ಬೆಂಗಳೂರು ಗಣೇಶ ಉತ್ಸವ | ಹತ್ತು ಸಾವಿರ ಮಣ್ಣಿನ ಮತ್ತು ಬೀಜದ ಗಣೇಶ ಮೂರ್ತಿ ತಯಾರಿಕೆ

Eco friendly Ganesha
  • 10 ಸಾವಿರ ಮಣ್ಣಿನ ಮತ್ತು ಬೀಜದಿಂದ ಮೂರ್ತಿ ತಯಾರಿಕೆ
  • ಆಗಸ್ಟ್‌ 28 ರಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ

ಗಣೇಶ ಚತುರ್ದಶಿ ಹಬ್ಬ ಹತ್ತಿರದಲ್ಲಿದ್ದು, ಈ ಹಿನ್ನೆಲೆಯಲ್ಲಿ  ಪ್ರಕೃತಿಗೆ ಹಾನಿಯಾಗದಂತೆ ಪರಿಸರಸ್ನೇಹಿ ಹಬ್ಬವನ್ನು ಆಚರಿಸಲು 10,000 ಮಣ್ಣಿನ ಮತ್ತು ಬೀಜದ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಹೇಳಿದೆ. ಈ ಕಾರ್ಯಕ್ರಮವನ್ನು ಕೆಎಸ್‌ಪಿಸಿಬಿಯು ಬೆಂಗಳೂರು ಗಣೇಶ ಉತ್ಸವ ಸಮಿತಿಯ ಸಹಯೋಗದೊಂದಿಗೆ ಆಯೋಜನೆ ಮಾಡುತ್ತಿದೆ.

10 ಸಾವಿರ ಮಣ್ಣಿನ ಮತ್ತು ಬೀಜದ ಗಣೇಶ ಮೂರ್ತಿಗಳ ತಯಾರಿಸುವುದಕ್ಕೆ ಆಗಸ್ಟ್‌ 28 ರಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ 'ಬೆಂಗಳೂರು ಗಣೇಶ ಉತ್ಸವ ಸಂಸ್ಥೆ'ಯು ಕಾರ್ಯಕ್ರಮ ಏರ್ಪಡಿಸಿದೆ. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅಂದು ಈ ಸಂಬಂಧದ ವಿಡಿಯೋ ಆಡಿಯೋ ಬಿಡುಗಡೆ ಮಾಡಲಾಗುವುದು ಎಂದು ಬೆಂಗಳೂರು ಗಣೇಶ ಉತ್ಸವದ ನಂದೀಶ್ ಮರಿಯಣ್ಣ ಹೇಳಿದರು. 

ಪರಿಸರಸ್ನೇಹಿ ಗಣೇಶ ತಯಾರಿಕೆಯಲ್ಲಿ ಹತ್ತು ಸಾವಿರ ಜನರು ಭಾಗಿಯಾಗುತ್ತಿದ್ದಾರೆ. ಅವರು ತಯಾರಿಸಿದ ಮೂರ್ತಿಗಳನ್ನು ಅವರವರ ಮನೆಗಳಿಗೇ ಕೊಂಡೊಯ್ದು ಪ್ರತಿಷ್ಠಾಪಿಸಬಹುದು ಎಂದು ನಂದೀಶ್ ಮರಿಯಣ್ಣ ತಿಳಿಸಿದರು. 

ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು| ವಾರ್ಡ್‌ಗೊಂದು ಗಣೇಶ ನಿರ್ಧಾರ ಅಂತಿಮವಾಗಿಲ್ಲ: ಬಿಬಿಎಂಪಿ ಸ್ಪಷ್ಟನೆ

ಆಗಸ್ಟ್ 28 ರಂದು ನಡೆಯುವ ಮೂರ್ತಿ ತಯಾರಿಸುವ ಕಾರ್ಯಕ್ರಮಕ್ಕೆ ಈಗಾಗಲೇ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಗಣಪತಿಯ ಮೂರ್ತಿ ತಯಾರಿಸಲು ಬೇಕಾಗುವ ಮಣ್ಣು, ನೀರು, ಬೀಜ ಮತ್ತು ಮರದ ಹಲಗೆಯನ್ನು ಸಂಘಟನೆಯ ವತಿಯಿಂದ ನೀಡಲಾಗುವುದು ಎಂದರು.

ಕಾರ್ಯಕ್ರಮದ ಭಾಗಶಃ ಮೊತ್ತ ಕೆಎಸ್‌ಪಿಸಿಬಿ ಭರಿಸುತ್ತಿದ್ದು, ಇನ್ನುಳಿದ ಹಣವನ್ನು ಸ್ನೇಹಿತರು ಮತ್ತು ಹಿತೈಷಿಗಳಿಂದ ಸಂಗ್ರಹಿಸಲಾಗುವುದು ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್