ಮಂಗಳೂರು ಕುಕ್ಕರ್ ಸ್ಫೋಟ ಹಿನ್ನೆಲೆ; ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ತಪಾಸಣೆ

  • ಅನುಮಾನಾಸ್ಪದವಾಗಿ ಕಂಡುಬರುವ ವಸ್ತುಗಳನ್ನು ವಶಕ್ಕೆ ಪಡೆಯಿರಿ
  • ರೈಲಿನ ಮೂಲಕ ಬರುವ ಪಾರ್ಸೆಲ್​ಗಳ ಬಗ್ಗೆ‌ ನಿಗಾ ವಹಿಸಲು ಸೂಚನೆ

ಕಳೆದ ಕೆಲ ದಿನಗಳಿಂದ ಭಾರೀ ಸುದ್ದಿಯಾಗಿರುವ ಮಂಗಳೂರು ಫ್ರೆಶರ್ ಕುಕ್ಕರ್ ಸ್ಫೋಟ ಘಟನೆಯಿಂದಾಗಿ ಎಚ್ಚೆತ್ತುಕೊಂಡಿರುವ ರೈಲ್ವೆ ಪೊಲೀಸರು, ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ತಪಾಸಣೆ ಆರಂಭಿಸಿದ್ದಾರೆ.

ರಾಜಧಾನಿಯಲ್ಲಿನ ರೈಲು, ಬಸ್‌ ನಿಲ್ದಾಣಗಳು, ಜನಸಂದಣಿ ಪ್ರದೇಶಗಳು, ಮಾರುಕಟ್ಟೆಗಳಲ್ಲಿ ಪೊಲೀಸ್‌ ತಪಾಸಣೆ ನಡೆಸುತ್ತಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸೇರಿದಂತೆ ಸುದ್ದಿ ಮಾಧ್ಯಮದಲ್ಲಿ ವರದಿಯಾದ ನಂತರ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಸೌಮ್ಯಲತಾ ನೇತೃತ್ವದ ಪೊಲೀಸರ ತಂಡ ಮಂಗಳವಾರದಿಂದ ತಪಾಸಣೆ ನಡೆಸಲು ಆರಂಭಿಸಿದ್ದು, ಸಂಬಂಧಪಟ್ಟವರಿಗೆ ಕೆಲ ಸೂಚನೆಗಳನ್ನು ನೀಡಿದ್ದಾರೆ.

ರೈಲ್ವೆ ನಿಲ್ದಾಣದ ಪ್ರವೇಶದಲ್ಲಿ ಪ್ರಯಾಣಿಕರ ಲಗೇಜ್‌ ತಪಾಸಣೆಗೆ ಅಳವಡಿಸಿರುವ ಮೆಟಲ್‌ ಡಿಟೆಕ್ಟರ್‌ಗಳು, ಸ್ಕ್ಯಾ‌ನರ್‌ ಯಂತ್ರಗಳ ಕಾರ್ಯಾಚರಣೆ ಪರಿಶೀಲಿಸಿದರು. ರೈಲು‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಯಾವುದೇ ವಸ್ತುಗಳು ಕಂಡುಬಂದರೂ ಮುಲಾಜಿಲ್ಲದೆ ವಶಕ್ಕೆ ಪಡೆದುಕೊಳ್ಳುವಂತೆ ಡಿವೈಎಸ್‌ಪಿ ಗೀತಾ ಅವರಿಗೆ ತಾಕೀತು ಮಾಡಿದರು.

ಈ ಸುದ್ದಿ ಓದಿದ್ದೀರಾ?: ಬೆಸ್ಕಾಂ ಗ್ರಾಹಕರ ಗಮನಕ್ಕೆ ಸಹಾಯವಾಣಿ, ವಾಟ್ಸಾಪ್‌ ಮೂಲಕ ದೂರು ಸಲ್ಲಿಸಿ

AV Eye Hospital ad

ಬ್ಯಾಗ್‌, ಸೂಟ್‌ಕೇಸ್‌ ಸಮೇತ ಆಗಮಿಸಿದ ಪ್ರಯಾಣಿಕರು ಯಾವುದೇ ತಪಾಸಣೆಗೆ ಒಳಗಾಗದೆ, ನೇರವಾಗಿ ನಿಲ್ದಾಣ ಪ್ರವೇಶಿಸದಂತೆ ನಿಗಾ ವಹಿಸಲು. ಮಾರುಕಟ್ಟೆ ಪ್ರದೇಶಗಳು, ಮಾಲ್‌ಗಳು, ಜನದಟ್ಟಣೆ ಪ್ರದೇಶಗಳಲ್ಲಿ ಭದ್ರತಾ ವೈಫಲ್ಯ ಕಂಡುಬರದಂತೆ ಕಾಯ್ದುಕೊಳ್ಳಲು ಸೂಚನೆ ನೀಡಿದ್ದಾರೆ.

ಎಲ್ಲ ಪ್ರಮುಖ ರೈಲು ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ರೈಲ್ವೆ ಗೇಟ್​ಗಳು, ಫ್ಲಾಟ್​ಫಾರಂಗಳು, ಟಿಕೆಟ್​ ಕೌಂಟರ್​ಗಳ ಪರಿಶೀಲನೆ ಮಾಡಿದ್ದಾರೆ. ಅಧಿಕಾರಿಗಳು ಪ್ರತಿದಿನವೂ ಪರಿಶೀಲನೆ ನಡೆಸಿ, ಎಚ್ಚರ ವಹಿಸುವಂತೆ ಸೂಚನೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app