ಬೆಂಗಳೂರು| ಕೋಟ್ಯಂತರ ರೂ. ವಿದ್ಯುತ್ ಶುಲ್ಕ ಬಾಕಿ: ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿಗೆ ಬೆಸ್ಕಾಂ ನೋಟಿಸ್

  • ವಿದ್ಯುತ್ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಬೇಕು: ಬೆಸ್ಕಾಂ ಎಂಡಿ
  • ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡ ಸರ್ಕಾರಿ ಕಚೇರಿಗಳು

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಯ ಇಂದಿರಾನಗರ, ಕೋರಮಂಗಲ, ಶಿವಾಜಿನಗರ, ಮಲ್ಲೇಶ್ವರಂ ಮತ್ತು ವೈಟ್‌ಫೀಲ್ಡ್‌ನ ವಿಭಾಗಗಳಿಗೆ ಪೌರ ಸಂಸ್ಥೆಗಳು ಒಟ್ಟು ₹236 ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದ್ದು, ಈ ಐದು ವಿಭಾಗಗಳು ಬಾಕಿ ಪಾವತಿಸುವಂತೆ ನೋಟಿಸ್ ಜಾರಿ ಮಾಡಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಸೇರಿದಂತೆ ಸರ್ಕಾರಿ ಕಚೇರಿಗಳು ವಿದ್ಯುತ್ ಬಾಕಿ ಉಳಿಸಿಕೊಂಡಿವೆ ಎಂದು ಬೆಸ್ಕಾಂ ತಿಳಿಸಿದೆ.

Eedina App

ಬೆಸ್ಕಾಂನ ಶಿವಾಜಿನಗರ ವಿಭಾಗಗಳ ವ್ಯಾಪ್ತಿಗೆ ಬರುವ ಪಿಳ್ಳಣ್ಣ ಗಾರ್ಡ್‌ನ, ಬಂಬೂ ಬಜಾರ್, ಕಾಕ್ಸ್ ಟೌನ್, ಬಾಣಸವಾಡಿ ಮತ್ತು ನಾಗವಾರ ಉಪ ವಿಭಾಗಗಳಿಗೆ ಬಿಡಬ್ಲೂಎಸ್‌ಎಸ್‌ಬಿ ಮತ್ತು ಬಿಬಿಎಂಪಿ ನೀರು ಸರಬರಾಜು ವಿಭಾಗ ಕ್ರಮವಾಗಿ ₹27.54 ಕೋಟಿ ಮತ್ತು ₹90.20 ಕೋಟಿ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿದೆ. ಬಾಕಿ ಪಾವತಿಸುವಂತೆ ಎರಡು ಸಂಸ್ಥೆಗಳಿಗೆ  ಶಿವಾಜಿನಗರ ಕಾರ್ಯನಿರ್ವಾಹಕ ಇಂಜಿನಿಯರ್ ನೋಟಿಸ್ ಜಾರಿಗೊಳಿಸಿದ್ದಾರೆ.

ಬೆಸ್ಕಾಂನ ಕೋರಮಂಗಲ ವಿಭಾಗದ ಆಸ್ಟಿನ್ ಟೌನ್, ಕೋರಮಂಗಲ, ಮುರುಗೇಶ್ ಪಾಳ್ಯ, ಮಡಿವಾಳ, ಎಚ್.ಎ.ಎಲ್ ಉಪ ವಿಭಾಗಳ ವ್ಯಾಪ್ತಿಗೆ ಒಳಪಡುವ 10 ವಾರ್ಡ್‌ಗಳಿಂದ ಬಿಡಬ್ಲೂಎಸ್‌ಎಸ್‌ಬಿ ₹23.71 ಕೋಟಿ, 19 ವಾರ್ಡ್‌ಗಳಿಂದ ಬಿಬಿಎಂಪಿ ಸುಮಾರು ₹22.20 ಕೋಟಿ ವಿದ್ಯುತ್ ಶುಲ್ಕ ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ.

AV Eye Hospital ad

ಮಲ್ಲೇಶ್ವರಂ ವಿಭಾಗಗಳ ವ್ಯಾಪ್ತಿಗೆ ಒಳಪಡುವ ಉಪ ವಿಭಾಗಗಳಿಗೆ ಬಿಡಬ್ಲೂಎಸ್‌ಎಸ್‌ಬಿ ಮತ್ತು ಬಿಬಿಎಂಪಿ ಕ್ರಮವಾಗಿ ₹13.60 ಕೋಟಿ ಮತ್ತು ₹16.70 ಕೋಟಿ ಬೆಸ್ಕಾಂಗೆ ಪಾವತಿಸಬೇಕಾಗಿದೆ.

ಇಂದಿರಾನಗರ ವಿಭಾಗಕ್ಕೆ ಬಿಬಿಎಂಪಿ, ಬಿಡಬ್ಲೂಎಸ್‌ಎಸ್‌ಬಿ, ಕಬ್ಬನ್ ಪಾರ್ಕ್, ವಸತಿ ಇಲಾಖೆ ಮ್ಯೂಸಿಯಂ, ತೋಟಗಾರಿಕೆ ಇಲಾಖೆ, ಪೋಸ್ಟ್ ಆಫೀಸ್, ನ್ಯಾಷನಲ್ ಎರೋನಾಟಿಕ್ಸ್ ಲಿಮಿಟೆಡ್, ಎಲ್‌ಐಸಿ, ಬಿಎಸ್ಎನ್ಎಲ್, ಬಿಡಿಎ, ಬಿಎಂಆರ್‌ಸಿಎಲ್, ಡಿಆರ್‌ಡಿಓ, ಹೈಕೋರ್ಟ್ ವಸತಿಗೃಹ, ಮುಂತಾದ ಸರ್ಕಾರಿ ಕಚೇರಿಗಳು ಒಟ್ಟು ₹36.25 ಕೋಟಿ ವಿದ್ಯುತ್ ಶುಲ್ಕ ಪಾವತಿಸಬೇಕಾಗಿದೆ ಎಂದು ಇಂದಿರಾನಗರ ಕಾರ್ಯನಿರ್ವಾಹಕ ಇಂಜಿನಿಯರ್ ನೀಡಿರುವ ನೋಟಿಸ್‌ನಲ್ಲಿ ವಿವರಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ನ.18ರಿಂದ 20ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

ಹಾಗೆಯೇ, ವೈಟ್ ಫೀಲ್ಡ್ ವಿಭಾಗದ ವ್ಯಾಪ್ತಿಗೆ ಬರುವ ಒಟ್ಟು 7 ವಾರ್ಡ್‌ಗಳಿಂದ ಬಿಡಬ್ಲೂಎಸ್‌ಎಸ್‌ಬಿ ಮತ್ತು ಬಿಬಿಎಂಪಿಯಿಂದ ಒಟ್ಟು ₹5.81 ಕೋಟಿ ವಿದ್ಯುತ್ ಶುಲ್ಕ ಬಾಕಿ ಇದೆ.

ಇತ್ತೀಚೆಗೆ ನಡೆದ ಅಧಿಕಾರಿಗಳ ಸಭೆಯಲ್ಲಿ, "ವಿದ್ಯುತ್ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಬೇಕು" ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಸೂಚನೆ ನೀಡಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app