ಬೆಂಗಳೂರು| ವಾಯುಭಾರ ಕುಸಿತ: ನ.22ರಿಂದ ಮತ್ತೆ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

  • ಬೆಂಗಳೂರಿನಲ್ಲಿ ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ
  • ಚಳಿಯಿಂದ ತಪ್ಪಿಸಿಕೊಳ್ಳಲು ಕಾಫಿ, ಟೀಗೆ ಮೊರೆ ಹೋದ ನಗರದ ಜನತೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಿಗ್ಗೆ ಮಂಜು ಸುರಿಯುವ ಜೊತೆಗೆ ಚಳಿ ವಾತಾವರಣ ಮುಂದುವರಿಯಲಿದ್ದು, ನವೆಂಬರ್ 22ರಿಂದ ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಕಾರಣ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ನ.22 ರಿಂದ ಮಳೆಯಾಗಲಿದೆ. ನಗರದಲ್ಲಿ ಮುಂದಿನ ಎರಡು ದಿನ ಗರಿಷ್ಟ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆಗಳಿದೆ ಎಂದು ಇಲಾಖೆ ತಿಳಿಸಿದೆ.

Eedina App

ಎಲ್ಲೆಲ್ಲಿ ಮಳೆ?

ರಾಜ್ಯದ ಬೆಂಗಳೂರು, ದಾವಣಗೆರೆ, ಹಾವೇರಿ, ಬಾಗಲಕೋಟೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ತುಮಕೂರು, ಉತ್ತರ ಕನ್ನಡ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಚಳಿ ಸಹ ಇರಲಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮನೆ, ಕಚೇರಿಯಿಂದ ಮೆಟ್ರೋ, ಬಸ್‌ ನಿಲ್ದಾಣಕ್ಕೆ ತಲುಪಲು ಹೊಸ 'ಮಿನಿಬಸ್'

ಬೆಂಗಳೂರು ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಕಳೆದ ವಾರ ಸತತವಾಗಿ ಮೂರು ದಿನ ಮಳೆಯಾಗಿತ್ತು. ಬಳಿಕ ಮೋಡ ಕವಿದ ವಾತಾವರಣ ಜೊತೆಗೆ ಚಳಿಯೂ ಮುಂದುವರೆದಿದೆ. ಚಳಿಯಿಂದ ತಪ್ಪಿಸಿಕೊಳ್ಳಲು ನಗರದ ಜನ ಕಾಫಿ, ಟೀ ಮೊರೆ ಹೋಗಿದ್ದಾರೆ.

ನಿಮಗೆ ಏನು ಅನ್ನಿಸ್ತು?
2 ವೋಟ್
eedina app