ಬೆಂಗಳೂರು | ನ.21ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

  • ಬೆಳಿಗ್ಗೆ 6 ರಿಂದ ಸಂಜೆ 6ಗಂಟೆವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ
  • ಕಾವೇರಿ 4ನೇ ಹಂತದ 1ನೇ ಘಟ್ಟದಡಿ ನಡೆಯಲಿವೆ ನಾನಾ ಕಾಮಗಾರಿಗಳು

ಬೆಂಗಳೂರಿನ ಹಲವೆಡೆ ನ. 21ರಂದು (ಸೋಮವಾರ) ಬೆಳಿಗ್ಗೆ 6 ರಿಂದ ಸಂಜೆ 6ಗಂಟೆವರೆಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆ ಆರ್ ಪುರಂನಿಂದ ರೇಷ್ಮೆ ಸಂಸ್ಥೆಯ ಹೊರವರ್ತುಲ ರಸ್ತೆಯ ಮೆಟ್ರೋ ನಿಲ್ದಾಣದವರೆಗೆ ಕಾವೇರಿ 4ನೇ ಹಂತದ 1ನೇ ಘಟ್ಟದಡಿಯಲ್ಲಿ ನಾನಾ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಒಂದು ದಿನ ನೀರಿನ ಪೂರೈಕೆಯಲ್ಲಿ ಸಮಸ್ಯೆಯಾಗಲಿದೆ ಎಂದು ಹೇಳಿದೆ.

ಈ ಸುದ್ದಿ ಓದಿದ್ದೀರಾ? ಮುಂದಿನ ಹತ್ತು ವರ್ಷದಲ್ಲಿ ಬೆಂಗಳೂರಿನ ಜನಸಂಖ್ಯೆ 2.50 ಕೋಟಿ ತಲುಪಲಿದೆ: ತ್ರಿಲೋಕಚಂದ್ರ

ಎಲ್ಲೆಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ?

ಜಂಬೂಸವಾರಿ ದಿಣ್ಣೆ, ಪುಟ್ಟೇನಹಳ್ಳಿ, ಕೋಣನಕುಂಟೆ ಕ್ರಾಸ್, ಜರಗನಹಳ್ಳಿ, ಜೆ.ಪಿ.ನಗರ 4, 5, 6 ಮತ್ತು 7ನೇ ಹಂತ, ಬನ್ನೇರುಘಟ್ಟ ಮುಖ್ಯ ರಸ್ತೆ, ಜಯದೇವ ಆಸ್ಪತ್ರೆ, 4ನೇ 'ಟಿ' ಬ್ಲಾಕ್ ಪಾರ್ಟ್ 'ಎ', ತಿಲಕ್ ನಗರ, ವಿಜಯ ಬ್ಯಾಂಕ್ ಲೇಔಟ್, ಬಿಳೇಕಹಳ್ಳಿ, ಹೆಚ್‌ಎಸ್‌ಆರ್ ಲೇಔಟ್ 1 ರಿಂದ 7 ಸೆಕ್ಟರ್, ಮಂಗಮ್ಮನಪಾಳ್ಯ, ಹೊಸಪಾಳ್ಯ, ಎಲೆಕ್ಟ್ರಾನಿಕ್ ಸಿಟಿ 1 ಮತ್ತು 2ನೇ ಹಂತ, 3ನೇ ಬ್ಲಾಕ್ ಕೋರಮಂಗಲ, ಮೈಕೋ ಲೇಔಟ್, ಎನ್.ಎಸ್.ಪಾಳ್ಯ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app