ಬೆಂಗಳೂರು | ಈದ್ಗಾ ಮೈದಾನದ ವಿವಾದಗಳಿಗೆ ತೆರೆ ಎಳೆಯಲು ಶಾಂತಿಸಭೆ: ಡಿಸಿಪಿ ಲಕ್ಷ್ಮಣ್‌ ನಿಂಬರಗಿ

  • ಈದ್ಗಾ ಮೈದಾನ ಯಾವುದೇ ಚಟುವಟಿಕೆಗೆ ನೀಡದಂತೆ ಸೂಚನೆ
  • ಉಭಯ ನಾಯಕರಿಗೆ ಸೌರ್ಹಾದತೆ ಕಾಪಾಡಲು ಮನವಿ

ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನವು ಕಂದಾಯ ಇಲಾಖೆಯ ಸ್ವತ್ತಾದ ಬೆನ್ನಲೇ, ಈದ್ಗಾ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ಸಲುವಾಗಿ ವಿವಾದಗಳು ಹೆಚ್ಚಾಗಿದ್ದು, ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್‌ ನಿಂಬರಗಿ ಮುಸ್ಲಿಂ ಮುಖಂಡರ ಶಾಂತಿಸಭೆ ನಡೆಸಿದರು.

ಚಾಮರಾಜಪೇಟೆ ಪೊಲೀಸ್ ಠಾಣಾ ಆವರಣದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಾಂತಿಸಭೆಯಲ್ಲಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ಸದಸ್ಯರು, ಹಾಲಿ ಮತ್ತು ಮಾಜಿ ಪಾಲಿಕೆ ಸದಸ್ಯರು, ಮೌಲ್ವಿಗಳು, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಸೇರಿ ಮತ್ತಿತರು ಭಾಗವಹಿಸಿದ್ದರು.

ಚಾಮರಾಜಪೇಟೆ ಈದ್ಗಾ ಮೈದಾನವನ್ನು ಯಾವುದೇ ಚಟುವಟಿಕೆಗೆ ನೀಡದಂತೆ ರಾಜ್ಯ ಸರ್ಕಾರಕ್ಕೆ ಗುಪ್ತದಳ ಸೂಚಿಸಿದೆ ಎನ್ನಲಾಗಿದೆ. ವಿವಿಧ ಕಾರಣಗಳಿಗಾಗಿ ಮೈದಾನವನ್ನು ಯಾರಿಗೂ ನೀಡದೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಗುಪ್ತದಳವು ಸಲಹೆ ನೀಡಿದೆ.

ಈ ದಿನ.ಕಾಮ್‌?: ಈದ್ಗಾ ವಿವಾದ| ಹುಬ್ಬಳ್ಳಿಯ ಹಾದಿ ಹಿಡಿಯುತ್ತಿದೆಯೇ ಬೆಂಗಳೂರು ಚಾಮರಾಜಪೇಟೆ ಮೈದಾನ ವಿವಾದ!

ಆಗಸ್ಟ್ 9 ರಂದು ಈದ್ಗಾ ಮೈದಾನದ ವಿವಾದ ಕುರಿತು ಹಿಂದೂ ಮುಖಂಡರೊಂದಿಗೆ ಸಭೆ ನಡೆಸಿದ್ದ ಪೊಲೀಸರು, ಆಗಸ್ಟ್ 10 ರಂದು ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸಿದ್ದಾರೆ. ಉಭಯ ನಾಯಕರಿಗೆ ಶಾಂತಿ, ಸ್ನೇಹ ಹಾಗೂ ಸೌರ್ಹಾದತೆ ಕಾಪಾಡಲು ಪೊಲೀಸರು ಮನವಿ ಮಾಡಿದ್ದಾರೆ

“ಕೋಮು ಸೌಹಾರ್ದತೆ, ಕಾನೂನು ಸುವ್ಯವಸ್ಥೆಗೆ ವಿವಾದಗಳನ್ನು ಉಂಟುಮಾಡುವಂತಹ ವಿಚಾರಗಳ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಪಕ್ಷದ ಎಲ್ಲ ಮುಂಖಂಡರಿಗೆ ಈದ್ಗಾ ಮೈದಾನದ ವಿಚಾರದಲ್ಲಿ, ಕಡ್ಡಾಯವಾಗಿ ಕಾನೂನು ಪಾಲಿಸುವಂತೆ ಸೂಚನೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೈದಾನಕ್ಕೆ ಸಂಬಂಧಿಸಿದಂತೆ ಹರಿದಾಡುವ  ಸಂದೇಶಗಳಿಗೆ ಕಮೆಂಟ್ ಮತ್ತು ಪೋಸ್ಟ್‌ಗಳ ಕುರಿತು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ವರದಿಗಾರರಿಗೆ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್