ಬೆಂಗಳೂರು | ನರಭಕ್ಷಕ ರಸ್ತೆ ಗುಂಡಿಗೆ ಮತ್ತೊಬ್ಬರು ಬಲಿ

  • ರಸ್ತೆ ಅಗೆದು, ವೈಜ್ಞಾನಿಕವಾಗಿ ದುರಸ್ತಿ ಮಾಡದ ಕಾರಣ ಅವಘಡ ಸಂಭವಿಸಿದೆ
  • ರಸ್ತೆ ದುರಸ್ತಿ ಮಾಡದೇ ಗುಂಡಿ ಮುಚ್ಚಲು ವಿಳಂಬ ಭಾವನೆ ತೋರುತ್ತಿರುವ ಪಾಲಿಕೆ

ರಾಜ್ಯ ರಾಜಧಾನಿಯಲ್ಲಿ ರಸ್ತೆಗುಂಡಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚತ್ತಲೇ ಇದೆ. ಸೋಮವಾರ ಬೆಳಗ್ಗೆಯೂ ದ್ವಿಚಕ್ರ ವಾಹನ ಸವಾರರೊಬ್ಬರು ರಸ್ತೆ ಗುಂಡಿಯಿಂದಾಗಿ ಆಯತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಾರಪ್ಪನ ಪಾಳ್ಯದ ನಿವಾಸಿ ಕುಮಾರ್ ಮೃತ ದುರ್ದೈವಿ. ಅವರು  ರಾಜಾಜಿನಗರದ ಡಾ. ರಾಜ್‌ಕುಮಾರ್ ರಸ್ತೆಯಲ್ಲಿ ತೆರಳುತ್ತಿದ್ದಾಗ, ಟ್ಯಾಕ್ಟರ್‍‌ಅನ್ನು ಹಿಂದಿಕ್ಕಲು ಮುಂದಾದಾಗ ರಸ್ತೆಗುಂಡಿಗೆ ಬಿದ್ದು, ಸಾವನ್ನಪ್ಪಿದ್ದಾರೆ.

Eedina App

ರಾಜಾಜಿ ನಗರದ ಬಳಿ ಇಂದು ಮಧ್ಯಾಹ್ನ ಸಾಗುತ್ತಿದ್ದ ವಾಹನ ಸವಾರ ಕುಮಾರ್, ಹದಗೆಟ್ಟ ರಸ್ತೆಯಿಂದಾಗಿ ಆಯತಪ್ಪಿ ಬಿದ್ದರು. ಈ ವೇಳೆ ಹಿಂದೆಯಿಂದ ಬರುತ್ತಿದ್ದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು. ಈ ವೇಳೆ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸುವ ಮುನ್ನವೇ, ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ. ಘಟನೆ ಸಂಬಂಧ ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕಾಪಿ ಮಾಡಿದ್ದಕ್ಕೆ ನಿಂದಿಸಿದ ಶಿಕ್ಷಕಿ; ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

AV Eye Hospital ad

ಕಳೆದ ತಿಂಗಳಷ್ಟೇ ರಸ್ತೆ ಗುಂಡಿಯಿಂದಾಗಿ ಇಬ್ಬರು ಮೃತಪಟ್ಟಿದ್ದು, ಇನ್ನೂ ಕೆಲವರು ಗಾಯಗೊಂಡಿದ್ದರು. ಆದರೂ ಎಚ್ಚೆತ್ತುಕೊಳ್ಳದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುಂಡಿ ಮುಚ್ಚುವ ಕೆಲಸದಲ್ಲಿ ವಿಳಂಬ ಮಾಡುತ್ತಿದೆ.

ಇತ್ತೀಚೆಗೆ ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಾಯಿ-ಮಗಳು ರಸ್ತೆಗುಂಡಿಯಿಂದಾಗಿ ಆಯತಪ್ಪಿ ಬಿದ್ದು, ತಾಯಿಯ ಮೇಲೆ ಕೆಎಸ್‌ಆರ್‍‌ಟಿಸಿ ಬಸ್ ಹರಿದು ಮೃತಪಟ್ಟಿದ್ದರು. ಇದೀಗ ಬೆಂಗಳೂರಿನ ರಸ್ತೆಗುಂಡಿ ಮತ್ತೊಂದು ಬಲಿ ಪಡೆದಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app