ಬೆಂಗಳೂರು | ಬಣ್ಣಲೇಪಿತ ಪಿಒಪಿ ಗೌರಿ- ಗಣೇಶನ ಮೂರ್ತಿಗಳ ಮಾರಾಟ ನಿಷೇಧ

pop ganesha
  • ರಾಸಾಯನಿಕ ಬಳಸದ ಗಣೇಶ ಮೂರ್ತಿ ಬಳಕೆ ಮಾಡಲು ಮನವಿ
  • ಐದು ಅಡಿ ಎತ್ತರದ ಮೂರ್ತಿಯನ್ನು ಮಾರಾಟ ಮಾಡಬಾರದು

ಈ ವರ್ಷದ ಗಣೇಶ ಹಬ್ಬಕ್ಕೆ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ)ನಿಂದ ತಯಾರಿಸಲಾದ ಬಣ್ಣ ಲೇಪಿತ ಗಣೇಶ ಮತ್ತು ಗೌರಿ ಮೂರ್ತಿಗಳ ಮಾರಾಟ ನೀಷೇಧಿಸಿದ್ದು, ನಿಯಮ ಉಲ್ಲಂಘಿಸಿ ಮಾರಾಟ ಮಾಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ತಿಳಿಸಿದೆ. 

ಪಿಒಪಿ ಗಣಪತಿ ಬದಲಿಗೆ ಅರಿಶಿಣ ಅಥವಾ ಮಣ್ಣಿನಿಂದ ಮಾಡಿದ ಯಾವುದೇ ರಾಸಾಯನಿಕ ಬಳಸದ ಗಣಪತಿ ಪೂಜಿಸಬೇಕು ಎಂದು ಕೆಎಸ್‌ಪಿಸಿಬಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ಪರಿಸರ ಮಾಲಿನ್ಯ ತಡೆಗಟ್ಟಲು ಕಟ್ಟುನಿಟ್ಟಾದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಡಾ.ಶಾಂತ್ ಎ. ತಿಮ್ಮಯ್ಯ ಹೇಳಿದ್ದಾರೆ. 

ಈಗಾಗಲೇ ಬಿಬಿಎಂಪಿಯು ಪಿಒಪಿ ಮೂರ್ತಿಗಳನ್ನು ತಯಾರಿಸಿ, ಮಾರಾಟ ಮಾಡಬಾರದು ಎಂಬ ನಿಯಮವನ್ನು ಜನರಿಗೆ ಮನದಟ್ಟು ಮಾಡುತ್ತಿದ್ದು, ಅದರಿಂದಾಗುವ ಹಾನಿಯ ಬಗ್ಗೆ ಪ್ರಚಾರವನ್ನೂ ಮಾಡುತ್ತಿದೆ. ಅಲ್ಲದೆ, ಮೂರ್ತಿಯ ವಿಸರ್ಜನೆ ಮಾಡುವುದರ ಕುರಿತು ಅರಿವು ಮೂಡಿಸುತ್ತಿದೆ. 

ಈ ಸುದ್ದಿ ಓದಿದ್ದೀರಾ?:ಫಲಪುಷ್ಪ ಪ್ರದರ್ಶನ | ಲಾಲ್‌ಬಾಗ್‌ ಶುಚಿತ್ವ ಕಾಪಾಡಲು ಸಕಲ ವ್ಯವಸ್ಥೆ

ಐದು ಅಡಿ ಎತ್ತರದ ಗಣೇಶನ ಮೂರ್ತಿ ಮಾರಾಟ ಮಾಡುವುದನ್ನು ನಿರ್ಬಂಧಿಸಲಾಗಿದೆ. ಗರಿಷ್ಠ ಎತ್ತರದ ಮೂರ್ತಿಯನ್ನು ಮಾರಾಟ ಮಾಡುವ ಮುನ್ನ ತೂಕ, ಸಾಗಣೆ ಮತ್ತು ತ್ಯಾಜ್ಯ ಉತ್ಪಾದನೆಯನ್ನು ಪರಿಶೀಲಿಸಲಾಗುವುದು ಎಂದು ಕೆಎಸ್‌ಪಿಸಿಬಿ ಹೇಳಿದೆ. 

ಸಾರ್ವಜನಿಕರು ನಿಯಮ ಉಲ್ಲಂಘಿಸಿ ಪಿಒಪಿ ವಿಗ್ರಹಗಳನ್ನು ಸ್ಥಾಪಿಸಿದರೆ, ಅಂತಹ ವಿಗ್ರಹಗಳು ಕೆರೆಗಳು, ಕೊಳಗಳು ಹಾಗೂ ನದಿಗಳಿಗೆ ತಲುಪದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಅವುಗಳ ತೆರವಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು ಎಂದು ಕೆಎಸ್‌ಪಿಸಿಬಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್