ಬೆಂಗಳೂರು ಸಂತೆ | 'ಖಾದಿ ಪ್ರದರ್ಶನ' ಕ್ಕೆ ಕರೆ ನೀಡಿದ ಬಿಎಮ್‌ಆರ್‌ಸಿಎಲ್‌

  • ಮಾರಾಟದ ಸ್ಥಳಕ್ಕೆ ಶುಲ್ಕ ನೀಡುವ ಅಗತ್ಯವಿಲ್ಲ
  • 'ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿ'

`ಆಜಾದಿ ಕಾ ಅಮೃತ ಮಹೋತ್ಸವ'ದ ಅಂಗವಾಗಿ ಕೈಮಗ್ಗ, ಖಾದಿ ಉತ್ಪನ್ನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತವು (ಬಿಎಂಆರ್‌ಸಿಎಲ್‌) ಆಗಸ್ಟ್‌ 15ರಿಂದ ಏಳು ದಿನಗಳ ಕಾಲ ʻಖಾದಿ ಪ್ರದರ್ಶನʼವನ್ನು ಏರ್ಪಡಿಸಿದೆ.

ಆಗಸ್ಟ್‌ 15ರಿಂದ 21ರವರೆಗೆ ವಿವೇಕಾನಂದ ಮೆಟ್ರೊ ನಿಲ್ದಾಣದ ಬಳಿ ಖಾದಿ ಉತ್ಸವ ನಡೆಯಲಿದೆ. ಬಿಎಮ್ಆರ್‌ಸಿಎಲ್‌ ಈಗಾಗಲೇ ಸ್ವಾತಂತ್ರ್ಯ ದಿನಾಚರಣೆಯ ಸಲುವಾಗಿ ಪ್ರಯಾಣಿಕರಿಗೆ ಹಲವು ಕೊಡುಗೆಗಳನ್ನು ನೀಡಿದೆ. ಲಾಲ್‌ಬಾಗ್‌ ಪುಷ್ಪ ಪ್ರದರ್ಶನ ವೀಕ್ಷಣೆ ಸುಗಮವಾಗಿರಲಿ ಎಂದು ರಿಟರ್ನ್ ಜರ್ನಿಗಾಗಿ ಪೇಪರ್ ಟಿಕೆಟ್ ಘೋಷಿಸಿತ್ತು.

ಈ ಸಂತೆಯಲ್ಲಿ 60ಕ್ಕೂ ಹೆಚ್ಚು ಕೈಮಗ್ಗ ಮತ್ತು ಖಾದಿ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳ ಮಾರಾಟ ಮಾಡಲು ಉಚಿತವಾಗಿ ಜಾಗ ಕಲ್ಪಿಸಿದೆ.

"ಕರ್ನಾಟಕದಾದ್ಯಂತ ಇರುವ ಕುಶಲಕರ್ಮಿಗಳು ಈ ಮೇಳಕ್ಕೆ ಆಗಮಿಸುತ್ತಿದ್ದು, ಈಗಾಗಲೇ ಮಾರಾಟಕ್ಕೆ ತಮ್ಮ ಜಾಗಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. ಒಂದು ವಾರ ಚಾಲ್ತಿಯಲ್ಲಿರುವ ಈ ಮೇಳಕ್ಕೆ ಯಾವುದೇ ಶುಲ್ಕ ನೀಡುವ ಅಗತ್ಯವಿಲ್ಲ. ಸಣ್ಣ ಕೈಗಾರಿಕೆಗಳನ್ನು ಉತ್ತೇಜಿಸುವುದು ನಮ್ಮ ಗುರಿ. ಇದೇ ವೇಳೆ ತಿಂಡಿತಿನಿಸುಗಳ ಮಾರಾಟಕ್ಕೂ ಅವಕಾಶ ನೀಡಲಾಗಿದೆ" ಎಂದು ಜಾರಿ ನಿರ್ದೇಶನ ಇಲಾಖೆಯ ಕಾರ್ಯನಿರ್ದೇಶಕರಾದ ಎ ಎಸ್ ಶಂಕರ್ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಸ್ವಾತಂತ್ರ್ಯ ದಿನಾಚರಣೆಯಂದು ಪೌರ ಕಾರ್ಮಿಕರಿಗೆ ರಜೆ ನೀಡಲು ಎಐಸಿಸಿಟಿಯು ಆಗ್ರಹ

ಖಾದಿ ವಸ್ತುಗಳು, ಕರಕುಶಲ ವಸ್ತುಗಳು, ಬಟ್ಟೆ, ಗೃಹಾಲಂಕಾರ, ಸಾಂಪ್ರದಾಯಿಕ ಉಡುಪುಗಳು, ಸಾವಯವ ಉತ್ಪನ್ನಗಳು, ಮಹಿಳೆ ಹಾಗೂ ಪುರುಷರ ಉಡುಪುಗಳು ಇಲ್ಲಿ ಮಾರಾಟವಾಗಲಿವೆ ಎಂದು ಬಿಎಮ್ಆರ್‌ಸಿಎಲ್‌ ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್