ಬೆಂಗಳೂರು| ನ.18ರಿಂದ 20ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

  • ನಗರದಲ್ಲಿ ಭಾನುವಾರ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
  • ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ದುರಸ್ತಿ ಕಾರ್ಯ

ವಿದ್ಯುತ್ ನಿರ್ವಹಣಾ ಕಾರ್ಯ ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ (ನ.18 ರಿಂದ 20) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಟ್ರಾನ್ಸ್‌ಫಾರ್ಮರ್ ನಿರ್ವಹಣೆ, ಜಂಪ್ ರಿಪ್ಲೇಸ್ಮೆಂಟ್ ಕೆಲಸ, ಪೈಪ್ ಹಾಕುವಿಕೆ ಸೇರಿದಂತೆ ಹಲವು ದುರಸ್ತಿ ಕಾರ್ಯಗಳು ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ನಡೆಯಲಿದೆ.

Eedina App

ಶುಕ್ರವಾರ ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ

ಎಸ್ ಎಸ್ ಲೇಔಟ್ ಎ ಬ್ಲಾಕ್, ಎಂಬಿಎ ಕಾಲೇಜು ರಸ್ತೆ, ಬಸವನಗುಡಿ ದೇವಸ್ಥಾನ ಸುತ್ತಮುತ್ತಲಿನ ಪ್ರದೇಶಗಳು, ಟೆಲಿಕಾಂ ಲೇಔಟ್ ಮೈಲನಹಳ್ಳಿ, ಕಾನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಭೈರನಾಯಕನಹಳ್ಳಿ, ಬೊಳ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಾಪುರ, ಭೈರಶೇನಹಳ್ಳಿ ಶ್ಯಾಂಭತರಪಾಳ್ಯ, ತೊಟ್ಟಿಗೆರೆ, ಹುಸ್ಕೂರು, ಬೆತ್ತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾಡಾಳ್, ದೇಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು

AV Eye Hospital ad

ಶನಿವಾರ ವಿದ್ಯುತ್ ವ್ಯತ್ಯಯ

ಬೆಸ್ಕಾಂ ವಿಭಾಗದ ನೆಲಮಂಗಲ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಭಾನುವಾರ ಎಲ್ಲಿಲ್ಲಿ ವಿದ್ಯುತ್ ವ್ಯತ್ಯಯ

ಹುಸ್ಕೂರು ರಸ್ತೆ, ಟೆಲಿಕಾಂ ಲೇಔಟ್, ಮೈಲನಹಳ್ಳಿ, ಕಾನೇಗೌಡನಹಳ್ಳಿ, ಬಸವನಹಳ್ಳಿ, ಇಸ್ಲಾಂಪುರ, ಅನಂತಪುರ, ಭೈರನಾಯಕನಹಳ್ಳಿ, ಬೊಳ್ಮಾರನಹಳ್ಳಿ, ತ್ಯಾಗದಹಳ್ಳಿ, ಕುಕ್ಕನಹಳ್ಳಿ, ಗೊಲ್ಲಹಳ್ಳಿ, ಭೈರಶೆಟ್ಟಿ ಹಳ್ಳಿ, ಗೋಪಾಲಪುರ, ಶ್ಯಾಮಭಟರಪಾಳ್ಯ, ತೊಟ್ಟಿಗೆರೆ, ಹುಸ್ಕೂರು, ಬೆತ್ತನಗೆರೆ, ಬೊಮ್ಮಶೆಟ್ಟಿಹಳ್ಳಿ, ಅರ್ಜುನಬೆಟ್ಟಹಳ್ಳಿ, ಹ್ಯಾಡಾಳ್, ದೇಗನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು, ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನ.21ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ನವೆಂಬರ್‌ 19ರಂದು ಬೆಸ್ಕಾಂ ವಿದ್ಯುತ್‌ ಅದಾಲತ್‌

ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳ 87 ಹಳ್ಳಿಗಳಲ್ಲಿ ನವೆಂಬರ್‌ 19ರಂದು (ಶನಿವಾರ) ವಿದ್ಯುತ್ ಅದಾಲತ್ ನಡೆಯಲಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಬೆಸ್ಕಾಂ ವಿದ್ಯುತ್‌ ಅದಾಲತ್‌ ಆಯೋಜಿಸುತ್ತಿದ್ದು, ಗ್ರಾಹಕರಿಂದ ಅದಾಲತ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದುವರೆಗೆ ಒಟ್ಟು 5 ವಿದ್ಯುತ್‌ ಅದಾಲತ್‌ಗಳನ್ನು ಬೆಸ್ಕಾಂ ಗ್ರಾಮೀಣ ಭಾಗದಲ್ಲಿ ಆಯೋಜಿಸಿತ್ತು.

ಗ್ರಾಹಕರ ವಿದ್ಯುತ್‌ ಸಂಬಂಧಿತ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಸೂಚಿಸುತ್ತಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತಿದೆ. ಜೊತೆಗೆ ಬೆಸ್ಕಾಂ ಒದಗಿಸುತ್ತಿರುವ ಸೇವೆಗಳು ಮತ್ತು ಯೋಜನೆಗಳ ಕುರಿತು ಅದಲಾತ್‌ನಲ್ಲಿ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುತ್ತಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app