ಬೆಂಗಳೂರು | ರಸ್ತೆಗುಂಡಿ ಮುಚ್ಚುವ ಕಾರ್ಯ ಚುರುಕುಗೊಳಿಸಲು ಕಾರ್ಯಪಡೆ ರಚನೆ

  • "ಫಿಕ್ಸ್‌ ಮೈ ಸ್ಟ್ರೀಟ್" ಆಪ್ ಮೂಲಕ ದೂರು ದಾಖಲು
  • ತ್ವರಿತ ದುರಸ್ತಿಗೆ ಮುಖ್ಯ ಆಯುಕ್ತರ ಸೂಚನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ ರಸ್ತೆ ಗುಂಡಿ ಮುಚ್ಚುವ ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕೆ 11 ಸದಸ್ಯರ ಕಾರ್ಯಪಡೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ರಚಿಸಿದ್ದಾರೆ.

ಆಯುಕ್ತರು ರಚಿಸಿದ ತಂಡದಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ ಎಸ್ ಪ್ರಹ್ಲಾದ್, ಬಿಬಿಎಂಪಿ ಎಂಟು ವಲಯಗಳ ಆಯುಕ್ತರು ಹಾಗೂ ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ಸದಸ್ಯರಾಗಿದ್ದಾರೆ.

‘ಫೀಕ್ಸ್‌ ಮೈ ಸ್ಟ್ರೀಟ್’ ಆಪ್ ಮೂಲಕ ಬಂದಿರುವ ದೂರುಗಳನ್ನು ಪರಿಶೀಲಿಸಿ, ಸಮಸ್ಯೆ ಬಗೆಹರಿಸುವ ಕಾರ್ಯವನ್ನು ತಂಡ ನಿರ್ವಹಿಸುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ. 

''ಬಿಬಿಎಂಪಿ ಇಂಜಿನಿಯರ್‍‌ಗಳ ನಡುವೆ ಸಂಘಟಿತ ಪ್ರಯತ್ನದ ಅಗತ್ಯವಿದೆ. ಅದಕ್ಕಾಗಿ ಕಾರ್ಯಪಡೆ ರಚಿಸಿದ್ದು, ತಂಡವು 'ಬಿಟುಮೆನ್ ಆಸ್ಫಾಲ್ಟ್' ಮಿಶ್ರಣವನ್ನು ಖರೀದಿ ಮತ್ತು ಗುಂಡಿ ದುರಸ್ತಿ ಕಾರ್ಯವನ್ನು ಒಳಗೊಂಡಿರುವ ಪ್ರಕ್ರಿಯೆಗಳನ್ನು ಸುಗಮಗೊಳಿಸುತ್ತದೆ" ಎಂದು ಬಿಬಿಎಂಪಿ ಆದೇಶದಲ್ಲಿ ಹೇಳಿದೆ.

ಬಿಬಿಎಂಪಿಯು ಮೂರು ಹಂತದ ಪ್ರಕ್ರಿಯೆ - ಡಾಂಬರು, ಹಾಟ್‌ ಮಿಕ್ಸ್‌ ಹಾಗೂ ಪೈಥಾನ್ ಯಂತ್ರಗಳ ಸಹಾಯದಿಂದ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಬೆಂಗಳೂರಿನಲ್ಲಿ ಶನಿವಾರ ಸಾಧಾರಣ ಮಳೆ ಸಾಧ್ಯತೆ: ಹವಾಮಾನ ಇಲಾಖೆ

'ಫಿಕ್ಸ್‌ ಮೈ ಸ್ಟ್ರೀಟ್' ಆಪ್ ಮೂಲಕ ಬಂದ ದೂರುಗಳನ್ನು ದಾಖಲಿಸಿಕೊಂಡು, ನಿಗದಿತ ಸಮಯದೊಳಗೆ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ" ಎಂದು ಸೆಪ್ಟೆಂಬರ್ 27ರಂದು ಬಿಬಿಎಂಪಿ ಹೇಳಿತ್ತು. ಬಿಬಿಎಂಪಿ ಪ್ರಕಾರ, ನಗರದ ನಾನಾ ರಸ್ತೆಗಳಲ್ಲಿ 1,050ಕ್ಕೂ ಹೆಚ್ಚು ಗುಂಡಿಗಳನ್ನು ಗುರುತಿಸಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180