ಬಿಬಿಎಂಪಿ | ಮಳೆ ಹಾನಿ: ಹೆಬ್ಬಾಳ, ಸಾಯಿ ಲೇಔಟ್ ಸಂತ್ರಸ್ತರಿಗೆ ಪರಿಹಾರ ಘೋಷಣೆ

sai layout
  • ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಹೊಳೆಯಂತಾಗುವ ಲೇಔಟ್‌ಗಳು
  • ರಾಜಕಾಲುವೆ ನಿರ್ವಹಣೆ ಮತ್ತು ದುರಸ್ತಿಗೆ ಟೆಂಡರ್ ವಹಿಸಲಾಗಿದೆ

 

ರಾಜಧಾನಿಯಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಾಯಿ ಲೇಔಟ್ ಮತ್ತು ಹೆಬ್ಬಾಳದ ಸಿಐಎಲ್ ಲೇಔಟ್‌ಗಳು ಜಲಾವೃತಗೊಂಡಿದ್ದು ಅಲ್ಲಿನ ಜನ ಜೀವನ ಅಸ್ತವ್ಯಸ್ತವಾಗಿದೆ. ಆ ಹಿನ್ನೆಲೆಯಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಅಲ್ಲಿನ ಸಂತ್ರಸ್ತರಿಗೆ ಪರಿಹಾರ ಧನ ನೀಡುವುದಾಗಿ ಘೋಷಿಸಿದೆ.

ನಗರದ ಹೊರಮಾವು ಬಳಿ ಇರುವ ಈ ಲೇಔಟ್‌ಗಳಲ್ಲಿ ವಾಸವಾಗಿರುವ ನಿವಾಸಿಗಳಿಗೆ ಮಳೆ ಎಂದರೆ ಸಾಕು ಭಯಭೀತರಾಗುತ್ತಾರೆ. ಭಾರಿ ಮಳೆ ಮಾತ್ರವಲ್ಲ, ಸಣ್ಣ ಪ್ರಮಾಣದಲ್ಲಿ ಮಳೆಯಾದರೂ ಸಹ ರಾಜಕಾಲುವೆಗಳು ತುಂಬಿ, ಮನೆಗಳು ನೀರಿನಿಂದ ಜಲಾವೃತಗೊಳ್ಳುತ್ತವೆ. ಮನೆಗಳಿಗೆ ನುಗ್ಗುವ ನೀರನ್ನು ಹೊರಹಾಕುತ್ತ ರಾತ್ರಿಯೆಲ್ಲ ನಿದ್ದೆಗೆಟ್ಟು ದಿನದೂಡುವ ಪರಿಸ್ಥಿತಿ ಅಲ್ಲಿನ ಜನರಿಗೆ ಸಂಭವಿಸಿದೆ.

ಮಳೆಯಿಂದಾಗಿ ಜಲಾವೃತಗೊಂಡ ಮನೆಗಳಿಗೆ 10,000 ರೂ. ಪರಿಹಾರ ಧನ ಘೋಷಿಸಲಾಗಿದೆ ಎಂದು ಪಾಲಿಕೆಯು ತಿಳಿಸಿದೆ. ಒಟ್ಟಿನಲ್ಲಿ ಮಳೆಯಿಂದಾಗಿ ಒಂದರ ಮೇಲೊಂದು ಅವಘಡಗಳಿದಾಗಿ ಜನರು ದಿಕ್ಕುತೋಚದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಿನ್ನೆ ಸಂಜೆಯಿಂದ ಆರಂಭವಾದ ಬಿಟ್ಟು ಬಿಡದ ಮಳೆಯಿಂದಾಗಿ, ಸಾಯಿ ಲೇಔಟ್‌ ಮತ್ತು ಹೆಬ್ಬಾಳದ ಸಿಐಲ್‌ ಲೇಔಟ್‌ಗಳಲ್ಲಿ, ಮೂರಕ್ಕು ಹೆಚ್ಚು ಅಡಿಗಳಷ್ಟು ಮಳೆ ನೀರು ನಿಂತಿದ್ದೂ, ಮನೆಯಲ್ಲಿರುವ ದಿನಸಿ ಸಾಮಗ್ರಿಗಳು, ಟಿವಿ, ಫ್ರಿಡ್ಜ್, ಸೋಪಾಗಳು, ಬಟ್ಟೆ ಎಲ್ಲವೂ ಸಹ ನೀರಿಗೆ ಹಾನಿಯಾಗಿವೆ. ಊಟ, ತಿಂಡಿ ಮತ್ತು ಟೀ, ಕಾಫಿಗಾಗಿ ಪೇಚಾಡುವಂತ ಸ್ಥಿತಿ ಸಂಭವಿಸಿದೆ. ಮುಂಜಾನೆ ಕೆಲಸಗಳಿಗೆ ತೆರಳುವ ಹಿರಿಯರಿಗೆ, ಮಕ್ಕಳು ಶಾಲೆಗೆ ಹೋಗಾಲಾಗದೆ ಪರದಾಡುವಂತಾಗಿತ್ತು.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮಳೆಗೆ ಹೈರಾಣಾದ ರಾಜಧಾನಿ ಜನತೆ: ಇನ್ನೂ ಎರಡು ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆ

“ಮಹದೇವಪುರ ವಲಯದಲ್ಲಿ ಒಂದು ಗಂಟೆಗೆ 70 ಮಿಮೀ ಗೂ ಹೆಚ್ಚಿನ ಸಮಯ ಮಳೆ ಬಂದರೆ, ರಾಜಕಾಲುವೆಗಳಲ್ಲಿ ಒಳಹರಿವು ಹೆಚ್ಚಾಗುತ್ತದೆ. ಹೀಗಾಗಿ ಮಳೆ ನೀರು ಬಡಾವಣೆಗಳಿಗೆ ನುಗ್ಗಿದೆ. ರಾಜಕಾಲುವೆಗಳ ದುರಸ್ತಿ ಮಾಡದ ಕಾರಣ ಈ ಅವಘಡಕ್ಕೆ ಕಾರಣವಾಗಿದೆ. ರಾಜಕಾಲುವೆಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಿಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುತ್ತದೆ" ಎಂದು ಈ ದಿನ.ಕಾಮ್‌ ಗೆ ವಲಯ ಮುಖ್ಯ ಎಂಜಿನಿಯರ್ ಬಸವರಾಜ್ ಕಬಾಡೆ ತಿಳಿಸಿದರು.

ಆಗಸ್ಟ್ 5ರವರೆಗೂ ಹೆಚ್ಚು ಮಳೆಯಾಗಲಿದ್ದು, ಸಾಯಿ ಲೇಔಟ್, ನಾಗಪ್ಪ ರೆಡ್ಡಿ ಲೇಔಟ್‌ಗಳಂತೆ ಇನ್ನಿತರ ಪ್ರದೇಶಗಳಲ್ಲಿರುವ ಮನೆಗಳಿಗೆ ನೀರು ನುಗ್ಗದೆ ಇರುವ ರೀತಿ ಪಂಪಿಂಗ್ ಹಾಕಲಾಗುತ್ತಿದೆ. ಎಚ್ಎಆರ್, ಬಿಆರ್‍‌ಎ ಲೇಔಟ್ ನಲ್ಲಿ 50 ಮನೆಗೆ ನೀರು ನುಗ್ಗಿದ್ದು, ಶಾಶ್ವತ ಪರಿಹಾರಕ್ಕಾಗಿ ಬಿಬಿಎಂಪಿಯು, ದುರಸ್ತಿ ಕಾಮಗಾರಿಗಳನ್ನು ಈಗಾಗಲೇ ಕೈಗೊಂಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್