ಬೆಂಗಳೂರು | ರೈಲು ನಿಲ್ದಾಣಗಳ ಸೌಂದರ್ಯ ಹೆಚ್ಚಿಸಲು ಸಸಿಗಳನ್ನು ನೆಡಲು ಸಜ್ಜಾದ ರೈಲ್ವೆ ಇಲಾಖೆ

  • ಹಳಿಗಳ ಪಕ್ಕ ಹೂವಿನ ಸಸಿ ನೆಡಲು ರೈಲ್ವೆ ಇಲಾಖೆ ನಿರ್ಧಾರ
  • ನಿಲ್ದಾಣಗಳಲ್ಲಿ ಗಿಡ ನೆಡಲು ಸಾರ್ವಜನಿಕರೂ ಕೈಜೋಡಿಸಬಹುದು

ಬೆಂಗಳೂರಿನ ಆರು ರೈಲು ನಿಲ್ದಾಣಗಳ ಸೌಂದರ್ಯ ಹೆಚ್ಚಿಸಲು ನಿಲ್ದಾಣಗಳ ಹಳಿಗಳ ಪಕ್ಕ ಅಲಂಕಾರಿಕ ಮತ್ತು ಔಷಧೀಯ ಸಸಿಗಳನ್ನು ನೆಡಲು ರೈಲ್ವೆ ಇಲಾಖೆ ಮುಂದಾಗಿದೆ.

ಪ್ರಸ್ತುತ ನಗರದ ಎಲ್ಲ ನಿಲ್ದಾಣಗಳಲ್ಲಿ ರೈಲು ಹಳಿಗಳ ಪಕ್ಕದ ಖಾಲಿ ಜಾಗದಲ್ಲಿ ಪ್ರಯಾಣಿಕರು ಉಗುಳುವುದು, ತಿಂಡಿ ತಿನಿಸುಗಳ ಪೊಟ್ಟಣ, ಪ್ಲಾಸ್ಟಿಕ್ ಎಸೆಯುವುದು ಸೇರಿದಂತೆ ಇತರ ಕಸವನ್ನು ಹಾಕುತ್ತಿರುತ್ತಾರೆ.

ನಿಲ್ದಾಣಗಳನ್ನು ಶುಚಿತ್ವವಾಗಿಟ್ಟುಕೊಳ್ಳಲು, ಕಸ ಹಾಕುವುದನ್ನು ತಡೆಯಲು ಹಾಗೂ ನಿಲ್ದಾಣದ ಸೌಂದರ್ಯವನ್ನು ಹೆಚ್ಚಿಸಲು ಹಳಿಗಳ ಉದ್ದಕ್ಕೂ ಮತ್ತು ನಿಲ್ದಾಣದ ಸಮೀಪವಿರುವ ಖಾಲಿ ಜಾಗದಲ್ಲಿ ಸಸಿಗಳು, ಬಳ್ಳಿಗಳು, ಗಿಡಮೂಲಿಕೆಗಳು, ಅಲಂಕಾರಿಕ ಸಸ್ಯಗಳು ಹಾಗೂ ಹೂವಿನ ಸಸಿಗಳನ್ನು ನೆಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ದೋಷಪೂರಿತ ರಾಷ್ಟ್ರಧ್ವಜ ಮಾರಾಟ ಮಾಡಬೇಡಿ: ವಿಶೇಷ ಆಯುಕ್ತ ರಂಗಪ್ಪ

ಮೊದಲ ಹಂತದಲ್ಲಿ ಬೈಯ್ಯಪ್ಪನಹಳ್ಳಿ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ (9100 ಚ.ಮೀ), ಯಲಹಂಕ (1,195 ಚ.ಮೀ), ಹೆಬ್ಬಾಳ (4,100 ಚ.ಮೀ), ಚನ್ನಸಂದ್ರ (1,500 ಚ.ಮೀ), ಯಶವಂತಪುರ (7,505 ಚ.ಮೀ), ಕೆಎಸ್ಆರ್ ಬೆಂಗಳೂರು (550 ಚ.ಮೀ) ಸೇರಿದಂತೆ ಒಟ್ಟು ಆರು ನಿಲ್ದಾಣಗಳಲ್ಲಿ ಈ ಪರಿಸರ ಸ್ನೇಹಿ ಯೋಜನೆಯ ಅನುಷ್ಠಾನಗೊಳಿಸಲಾಗುತ್ತಿದೆ.

ಈ ನೂತನ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಎನ್‌ಜಿಓಗಳು, ಟ್ರಸ್ಟ್‌ಗಳು, ದತ್ತಿ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸ್ವ-ಸಹಾಯ ಸಂಸ್ಥೆಗಳು ಕೂಡಾ ರೇಲ್ವೆ ನಿಲ್ದಾಣದಲ್ಲಿ ಗಿಡ ನೆಡಲು ಕೈ ಜೋಡಿಸಬಹುದು ಎಂದು ಇಲಾಖೆ ಹೇಳಿದೆ.

ಈ ಕುರಿತಂತೆ ಬೆಂಗಳೂರು ರೈಲ್ವೆ ವಿಭಾಗೀಯ ಹಿರಿಯ ಇಂಜಿನಿಯರ್ ಪರ್ವೇಶ ಕುಮಾರ್ ಅವರನ್ನು ಸಂಪರ್ಕಿಸಬಹುದು ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್