
- ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ಸಮೀಕ್ಷೆ
- ನ.9ರಿಂದ ಡಿ.23 ರವರೆಗೆ ಬೆಂಗಳೂರಿನ ನಾಗರಿಕ ಗ್ರಹಿಕೆ ಸಮೀಕ್ಷೆ
ಜನರ ಜೀವನದ ಗುಣಮಟ್ಟ ನಿರ್ಣಯಿಸುವ ಸಲುವಾಗಿ ನಾಗರಿಕರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಲು ನ.9 ರಿಂದ ಡಿ.23 ರವರೆಗೆ ಬೆಂಗಳೂರಿನ ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಬೆಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆ ನಡೆಸುತ್ತಿದೆ.
ಭಾರತ ಸರ್ಕಾರವು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಸ್ಮಾರ್ಟ್ ಸಿಟಿ ಮಿಷನ್, ಜೀವನ ಸುಲಭ ಸೂಚ್ಯಂಕ ಮೌಲ್ಯಮಾಪನದ ಕುರಿತು ನಾಗರಿಕ ಗ್ರಹಿಕೆ ಸಮೀಕ್ಷೆಯನ್ನು ಪ್ರಾರಂಭಿಸಿದೆ.
ಸಾರ್ವಜನಿಕರು ಈ ಲಿಂಕ್ (https://eol2022.org/CitizenFeedback) ಭೇಟಿ ನೀಡಿ ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಾಗರಿಕ ಗ್ರಹಿಕೆ ಸಮೀಕ್ಷೆಯಲ್ಲಿ ಭಾಗವಹಿಸಿ ಪ್ರಶ್ನಾವಳಿಗಳಿಗೆ ಉತ್ತರಿಸಬಹುದು. ಜನರಿಂದ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಆಡಳಿತ ಸುಧಾರಣೆ, ನೀತಿಗಳನ್ನು ರೂಪಿಸಿ ಸಾರ್ವಜನಿಕರ ಒಳಿತಿಗಾಗಿ ಉತ್ತಮ ಮೂಲಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

'ನಾಗರಿಕ ಗ್ರಹಿಕೆ ಸಮೀಕ್ಷೆಯು ನಗರ ಫಲಿತಾಂಶಗಳ ಚೌಕಟ್ಟು-2022' ಸ್ಥಳೀಯ ಆಡಳಿತದಲ್ಲಿ ಜನರನ್ನು ತೊಡಗಿಸಿಕೊಳ್ಳುವ ಗುರಿಯನ್ನು ಹೊಂದಿದೆ ಮತ್ತು ಭಾಗವಹಿಸುವ ಎಲ್ಲ ನಗರಗಳಿಗೆ ನಿರ್ದಿಷ್ಟ ನಗರ ಮಟ್ಟದ ಚಟುವಟಿಕೆಗಳ ಅರಿವನ್ನು ಹೆಚ್ಚಿಸುತ್ತದೆ' ಎಂದು ಹೇಳಿದೆ.