ಬೆಂಗಳೂರು | ಸರ್ಜಾಪುರ ಮತ್ತು ಹೆಬ್ಬಾಳ ಮೆಟ್ರೋ ರೈಲು ಮಾರ್ಗಕ್ಕೆ ಸರ್ವೇ ಕಾರ್ಯ ಆರಂಭ

  • ಅಂದಾಜು ₹15 ಸಾವಿರ ಕೋಟಿ ಮೊತ್ತದ ಮೆಟ್ರೋ ಯೋಜನೆ
  • ಕೇಂದ್ರ ಮತ್ತು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಕಾಮಗಾರಿ

ಬೆಂಗಳೂರು 'ನಮ್ಮ ಮೆಟ್ರೋ' ರೈಲು ಮಾರ್ಗದ ಮೂರನೇ ಹಂತದ ಯೋಜನೆಗೆ ಸರ್ಕಾರದಿಂದ ಒಪ್ಪಿಗೆ ದೊರೆತಿದೆ. ಸರ್ಜಾಪುರ ಮತ್ತು ಹೆಬ್ಬಾಳ ನಡುವಿನ 37 ಕಿ.ಮೀ ಉದ್ದದ ರೈಲು ಮಾರ್ಗಕ್ಕೆ ಸರ್ವೇ ಕಾರ್ಯ ನಡೆಯುತ್ತಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022–23ನೇ ಸಾಲಿನ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದು ಅಂದಾಜು ₹15 ಸಾವಿರ ಕೋಟಿ ಮೊತ್ತದ ಯೋಜನೆಯಾಗಿದೆ. ಸರ್ಜಾಪುರ ಮತ್ತು ಹೆಬ್ಬಾಳ ಮೆಟ್ರೊ ಮಾರ್ಗವು ಅಗರ, ಕೋರಮಂಗಲ, ಡೇರಿ ವೃತ್ತದ ಮೂಲಕ ಹಾದುಹೋಗಲಿದೆ.

ಮೆಟ್ರೋ ಮಾರ್ಗದ ಮೂರನೇ ಹಂತದ ಯೋಜನೆಯ ಸಮಗ್ರ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸುವ ಕೆಲಸವನ್ನು ಮುಂಬೈ ಮೂಲದ ಕಂಪನಿಗೆ ನೀಡಲಾಗಿದೆ. ಇದರ ಸರ್ವೆ ಕಾರ್ಯ ಪ್ರಗತಿಯಲ್ಲಿದ್ದು, ಡಿಪಿಆರ್ ಸಿದ್ಧವಾಗಲು ಎಂಟು ತಿಂಗಳು ಬೇಕಾಗಲಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು, ಬೆಂಗಳೂರು ಚಳಿ ಚಳೀ.... ದಶಕದ ಬಳಿಕ ಥರಗುಡುತ್ತಿರುವ ಉದ್ಯಾನನಗರಿ!

ಇದರ ಸರ್ವೇ ಕಾರ್ಯ ಸಂಪೂರ್ಣವಾಗಿ ಮುಗಿದು ಡಿಪಿಆರ್ ಸಿದ್ಧವಾದ ಬಳಿಕ ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸಲ್ಲಿಸಲಾಗುತ್ತದೆ. ಈ ಸಂಪೂರ್ಣ ಕಾರ್ಯ ಮುಗಿಯಲು ಇನ್ನೂ ಇಂದು ವರ್ಷ ಬೇಕಾಗುತ್ತದೆ. ಈ ಬಗ್ಗೆ ಎರಡು ಸರ್ಕಾರಗಳು ಸಂಪೂರ್ಣ ಒಪ್ಪಿಗೆ ನೀಡಿದ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app