ಬೆಂಗಳೂರು | ಟಿಕೆಟ್‌ ರಹಿತ ಪ್ರಯಾಣ: ₹6 ಲಕ್ಷ ದಂಡ ವಸೂಲಿ ಮಾಡಿದ ಬಿಎಂಟಿಸಿ

  • 18,079 ಟ್ರಿಪ್‌ಗಳ ತಪಾಸಣೆ; 3,498 ಟಿಕೆಟ್‌ ರಹಿತ ಪ್ರಯಾಣಿಕರ ಪತ್ತೆ
  • ಅಕ್ಟೋಬರ್‌ನಲ್ಲಿ 3675 ಪ್ರಯಾಣಿಕರಿಂದ ₹7,09,670 ದಂಡ ವಸೂಲಿ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ಗಳಲ್ಲಿ ಟಿಕೆಟ್‌ ಇಲ್ಲದೆ ಅನಧಿಕೃತವಾಗಿ ಪ್ರಯಾಣ ಮಾಡಿದ ಪ್ರಯಾಣಿಕರಿಂದ 2022ರ ಅಕ್ಟೋಬರ್‌ನಲ್ಲಿ ಒಟ್ಟು 6,91,970 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ತಿಳಿಸಿದೆ.

ದಂಡ ವಸೂಲಾತಿಯ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಿಎಂಟಿಸಿ, "ಸಂಸ್ಥೆಯ ಅಧಿಕಾರಿಗಳು ಅಕ್ಟೋಬರ್‌ನಲ್ಲಿ ಒಟ್ಟು 18,079 ಟ್ರಿಪ್‌ಗಳನ್ನು ತಪಾಸಣೆ ನಡೆಸಿ, 3,498 ಟಿಕೆಟ್‌ ರಹಿತ ಪ್ರಯಾಣಿಕರನ್ನು ಪತ್ತೆ ಹಚ್ಚಿದ್ದಾರೆ. ಅವರಿಂದ ಒಟ್ಟು 6,91,970 ರೂ. ದಂಡ ವಸೂಲಿ ಮಾಡಿದ್ದಾರೆ" ಎಂದು ಹೇಳಿದೆ.

Eedina App

ಟಿಕೆಟ್‌ ರಹಿತ ಪ್ರಯಾಣ ಮಾಡಿದ್ದ ಪ್ರಯಾಣಿಕರಿದ್ದ ಬಸ್‌ಗಳ ನಿರ್ವಾಹಕರ ವಿರುದ್ಧ 1,680 ಪ್ರಕರಣ ದಾಖಲಿಸಲಾಗಿದೆ ಎಂದು ಬಿಎಂಟಿಸಿ ಹೇಳಿದೆ.

ಅಲ್ಲದೆ, ಮಹಿಳಾ ಪ್ರಯಾಣಿಕರಿಗೆ ಮೀಸಲಿದ್ದ ಆಸನಗಳಲ್ಲಿ ಕುಳಿತು ಪ್ರಯಾಣಿಸಿದ್ದ 177 ಪುರುಷ ಪ್ರಯಾಣಿಕರಿಗೂ ದಂಡ ಹಾಕಲಾಗಿದ್ದು, ಮೋಟಾರು ವಾಹನ ಕಾಯ್ದೆ 1988 ಕಾಲಂ 177 ಮತ್ತು  94ರ ಪ್ರಕಾರ ಒಟ್ಟು 17,700 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆ ಹೇಳಿದೆ.

AV Eye Hospital ad

ಒಟ್ಟಾರೆಯಾಗಿ, ಅಕ್ಟೋಬರ್ ತಿಂಗಳಿನಲ್ಲಿ 3675 ಪ್ರಯಾಣಿಕರಿಂದ ಒಟ್ಟು 7,09,670 ರೂ ದಂಡವನ್ನು ವಸೂಲಿ ಮಾಡಲಾಗಿದೆ ಎಂದು ತಿಳಿಸಿದೆ.

ಈ ಸುದ್ದಿ ಓದಿದ್ದೀರಾ? ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ನೀಡಿ : ಕರ್ನಾಟಕ ಸಮಗ್ರ ಬಲಿಜ ವೇದಿಕೆ

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರು ಅಧಿಕೃತ ಟಿಕೆಟ್‌/ದಿನದ ಪಾಸು/ಮಾಸಿಕ ಪಾಸುಗಳನ್ನು ಹೊಂದಿ ಪ್ರಯಾಣಿಸಿದರೆ ಇದರಿಂದ ಸಂಸ್ಥೆ ಅನಗತ್ಯವಾಗಿ ದಂಡ ಹಾಕುವುದನ್ನು ತಡೆಯಬಹುದು. ಹಾಗೂ ಮಹಿಳಾ ಪ್ರಯಾಣಿಕರಿಗಾಗಿ ಮೀಸಲಿರುವ ಆಸನದಲ್ಲಿ ಪುರುಷರು ಕುಳಿತುಕೊಳ್ಳಬಾರದು ಎಂದು ಬಿಎಂಟಿಸಿ ವಿನಂತಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app