ಪುತ್ಥಳಿ ನಿರ್ಮಾಣಕ್ಕಾಗಿ ಸಾರ್ವಜನಿಕರ ತೆರಿಗೆ ಹಣ ದುಂದುವೆಚ್ಚ ಬೇಡ: ನೈಜ ಹೋರಾಟಗಾರರ ವೇದಿಕೆ

  • 2021ರಲ್ಲಿ ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಪುತ್ಥಳಿ ನವೀಕರಣಗೊಳಿಸಲಾಗಿದೆ
  • ಮತಬ್ಯಾಂಕ್ ದೃಷ್ಟಿಯಿಂದ ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ

ಪುತ್ಥಳಿ ನಿರ್ಮಿಸುವ ನೆಪದಲ್ಲಿ ರಾಜ್ಯ ಸರ್ಕಾರ ಸಾರ್ವಜನಿಕರ ತೆರಿಗೆ ಹಣವನ್ನು ದುಂದು ವೆಚ್ಚ ಮಾಡುತ್ತಿದೆ ಎಂದು ನೈಜ ಹೋರಾಟಗಾರರ ವೇದಿಕೆ ಆರೋಪಿಸಿದೆ.

ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಸಾಮಾಜಿಕ ಹೋರಾಟಗಾರ, ನೈಜ ಹೋರಾಟಗಾರರ ವೇದಿಕೆ ಎಚ್‌ ಎಂ ವೇಂಕಟೇಶ್, "ಬಸವಣ್ಣನವರ ಪುತ್ಥಳಿಯನ್ನು ವಿಧಾನಸೌಧದ ಆವರಣದಲ್ಲಿ ನಿರ್ಮಾಣ ಮಾಡುವುದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಈಗಾಗಲೇ ಬಸವಣ್ಣನವರ ಪುತ್ಥಳಿಯನ್ನು ಕರ್ನಾಟಕದಾದ್ಯಂತ ನಿರ್ಮಿಸಲಾಗಿದೆ. ಬಹು ಮುಖ್ಯವಾಗಿ ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿ ‘ಅಶ್ವರೂಢ ಬಸವಣ್ಣ’ ಪುತ್ಥಳಿ ಸ್ಥಾಪನೆಯಾಗಿ ಹಲವು ವರ್ಷಗಳೆ ಕಳೆದಿವೆ ಹಾಗೂ 2021ರಲ್ಲಿ ಈ ಸ್ಥಳವನ್ನು ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ನವೀಕರಣಗೊಳಿಸಲಾಗಿದೆ” ಎಂದು ಉಲ್ಲೇಖಿಸಿದ್ದಾರೆ.

Eedina App

"ಇಷ್ಟೊಂದು ಪ್ರತಿಮೆಗಳು ಇದ್ದರೂ ಅದರಲ್ಲೂ ವಿಧಾನಸೌಧದ ಕೂಗಳತೆ ದೂರದಲ್ಲಿಯೇ ಅಶ್ವರೂಢ ಪ್ರತಿಮೆ ಇದ್ದರೂ ಈ ನೂತನ ಪುತ್ಥಳಿ ನಿರ್ಮಾಣ ಏಕೆ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಸಚಿವ ಸಂಪುಟದಲ್ಲಿ ಹೆಚ್ಚಾಗಿ ವೀರಶೈವ ಲಿಂಗಾಯತರು ಇರುವುದರಿಂದ ಈ ಅನುಮೋದನೆ ದೊರೆತಿದೆಯೇ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ" ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಶೇ.3ರಷ್ಟು ಉದ್ಯೋಗಿಗಳನ್ನು ವಜಾಗೊಳಿಸಿದ ಜೊಮ್ಯಾಟೋ

AV Eye Hospital ad

"ಎಲ್ಲರನ್ನು ಸಮಾನವಾಗಿ ಜಾತ್ಯತೀತ ಮನೋಭಾವನೆಯಿಂದ ಕಾಣುತ್ತಿದ್ದ ಬಸವಣ್ಣನವರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು, ಮತಬ್ಯಾಂಕ್ ದೃಷ್ಟಿಯಿಂದ ಅವರ ಪುತ್ಥಳಿಯನ್ನು ಪ್ರತಿಷ್ಠಾಪಿಸುವುದು ಸರಿಯಲ್ಲ" ಎಂದು ತಿಳಿಸಿದ್ದಾರೆ.

"ವಿಧಾನಸೌಧದ ಕೂಗಳತೆ ದೂರದಲ್ಲಿ ಈಗಾಗಲೇ ಪ್ರತಿಮೆ ಇರುವ ಕಾರಣ, ಕೂಡಲೇ ನೂತನ ಪುತ್ಥಳಿ ನಿರ್ಮಾಣ ಯೋಜನೆಯನ್ನು ಕೈಬಿಡಬೇಕು. ಈಗಿರುವ ಬಸವಣ್ಣನವರ ಪ್ರತಿಮೆ ವೃತ್ತಕ್ಕೆ 'ಬಸವೇಶ್ವರ ವೃತ್ತ' ಎಂದು ನಾಮಕಾರಣ ಮಾಡಬೇಕು. ಪುತ್ಥಳಿಗೆ ವೆಚ್ಚವಾಗುವ ಹಣವನ್ನು ಬಸವಣ್ಣನವರ ಹೆಸರಿನಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸಹಾಯ ಮಾಡಬೇಕು" ಎಂದು ವಿನಂತಿ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app