ಬೆಂಗಳೂರು | ಕಸಾಪದಿಂದ 2022ನೇ ಸಾಲಿನ ಸಾಹಿತ್ಯ ದತ್ತಿ ಪ್ರಶಸ್ತಿ ಪ್ರಕಟ

  • ಒಂದು ವರ್ಷ ಪುರುಷ ಸಾಹಿತಿಗೆ ಮತ್ತೊಂದು ವರ್ಷ ಮಹಿಳಾ ಸಾಹಿತಿಗೆ ಪ್ರಶಸ್ತಿ ಪ್ರದಾನ
  • ಕನಿಷ್ಠ ಐದು ಕೃತಿಗಳನ್ನು ಬರೆದಿರುವ ಸಾಹಿತಿಗಳಿಗೆ ಈ ದತ್ತಿ ಪ್ರಶಸ್ತಿ ನೀಡಲಾಗುವುದು

ಸಾಹಿತ್ಯ ಕ್ಷೇತ್ರದಲ್ಲಿ ಅಗಣಿತ ಸಾಧನೆ ಮಾಡಿ ತೆರೆಮರೆಯಲ್ಲಿ ಉಳಿದ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತಿನಿಂದ 2021-2022ನೇ ಸಾಲಿನ 'ಶ್ರೀ ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ  ಪ್ರಶಸ್ತಿ ನೀಡಲಾಗುತ್ತಿದ್ದು, ಡಾ. ಸುರೇಶ ಪಾಟೀಲ್ ಹಾಗೂ ಪ್ರೊ ಎಲ್ ವಿ ಶಾಂತಕುಮಾರಿ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.  

ಏನಿದು ದತ್ತಿ ಪ್ರಶಸ್ತಿ ?

Eedina App

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಡಾ. ವರದಾ ಶ್ರೀನಿವಾಸ ಅವರು ದಿ. ಟಿ. ಶ್ರೀನಿವಾಸ ಸ್ಮರಣಾರ್ಥ ಶ್ರೀ ಪಿ.ಕೆ. ನಾರಾಯಣ ಅವರ ಹೆಸರಿನಲ್ಲಿ ದತ್ತಿ ಇಟ್ಟಿದ್ದು, ಇದರ ಪ್ರಕಾರ, ಒಂದು ವರ್ಷ ಪುರುಷ ಸಾಹಿತಿಗೆ ಮತ್ತೊಂದು ವರ್ಷ ಮಹಿಳಾ ಸಾಹಿತಿಗೆ ಈ ಪ್ರಶಸ್ತಿ ನೀಡಬೇಕು. ಈ ಪ್ರಶಸ್ತಿಯನ್ನು ಪ್ರಸಿದ್ಧ ಸಾಹಿತಿಗಳಾಗಿದ್ದೂ, ಇದುವರೆಗೆ ಯಾವುದೇ ಪ್ರಶಸ್ತಿಗೆ ಭಾಜನರಾಗದೆ ಎಲೆಮರೆ ಕಾಯಿಯಂತಿರುವ, ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಕನಿಷ್ಠ ಐದು ಕೃತಿಗಳನ್ನು ಬರೆದಿರುವ ಸಾಹಿತಿಗಳಿಗೆ ಈ ದತ್ತಿ ಪ್ರಶಸ್ತಿ ನೀಡುವುದು ಆಶಯವಾಗಿದೆ.

ಪ್ರಶಸ್ತಿ ಆಯ್ಕೆ ಸಮಿತಿ

AV Eye Hospital ad

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ 'ಶ್ರೀ ಟಿ. ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ-ಸಾಹಿತ್ಯ ದತ್ತಿ ಪ್ರಶಸ್ತಿ ಆಯ್ಕೆ ಸಮಿತಿ ನಡೆಯಿತು. ಇದರಲ್ಲಿ 2021ನೇ ಸಾಲಿನ ಪ್ರಸ್ತುತ ಪ್ರಶಸ್ತಿಗೆ ಡಾ. ಸುರೇಶ ಪಾಟೀಲ್ ಹಾಗೂ 2022ನೇ ಸಾಲಿನ ಪ್ರಶಸ್ತಿಗೆ ಪ್ರೊ ಎಲ್.ವಿ. ಶಾಂತಕುಮಾರಿ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಮೃತ 'ಕೋವಿಡ್ ವಾರಿಯರ್ಸ್‌'ಗೆ ಇನ್ನೂ ಸಿಗದ ಪರಿಹಾರ: ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಜ್ಜಾದ ಗ್ರಾ.ಪಂ. ಸಿಬ್ಬಂದಿ

ಪ್ರಶಸ್ತಿ ಪ್ರದಾನ

ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಡಿಸೆಂಬರ್ 17 ರಂದು ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ದತ್ತಿ ಪ್ರಶಸ್ತಿಯ ಜೊತೆಗೆ ₹10,000 ನಗದು ನೀಡಿ ಸನ್ಮಾನಿಸಲಾಗುವದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರಾಮಲಿಂಗ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app