
- ಅರ್ಜಿ ಸಲ್ಲಿಸಲು ವೆಬ್ಸೈಟ್ www.chitrakalaparishath.org ಭೇಟಿ ನೀಡಿ
- ಜ. 8ರಿಂದ ಚಿತ್ರಸಂತೆ ಆರಂಭಿಸಲು ರಾಜ್ಯ ಸರ್ಕಾರ ಮತ್ತು ಪರಿಷತ್ತು ಚಿಂತನೆ
ಬೆಂಗಳೂರಿನಲ್ಲಿ ನಡೆಯುವ 20ನೇ ವರ್ಷದ ಚಿತ್ರಸಂತೆಯನ್ನು ಜ.8ರಿಂದ ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಸಂತೆಯಲ್ಲಿ ಭಾಗವಹಿಸಲು ಬಯಸುವವರು ಡಿ.10 ರೊಳಗೆ ಅರ್ಜಿಸಲ್ಲಿಸಬಹುದು ಎಂದು ಚಿತ್ರಕಲಾ ಪರಿಷತ್ತು ಅಧಿಸೂಚನೆ ಹೊರಡಿಸಿದೆ.
ಸಾವಿರಾರು ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸುವ ಮತ್ತು ಅವರು ರಚಿಸಿದ ಕಲಾಕೃತಿಗಳ ಮಾರಾಟಕ್ಕೆ ಅವಕಾಶ ಒದಗಿಸುವ ಉದ್ದೇಶದಿಂದ ‘ಚಿತ್ರಸಂತೆ’ ನಡೆಸಲಾಗುತ್ತದೆ. ಈ ಬಾರಿ ಜ.8ರಿಂದ ಚಿತ್ರಸಂತೆ ಆರಂಭಿಸಲು ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ರಾಜ್ಯ ಸರ್ಕಾರ ತೀರ್ಮಾನಿಸಿವೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕಸಾಪದಲ್ಲಿ ಗುರುವಾರ ಭುವನೇಶ್ವರಿ ಪುತ್ಥಳಿ ಅನಾವರಣ
20ನೇ ವರ್ಷದ ಚಿತ್ರಸಂತೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತ ಕಲಾವಿದರು ನ.17ರಿಂದ ಡಿ.10ರವರೆಗೆ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು www.chitrakalaparishath.org ವೆಬ್ಸೈಟ್ಗೆ ಭೇಟಿ ನೀಡಿ ಅಥವಾ chitrasanthe@chitrakalaparishath.orgಗೆ ಇ-ಮೇಲ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ.
ಚಿತ್ರಸಂತೆಯಲ್ಲಿ ದೇಶ-ವಿದೇಶಗಳಿಂದ ಕಲಾವಿದರು ಆಗಮಿಸಿ ತಮ್ಮ ಕಲೆಯ ಪ್ರದರ್ಶನ ಮಾಡುತ್ತಾರೆ. ಸಾಮಾನ್ಯವಾಗಿ ಚಿತ್ರಸಂತೆ ವಾರಾಂತ್ಯದಲ್ಲಿ ಆಯೋಜಿಸಲಾಗುತ್ತದೆ. ಕಳೆದ ವರ್ಷ ಕೋವಿಡ್ ಹಿನ್ನೆಲೆ, ಚಿತ್ರಸಂತೆಯನ್ನು ಒಂದು ತಿಂಗಳು ಆನ್ಲೈನ್ನಲ್ಲಿ ಆಯೋಜಿಸಲಾಗಿತ್ತು. ಆನ್ ಲೈನ್ ವೇದಿಕೆಯಲ್ಲಿ 11.39 ಲಕ್ಷ ಮಂದಿ ಕಲಾಕೃತಿಗಳನ್ನು ವೀಕ್ಷಿಸಿದ್ದರು.