
- ತಂತ್ರಜ್ಞಾನದ ವ್ಯಸನಕ್ಕೆ ನೋಮೋಫೋಬಿಯಾ ಎಂಬ ಹೆಸರು
- 2014ರಿಂದ ಟೆಕ್ ವ್ಯಸನದೊಂದಿಗೆ ಬಳಲುತ್ತಿರುವವರಿಗೆ ಸಮಾಲೋಚನೆ
ದೇಶದಲ್ಲಿ ತಂತ್ರಜ್ಞಾನದ ವ್ಯಸನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋಸೈನ್ಸ್ (ನಿಮ್ಹಾನ್ಸ್) 'ಡಿಜಿಟಲ್ ಡಿಟಾಕ್ಸ್'ಗಾಗಿ ಚಿಕಿತ್ಸೆ ಪ್ರಾರಂಭಿಸಿದೆ.
ಈ ಚಿಕಿತ್ಸೆಯನ್ನು ಕ್ಲಿನಿಕಲ್ ಮನಶ್ಶಾಸ್ತ್ರಜ್ಞ ಮತ್ತು ಸರ್ವಿಸ್ ಫಾರ್ ಹೆಲ್ತಿ ಯುಸ್ ಆಫ್ ಟೆಕ್ನಾಲಜಿ (ಎಸ್ಎಚ್ಯಟಿ) ಸೇವೆಯ ಸಂಯೋಜಕ ಡಾ. ಮನೋಜ್ ಕುಮಾರ್ ಶರ್ಮಾ ಅವರು ರೂಪಿಸಿದ್ದಾರೆ.
ಈ ವ್ಯಸನದ ಹೆಸರೇನು?
ಈ ತಂತ್ರಜ್ಞಾನದ ವ್ಯಸನಕ್ಕೆ ನೋಮೋಫೋಬಿಯಾ (NoMophobia) ಎಂಬ ಹೆಸರಿದೆ. 'NoMophobia' ಅನ್ನು ಬಿಡಿಸಿ ಹೇಳುವುದಾದರೆ 'No Mobile Phone Phobia'.
ಯಾರು ವೈದ್ಯರನ್ನು ಭೇಟಿ ಮಾಡಬಹುದು?
ಡಿಜಿಟಲ್ ಮಾಧ್ಯಮದಲ್ಲಿ ಹೆಚ್ಚು ಸಮಯ ಕಳೆಯುವ ಯಾವುದೇ ವ್ಯಕ್ತಿ, ತಂತ್ರಜ್ಞಾನದ ವ್ಯಸನದಿಂದಾಗಿ ತಮ್ಮ ಮನಸ್ಸು ಅಥವಾ ದೇಹವನ್ನು ನಿಯಂತ್ರಿಸಲು ಸಾಧ್ಯವಾಗದ ವ್ಯಕ್ತಿ, ಮನೆಯಿಂದ ಕೆಲಸ ಪ್ರಾರಂಭವಾದ ನಂತರ ತಮ್ಮ ಡಿಜಿಟಲ್ ಸರ್ಕ್ಯೂಟ್ನಿಂದ ಹೊರಬರಲು ಸಾಧ್ಯವಾಗದ ವಯಸ್ಕರಿಂದ ಹಿಡಿದು ಸಾಮಾಜಿಕ ಮಾಧ್ಯಮಕ್ಕೆ ಅಂಟಿಕೊಂಡಿರುವ ಹದಿಹರೆಯದವರವರು ವೈದ್ಯರನ್ನು ಸಂಪರ್ಕಿಸಬಹುದು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 'ನಮ್ಮ ಮೆಟ್ರೋ'ದಲ್ಲಿ ಹೊಸ ವ್ಯವಸ್ಥೆ; ಒಂದೇ ಟಿಕೆಟ್ ಬಳಸಿ ಗರಿಷ್ಠ ಆರು ಮಂದಿ ಪ್ರಯಾಣಕ್ಕೆ ಅವಕಾಶ
"ಕಳೆದ ಕೆಲವು ದಿನಗಳ ಹಿಂದೆ ತಂತ್ರಜ್ಞಾನ ವ್ಯಸನ ಹೊಂದಿರುವವರಿಗಾಗಿ ನಿಮ್ಹಾನ್ಸ್ ಸೆಂಟರ್ ಫಾರ್ ವೆಲ್ ಬೀಯಿಂಗ್ ಸಹಾಯವಾಣಿ ಆರಂಭಿಸಿತ್ತು. ಆದರೆ, ತಾಂತ್ರಿಕ ಸಮಸ್ಯೆ ಕಾರಣ ಸಹಾಯವಾಣಿಯಲ್ಲಿ ದೋಷ ಕಂಡುಬಂದಿರುವ ಹಿನ್ನೆಲೆಯಲ್ಲಿ, ನಿಮ್ಹಾನ್ಸ್ನಲ್ಲಿಯೇ ವೈದ್ಯರನ್ನು ಭೇಟಿಯಾಗಿ ಸಮಾಲೋಚನೆ ನಡೆಸಬಹುದಾಗಿದೆ" ಎಂದು ಈ ದಿನ.ಕಾಮ್ಗೆ ನಿಮ್ಹಾನ್ಸ್ ಆಸ್ಪತ್ರೆಯ ಮೂಲಗಳು ತಿಳಿಸಿವೆ.
"ಬಿಟಿಎಂ ಲೇಔಟ್ನಲ್ಲಿರುವ ನಿಮ್ಹಾನ್ಸ್ನಲ್ಲಿನ ಎಸ್ಎಚ್ಯಟಿ ಕ್ಲಿನಿಕ್ 2014ರಿಂದ ಟೆಕ್ ವ್ಯಸನದೊಂದಿಗೆ ಹೋರಾಡುತ್ತಿರುವವರಿಗೆ ವೈಯಕ್ತಿಕವಾಗಿ ಸಮಾಲೋಚನೆ ನಡೆಸುತ್ತಿದೆ. ಅನೇಕರು ತಂತ್ರಜ್ಞಾನಕ್ಕೆ ವ್ಯಸನಿಯಾಗಿದ್ದಾರೆ. ಆದರೂ ಚಿಕಿತ್ಸೆ ಪಡೆಯುತ್ತಿಲ್ಲ” ಎಂದು ಡಾ. ಮನೋಜ್ ಕುಮಾರ್ ಶರ್ಮಾ ಹೇಳಿದ್ದಾರೆ.