
- ಶೌಚಾಲಯದೊಳಗೆ ಇಣುಕಿ ನೋಡುತ್ತಿದ್ದಾಗ ಸಿಕ್ಕಿಬಿದ್ದ 21 ವರ್ಷದ ವಿದ್ಯಾರ್ಥಿ
- ಲೈಂಗಿಕ ಕಿರುಕುಳ ಆರೋಪದ ಮೇಲೆ ವಿದ್ಯಾರ್ಥಿ ವಿರುದ್ಧ ದೂರು ದಾಖಲು
ಬೆಂಗಳೂರಿನ ಖಾಸಗಿ ವಿಶ್ವವಿದ್ಯಾನಿಲಯದ ಬಾಲಕಿಯರ ಶೌಚಾಲಯಕ್ಕೆ ಇಣುಕಿ ನೋಡಿ ವಿಡಿಯೋ ಮಾಡುತ್ತಿದ್ದ ಆರೋಪದ ಮೇಲೆ ವಿದ್ಯಾರ್ಥಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಂಗಳವಾರ (ನ. 22) ತಿಳಿಸಿದ್ದಾರೆ.
ನಗರದ ಹೊಸಕೆರೆಹಳ್ಳಿಯ ದ್ವಾರಕನಗರದಲ್ಲಿರುವ ಪಿಇಎಸ್ ಕಾಲೇಜಿನಲ್ಲಿ ಬಿಬಿಎ ಎಲ್ಎಲ್ಬಿ ಐದನೇ ಸೆಮಿಸ್ಟರ್ನಲ್ಲಿ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಆರೋಪಿ ಶುಭಂ ಎಂ. ಆಜಾದ್ ಎಂಬ ವಿದ್ಯಾರ್ಥಿ ಮೇಲೆ ಲೈಂಗಿಕ ಕಿರುಕುಳ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿನಿ ಸಾವು
ಆರೋಪಿ ವಿದ್ಯಾರ್ಥಿ ಈ ಹಿಂದೆಯೂ ಶೌಚಾಲಯದೊಳಗೆ ಇಣುಕಿ ನೋಡಿದಾಗ ಸಿಕ್ಕಿಬಿದ್ದಿದ್ದು, ಆತನಿಂದ ಕ್ಷಮಾಪಣೆ ಪತ್ರ ಪಡೆದು, ಎಚ್ಚರಿಕೆ ನೀಡಿದ ನಂತರ ಬಿಡಲಾಗಿತ್ತು.
ಆದರೆ, ವಿದ್ಯಾರ್ಥಿ ಪುನಃ ಅದೇ ರೀತಿ ವರ್ತಿಸಿದ್ದು, ಎಚ್ಚರಿಕೆ ನೀಡಿದ ಎರಡೇ ದಿನದಲ್ಲಿ ಮತ್ತೆ ಕೃತ್ಯ ಎಸಗಿದ್ದಾನೆ. ಹಾಗಾಗಿ ಕಾಲೇಜಿನ ಆಡಳಿತ ಮಂಡಳಿಯವರು ಪೊಲೀಸರಿಗೆ ವಿಷಯ ತಿಳಿಸಿ, ದೂರು ದಾಖಲಿಸಿದ್ದಾರೆ.