿಎಂಪಿಯಿಂದ ಧ್ವಜಗಳನ್ನು ಖರೀದಿಸಿದ ನಿವಾಸಿ ಕಲ್ಯಾಣ ಸಂಘ
  • ಬಿಬಿಎಂಪಿ 14ಲಕ್ಷ ಧ್ವಜಗಳನ್ನು ಮಾರಾಟ ಮಾಡುವ ಗುರಿ

ಸ್ವಾತಂತ್ಯ್ರದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ʼಹರ್ ಘರ್ ತಿರಂಗಾʼ ಕಾರ್ಯಕ್ರಮಕ್ಕೆ ಎರಡು ದಿನ ಮೊದಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳು ಧ್ವಜ ಮಾರಾಟ ಮಾಡುತ್ತಿದ್ದಾರೆ.

ಈಗಾಗಲೇ ನಗರದೆಲ್ಲೆಡೆ 15 ಲಕ್ಷ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡಲು ಸರ್ಕಾರ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದೆ. ಈ ಹಿಂದೆ 10ಲಕ್ಷ ಧ್ವಜ ಮಾರಾಟ ಮಾಡಲು ತಿಳಿಸಲಾಗಿತ್ತು. ಬಿಬಿಎಂಪಿ ₹22ಗೆ ಒಂದು ಧ್ವಜ ಮಾರಾಟ ಮಾಡುತ್ತಿದೆ.

Eedina App

ಭಾರತೀಯ ಜನತಾ ಪಕ್ಷ (ಬಿಜೆಪಿ) ಪಕ್ಷದ ಕಾರ್ಯಕರ್ತರಿಗೆ ಪ್ರಧಾನ ಕಚೇರಿಯಿಂದ 10ಲಕ್ಷ ಧ್ವಜಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಹಾಗೂ ಅಂಚೆ ಕಚೇರಿಗಳಿಗೂ ಧ್ವಜ ಮಾರಾಟ ಮಾಡುವ ಗುರಿ ನೀಡಲಾಗಿದೆ.

ಬಿಬಿಎಂಪಿ ಧ್ವಜಗಳನ್ನು ಮಾರಾಟ ಮಾಡಲು ನಾನಾ ನಿವಾಸಿ ಕಲ್ಯಾಣ ಸಂಘಗಳ ಸಹಾಯ ಪಡೆದಿದೆ. ಹಾಗೂ ಪೌರ ಕಾರ್ಮಿಕರಿಗೆ ಧ್ವಜಗಳನ್ನು ಕೊಳ್ಳಲು ಹೇಳಿ ಅವರಿಂದ ಮಾರಾಟ ಮಾಡಲು ಸಹಾಯ ಕೇಳುತ್ತಿದೆ. ಕೆಲವು ಧ್ವಜಗಳು ದೋಷಪೂರಿತವಾಗಿವೆ ಎಂಬ ದೂರುಗಳು ಬಂದಿವೆ.

AV Eye Hospital ad

4000 ಧ್ವಜ ಮಾರಾಟ

ಇಂದಿರಾನಗರ ಸೇರಿದಂತೆ ಜೆಬಿ ನಗರ ಹಾಗೂ ಕೋನೇನ ಅಗ್ರಹಾರದಲ್ಲಿ 4000 ಧ್ವಜಗಳನ್ನು ಮಾರಾಟ ಮಾಡಬೇಕಿತ್ತು. ಈಗಾಗಲೇ 3500 ಧ್ವಜಗಳನ್ನು ಮಾರಾಟ ಮಾಡಿದ್ದೇವೆ. ಇನ್ನುಳಿದ 500 ಧ್ವಜಗಳು ಹಾಳಾಗಿದ್ದು, ಅವುಗಳನ್ನು ಹಿಂತಿರುಗಿಸಲಾಗುತ್ತಿದೆ. ಧ್ವಜಗಳನ್ನು ನಿವಾಸಿ ಕಲ್ಯಾಣ ಸಂಘದವರಿಗೆ ಹಾಗೂ ಅಂಗಡಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ಧ್ವಜಗಳನ್ನು ಮಾರಾಟ ಮಾಡಲು ವಾರ್ಡ್ ಸಮಿತಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿದ್ದೇವೆ ಎಂದರು.

ನಿವಾಸಿ ಕಲ್ಯಾಣ ಸಂಘ ಬಿಬಿಎಂಪಿಯಿಂದ ಧ್ವಜಗಳನ್ನು ಖರೀದಿಸಿದೆ. ಧ್ವಜಗಳು ಕಳಪೆ ಗುಣಮಟ್ಟದಾಗಿದೆ. ಧ್ವಜಕ್ಕೆ ಹಾಕಿದ ದಾರ ಕಿತ್ತು ಬರುತ್ತಿದೆ ಎಂದು ಎಚ್ ಬಿ ಆರ್ ಲೇಔಟ್ ನಿವಾಸಿ ವಿಕ್ರಂ ಮೈಲಾರ್ ವಿಜಯ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ಈದ್ಗಾ ಮೈದಾನದಲ್ಲಿ ಸರ್ಕಾರದ ವತಿಯಿಂದಲೇ ಧ್ವಜಾರೋಹಣ: ಸಚಿವ ಆರ್ ಅಶೋಕ್

ಬಿಬಿಎಂಪಿ 14ಲಕ್ಷ ಧ್ವಜಗಳನ್ನು ಮಾರಾಟ ಮಾಡುವ ವಿಶ್ವಾಸವಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಬೆಂಗಳೂರಿನಲ್ಲಿ 19 ಲಕ್ಷ ಮನೆಗಳಿವೆ. 75 ಸಾವಿರ ಧ್ವಜಗಳು ಹಾಳಾಗಿವೆ ಎಂದುಕೊಂಡರು ಉಳಿದ 14ಲಕ್ಷ ಧ್ವಜಗಳನ್ನು ಮಾರಾಟ ಮಾಡಬಹುದು. ಶೇ 75ರಷ್ಟು ಆಸ್ತಿಗಳನ್ನು ಗುರಿಯಲ್ಲಿಟ್ಟುಕೊಂಡು ಧ್ವಜ ಮಾರಾಟ ಮಾಡಲಾಗುತ್ತಿದೆ. ಜನಸಂಖ್ಯೆ ಮತ್ತು ಆಸ್ತಿಗಳ ಸಂಖ್ಯೆಗೆ ಅನುಗುಣವಾಗಿ ಬಿಬಿಎಂಪಿ ವಲಯ ಅಧಿಕಾರಿಗಳಿಗೆ ಗುರಿ ನೀಡಲಾಗಿದೆ ಎಂದು ತಿಳಿಸಿದರು.

ಅಂಚೆ ಕಚೇರಿಗಳಿಗೂ ಧ್ವಜಗಳನ್ನು ಮಾರಾಟ ಮಾಡುವ ಗುರಿ ನೀಡಿದ್ದಾರೆ. ಗುಣಮಟ್ಟವಿಲ್ಲದ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಕೋರಮಂಗಲ ನಿವಾಸಿ ನಿತಿನ್ ಶೇಷಾದ್ರಿ ಹೇಳಿದರು.

ಕಳೆದ ಶುಕ್ರವಾರ ಒಬ್ಬ ಪೋಸ್ಟ್‌ ಮ್ಯಾನ್ ಬಂದು ಧ್ವಜ ಮಾರಾಟ ಮಾಡಿ ಹೋದರು. ಮರುದಿನ ಪ್ಯಾಕಿಂಗ್ ತೆಗೆದು ನೋಡಿದಾಗ ಅಶೋಕ ಚಕ್ರವು ಸಂಪೂರ್ಣ ತಪ್ಪಾಗಿ ಕಾಣುತ್ತಿತ್ತು. ಹಾಗಾಗಿ ಇದು ಬಳಸಲು ಸರಿಯಲ್ಲ ಎಂದು ಸುಮ್ಮನಾದೆ ಎಂದರು.

ಶಾಸಕ ಬೈರತಿ ಬಸವರಾಜ್ ಅವರ ಕಚೇರಿಯ ಸಿಬ್ಬಂದಿ ಉಚಿತವಾಗಿ ಧ್ವಜಗಳನ್ನು ನೀಡುತ್ತಿದ್ದಾರೆ ಎಂದು ಹೊರಮಾವು ನಗರದ ಸದಸ್ಯರೊಬ್ಬರು ತಿಳಿಸಿದರು. ಈ ಕುರಿತು ಡೆಕ್ಕನ್ ಹೆರಾಲ್ಡ್ ವರದಿ ಮಾಡಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app