ಬೆಂಗಳೂರು | ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ; 20ರ ಬದಲು 15 ನಿಮಿಷಕ್ಕೊಂದು ರೈಲು

metro
  • ಬೆಳಿಗ್ಗೆ ಮತ್ತು ರಾತ್ರಿ 20 ನಿಮಿಷದ ಬದಲು 15 ನಿಮಿಷಕ್ಕೊಂದು ಮೆಟ್ರೊ
  • ಪ್ರಯಾಣಿಕರ ಸಮಯವನ್ನು ಇನ್ನಷ್ಟು ಉಳಿಸಲು ಈ ಯೋಜನೆ

ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‍‌ಸಿಎಲ್‌) ಪ್ರಯಾಣಿಕರಿಗೆ ಅನುಕೂಲವಾಗುವಂತೆ ಬೆಳಗಿನ ಜಾವ ಮತ್ತು ರಾತ್ರಿ ವೇಳೆ ಮೆಟ್ರೊ ರೈಲುಗಳ ಸಂಚಾರ ಸಮಯದ ಅಂತರವನ್ನು ಕಡಿಮೆ ಮಾಡಿದೆ.

ಸೋಮವಾರದಿಂದ (ಆಗಸ್ಟ್‌ 8) ಬೆಳಗ್ಗೆ 5 ಗಂಟೆಯಿಂದ 6ಗಂಟೆವರೆಗೆ ಹಾಗೂ ರಾತ್ರಿ 10 ಗಂಟೆಯಿಂದ 11ರವರೆಗೆ ರೈಲು 20 ನಿಮಿಷಕ್ಕೆ ಒಂದರಂತೆ ನಿಲ್ದಾಣಕ್ಕೆ ಆಗಮಿಸುತ್ತಿತ್ತು. ಆದರೆ ಇನ್ನು ಮುಂದೆ 15ನಿಮಿಷಕ್ಕೆ ಒಂದಂತೆ ಮೆಟ್ರೊ ರೈಲು ಆಗಮಿಸಲಿದೆ.

Eedina App

ಈ ಮೊದಲು ಇದೇ ಅವಧಿಯಲ್ಲಿ ಮೆಟ್ರೊ ರೈಲುಗಳು 20 ನಿಮಿಷಗಳ ಅಂತರದಲ್ಲಿ ಆಯಾ ನಿಲ್ದಾಣಗಳಿಗೆ ಆಗಮಿಸುತ್ತಿದ್ದವು. ಇದರಿಂದಾಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಉಂಟಾಗುತ್ತಿತ್ತು. ಆದ್ದರಿಂದ  ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಬಿಎಂಆರ್‍‌ಸಿಎಲ್‌ ಈ ನಿರ್ಧಾರ ಕೈಗೊಂಡಿದೆ.

ಈ ಸುದ್ದಿ ಓದಿದ್ದೀರಾ:? ಸಾಮಾಜಿಕ ಬದ್ಧತೆಯಿಂದ ಮಾಧ್ಯಮಗಳು ಕಾರ್ಯನಿರ್ವಹಿಸಬೇಕು| ಖ್ಯಾತ ವಿಮರ್ಶಕ ಪ್ರೊ ಸಿ ಎನ್ ರಾಮಚಂದ್ರನ್

AV Eye Hospital ad

ಪ್ರಯಾಣಿಕರ ಅನುಕೂಲಕ್ಕಾಗಿ ಸೋಮವಾರ ಬೆಳಗ್ಗೆಯಿಂದ ಈ ಹೊಸ ನಿಯಮ ಜಾರಿಗೆಯಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವ ಮತ್ತು ತಡರಾತ್ರಿಯಲ್ಲಿ ಹೆಚ್ಚು ಪ್ರಯಾಣಿಕರು ಸಂಚರಿಸುವ ಕಾರಣ ಮತ್ತು ಜನದಟ್ಟಣೆ ಕಡಿಮೆ ಮಾಡಲು ಈ ಕ್ರಮ ಕೈಗೊಂಡಿದೆ. ಕೊರೊನಾ ಭೀತಿ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಈಗ ಜನರು ಹೆಚ್ಚು ಮೆಟ್ರೊ ಸಾರಿಗೆಯನ್ನೇ ಅವಲಂಬಿಸಿರುವ ಕಾರಣ ಈ ಮಹತ್ತರ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗಿದೆ ಎಂದು ಬಿಎಂಆರ್‍‌ಸಿಎಲ್‌ನ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app