- http://bangaloreliteraturefestival.org/ ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿ
- ಎರಡು ದಿನದ ಉತ್ಸವ ಬೆಳಗ್ಗೆ 10 ರಿಂದ ಆರಂಭ; ಮಕ್ಕಳಿಗೆ ಪ್ರತ್ಯೇಕ ವೇದಿಕೆ
11ನೇ ಆವೃತ್ತಿಯ ಬೆಂಗಳೂರು ಸಾಹಿತ್ಯ ಉತ್ಸವವನ್ನು ಆಚರಿಸಲು ಡಿ.3 ಮತ್ತು ಡಿ.4 ದಿನಾಂಕ ನಿಗದಿಪಡಿಸಲಾಗಿದ್ದು, ನಗರದ ಕುಮಾರ ಕೃಪಾ ರಸ್ತೆಯಲ್ಲಿರುವ ಅಶೋಕ ಹೋಟೆಲ್ ಬಳಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟಕರು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ವಿದ್ಯಮಾನ, ಕಲೆ, ಸಿನಿಮಾ, ಇತಿಹಾಸ, ಆಹಾರ, ನವೋದ್ಯಮ, ಆರ್ಥಿಕತೆ ಹಾಗೂ ಸಂಸ್ಕೃತಿ ಕುರಿತು ಚರ್ಚಿಸುವ ಈ ಉತ್ಸವದಲ್ಲಿ, 280ಕ್ಕೂ ಹೆಚ್ಚು ಲೇಖಕರು ಭಾಗವಹಿಸಲಿದ್ದಾರೆ. 150ಕ್ಕೂ ಹೆಚ್ಚು ವಿಚಾರ ಸಂಕಿರಣ ಬೆಳಗ್ಗೆ 10 ರಿಂದ ನಡೆಯಲಿದೆ.
ಸಾಹಿತ್ಯದ ಜತೆಗೆ ಸಂಗೀತ, ಸಿನಿಮಾ, ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳ ಪ್ರಮುಖರು ದೇಶ–ವಿದೇಶಗಳಿಂದ ಈ ಉತ್ಸವಕ್ಕೆ ಆಗಮಿಸಲಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | 2023-24ನೇ ಸಾಲಿನ ವಾರ್ಷಿಕ ಬಜೆಟ್: ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕೆ ಚಾಲನೆ
ಭಾಷಣ, ವಿಚಾರಗೋಷ್ಠಿ ಮಾತ್ರವಲ್ಲದೆ ಮಕ್ಕಳಿಗಾಗಿ ಪ್ರತ್ಯೇಕ ವೇದಿಕೆ, ಪುಸ್ತಕ ಮಾರಾಟ ಮಳಿಗೆ ಇರಲಿದೆ. ಈ ಉತ್ಸವದಲ್ಲಿ ಭಾಗವಹಿಸಲು ಇಚ್ಛಿಸುವವರು, ಈಗಾಗಲೇ ಆರಂಭವಾಗಿರುವ ನೋಂದಣಿ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಪ್ರವೇಶವು ಉಚಿತವಾಗಿರಲಿದೆ. http://bangaloreliteraturefestival.org/ ಭಾಗವಹಿಸಲು ಇಚ್ಚಿಸುವವರು ಬೆಂಗಳೂರು ಸಾಹಿತ್ಯ ಉತ್ಸವ ವೆಬ್ಸೈಟಿಗೆ ತೆರಳಿ ಅಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು.
ಉತ್ಸವಕ್ಕೆ ಆಗಮಿಸಲಿರುವ ಗಣ್ಯರು?
ಬೂಕರ್ ಪ್ರಶಸ್ತಿ ವಿಜೇತರಾದ ಗೀತಾಂಜಲಿ ಶ್ರೀ, ಶೆಹನ್ ಕರುಣಾತಿಲಕ, ಪ್ರವಾಸಿ ಬರಹಗಾರ ಪಿಕೊ ಲೈಯರ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ್ ಮೌಜೊ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಾದ ಸಾರಾ ಜೋಸೆಫ್, ನಟರಾದ ಫರ್ಹಾನ್ ಅಖ್ತರ್, ಕನ್ನಡದ ನಟ ರಮೇಶ್ ಅರವಿಂದ್, ಬಾಲಿವುಡ್ ನಟ ಕಬೀರ್ ಬೇಡಿ, ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್ ಛೆಟ್ರಿ, ಲೇಖಕ ವಿಕ್ರಮ್ ಚಂದ್ರ, ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ‘ಪದ್ಮಶ್ರೀ’ ಪ್ರಶಸ್ತಿ ಪುರಸ್ಕೃತ ಕಲಾವಿದೆ ಮಂಜಮ್ಮ ಜೋಗತಿ ಸೇರಿದಂತೆ ಹಲವರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.