ಬೆಂಗಳೂರು| ಕಬ್ಬನ್ ಪಾರ್ಕ್‌ನಲ್ಲಿ ಸಂಜೆ 6.30ರ ನಂತರ ಸಾರ್ವಜನಿಕರಿಗೆ ಪ್ರವೇಶ ನಿಷೇಧ

  • ಸಮಯ ಮೀರಿದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಯಾರೂ ಇರಬಾರದು
  • ಪಾರ್ಕ್‌ನ ಎಲ್ಲ ದ್ವಾರಗಳಲ್ಲಿ ವಾಹನಗಳ ಸಂಚಾರ ರಾತ್ರಿ 10ರವರೆಗೆ ಇರಲಿದೆ

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಅನೈತಿಕ ಚಟುವಟಿಕೆ ತಡೆಯುವ ಉದ್ದೇಶದಿಂದ ಸಂಜೆ 6.30ರ ನಂತರ ಸಾರ್ವಜನಿಕರ ಪ್ರವೇಶ ಮತ್ತು ವಾಯು ವಿಹಾರ ಮಾಡುವುದನ್ನು ನಿರ್ಬಂಧಿಸಲಾಗಿದೆ.

ಆದರೆ ಪಾರ್ಕ್‌ನ ಎಲ್ಲ ದ್ವಾರಗಳಲ್ಲಿ ವಾಹನ ಸಂಚಾರ ರಾತ್ರಿ 10ರವರೆಗೆ ಇರುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಲಾಲ್‌ಬಾಗ್‌ನಲ್ಲಿ ಸಂಜೆ 6.30ರ ಬಳಿಕ ಪ್ರವೇಶ ದ್ವಾರಗಳನ್ನು ಬಂದ್ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಇಷ್ಟು ದಿನ ಸಾಮಾನ್ಯವಾಗಿ 7.30ರವರೆಗೆ ಪ್ರವೇಶಾವಕಾಶವಿದ್ದ ಕಬ್ಬನ್ ಪಾರ್ಕ್‌ಗೂ ಕೂಡಾ ಆ ನಿಯಮ ಹೇರಲಾಗಿದೆ.

ಸಮಯ ಮೀರಿದ ನಂತರ ಕಬ್ಬನ್ ಪಾರ್ಕ್‌ನಲ್ಲಿ ಯಾರೂ ಇರಬಾರದು. ಯಾರಾದರೂ ಇರುವುದು ಕಂಡುಬಂದರೇ, ಅವರನ್ನು ಸಿಬ್ಬಂದಿ ಹೊರಗೆ ಕಳುಹಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈದ್ಗಾ ಮೈದಾನ ವಿವಾದ| ದಾಖಲೆ ಸಲ್ಲಿಸಲು ವಕ್ಫ್‌ ಮಂಡಳಿಗೆ ಆ.3ರವರೆಗೆ ಕಾಲಾವಕಾಶ

ನವೆಂಬರ್‍‌ನಿಂದ ಫೆಬ್ರುವರಿಯವರೆಗೆ ಬೇಗ ಕತ್ತಲಾಗುವ ದಿನಗಳು ಬರುತ್ತವೆ. ಹಾಗಾಗೀ ರಾತ್ರಿ 7ಗಂಟೆ ನಂತರ ಜನರು ಇದ್ದರೇ ಅವರಿಗೆ ಭದ್ರತೆ ನೀಡುವ ವಿಚಾರದಲ್ಲಿ ಕಷ್ಟವಾಗುತ್ತದೆ. ಕಬ್ಬನ್ ಪಾರ್ಕಿನ ಎಲ್ಲಾ ಕಡೆ ಕಾವಲು ಸಿಬ್ಬಂದಿ ನೇಮಕ ಅಥವಾ ಸಿಸಿ ಟಿವಿ ಅಳವಡಿಸುವುದು ಅಸಾಧ್ಯ. ಅಲ್ಲದೇ, ಪಾರ್ಕ್‌ನಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತವೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಚ್ ಟಿ ಬಾಲಕೃಷ್ಣ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್