- www.darparna.net ವೆಬ್ಸೈಟ್ಗೆ ಭೇಟಿ ನೀಡಿ ಪ್ರತಿಕ್ರಿಯಿಸಿ
- ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸ ಮೂಡಿಸುವುದು
ಸಾರ್ವಜನಿಕರಲ್ಲಿ ನಂಬಿಕೆ ಹಾಗೂ ವಿಶ್ವಾಸ ಮೂಡಿಸುವ ಸಲುವಾಗಿ ಬೆಂಗಳೂರಿನ ಬಂಡೆಪಾಳ್ಯ ಪೊಲೀಸ್ ಠಾಣೆ 'ದರ್ಪಣ' ಎನ್ನುವ ವೆಬ್ಸೈಟ್ ಒಂದನ್ನು ರೂಪಿಸಿದೆ. ಸ್ಟೇಷನ್ಗೆ ಬರುವ ಸಾರ್ವಜನಿಕರಿಂದ ಸಲಹೆ, ದೂರು ಇತ್ಯಾದಿ ಪ್ರತಿಕ್ರಿಯೆಗಳನ್ನು ಆಹ್ವಾನಿಸಲಾಗಿದ್ದು, ಅದನ್ನು ಆಧರಿಸಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ.
ಪೊಲೀಸ್ ಠಾಣೆಗೆ ಭೇಟಿ ನೀಡಿದಾಗ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಸಮಸ್ಯೆ ಹಂಚಿಕೊಂಡಾಗ, ಅಲ್ಲಿ ಕಂಡು ಬರುವ ಲೋಪದೋಷಗಳ ಕುರಿತು, ಸೇವೆಯ ಕುರಿತು ಮುಕ್ತ ಮನಸ್ಸಿನಿಂದ 'ದರ್ಪಣ' ವೆಬ್ಸೈಟ್ನಲ್ಲಿ ಪ್ರತಿಕ್ರಿಯೆ ಹಂಚಿಕೊಳ್ಳಬಹುದು.
'ದರ್ಪಣ' ವೆಬ್ಸೈಟ್ನಲ್ಲಿ ಸಾರ್ವಜನಿಕರು ನೀಡಿದ ಅಭಿಪ್ರಾಯ ಆಧರಿಸಿ ಸಮಸ್ಯೆ ಬಗೆಹರಿಸುವ ಕಾರ್ಯವನ್ನು ಪೊಲೀಸ್ ಠಾಣೆಯ ಅಧಿಕಾರಿಗಳು ಮಾಡುತ್ತಾರೆ. ಬೆಂಗಳೂರಿನ ಬೊಮ್ಮನಹಳ್ಳಿಯ ಬಂಡೆಪಾಳ್ಯ ಪೊಲೀಸ್ ಠಾಣೆ ಮಾಡುತ್ತಿದೆ. 'ದರ್ಪಣ' ವೆಬ್ಸೈಟ್ ಇನ್ಸ್ಪೆಕ್ಟರ್ ಎಲ್ ವೈ ರಾಜೇಶ್ ಅವರ ಆಶಯದಂತೆ ಆರಂಭವಾಗಿದೆ.
ದೂರು ನೀಡುವುದು ಹೇಗೆ?
ಪೊಲೀಸ್ ಠಾಣೆಗೆ ಭೇಟಿ ನೀಡಿದ ನಂತರ www.darparna.net ವೆಬ್ಸೈಟ್ಗೆ ಭೇಟಿ ನೀಡಿ, ಫಾರ್ಮ್ ಎಂಬ ಕಾಲಮ್ ಅನ್ನು ತೆರೆದು, ಅದರಲ್ಲಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಸಮಯ, ಅದರ ಉದ್ದೇಶ, ಸಂಪರ್ಕಕ್ಕೆ ದೊರೆತ ಅಧಿಕಾರಿ ಹೆಸರು, ತೆಗೆದುಕೊಂಡ ನಿರ್ಧಾರವನ್ನು ಈ ಕಾಲಮ್ಗಳನ್ನು ತುಂಬಬೇಕು. ಅದಾದ ನಂತರ ಜನರಿಗೆ ಸಿಕ್ಕ ಸೇವೆಯನ್ನು ಆಧರಿಸಿ ಅತ್ಯುತ್ತಮ, ತುಂಬಾ ಒಳ್ಳೆಯದು, ಉತ್ತಮ, ಸರಾಸರಿ ಮತ್ತು ಕಳಪೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು| ₹30 ಕೋಟಿ ಮೌಲ್ಯದ 22 ಗುಂಟೆ ಜಾಗ ವಶಕ್ಕೆ ಪಡೆದ ಬಿಡಿಎ
ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಿಶ್ವಾಸವನ್ನು ಮೂಡಿಸಲು 'ದರ್ಪಣ' ವೆಬ್ಸೈಟ್ ರೂಪಿಸಲಾಗಿದೆ. ಈ ವೆಬ್ಸೈಟ್ ಈ ವರ್ಷದ ಮಾರ್ಚ್ನಲ್ಲಿ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೂ 270 ಕ್ಕೂ ಹೆಚ್ಚು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಈ ಪರಿಕಲ್ಪನೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಪ್ರತಿಕ್ರಿಯೆ ನೀಡಿದ ಸಂದರ್ಶಕರಿಗೆ ಫೋನ್ ಮೂಲಕ ಅಥವಾ ಖುದ್ದಾಗಿ ಸ್ವೀಕೃತಿ ಸಂದೇಶ ಕಳಿಸಲಾಗುವುದು.
ಪ್ರತಿ 15 ದಿನಗಳಿಗೊಮ್ಮೆ ಇನ್ಸ್ಪೆಕ್ಟರ್ ಮತ್ತು ಹಿರಿಯ ಸಬ್ ಇನ್ಸ್ಪೆಕ್ಟರ್ಗಳು ಸಾರ್ವಜನಿಕರ ಪ್ರತಿಕ್ರಿಯೆಯನ್ನು ಪರಿಶೀಲಿಸುತ್ತಾರೆ ಮತ್ತು ಮಾಸಿಕ ಠಾಣೆ ಪರೇಡ್ನಲ್ಲಿ ಉತ್ತಮ ವಿಮರ್ಶೆಯನ್ನು ಪಡೆದ ಪೊಲೀಸರನ್ನು ಪುರಸ್ಕರಿಸಲಾಗುವುದು.