ಬಿಬಿಎಂಪಿ | ಮೀಸಲಾತಿ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಆಗಸ್ಟ್‌ 10 ಕೊನೆಯ ದಿನ

bbmp
  • "2011ರ ಜನಗಣತಿಯ ಅನುಸಾರ ವಾರ್ಡ್ ಮೀಸಲಾತಿ ನಿಗದಿಯಾಗಿಲ್ಲ"
  • ಮೀಸಲಾತಿಯ ಅಂತಿಮ ಅಧಿಸೂಚನೆ ವೇಳೆ ಶೇ.30ರಷ್ಟು ಬದಲಾವಣೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣಾ ಮೀಸಲಾತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳನ್ನು ಸರ್ಕಾರಕ್ಕೆ ಸಲ್ಲಿಸಲು ಪಾಲಿಕೆಯು ಏಳು ದಿನಗಳ ಕಾಲಾವಕಾಶ ನೀಡಿದೆ. ಆಗಸ್ಟ್ 10 ಇದಕ್ಕೆ ಕೊನೆಯ ದಿನಾಂಕ ಎಂದು ಪ್ರಕಟಿಸಲಾಗಿದೆ. 

"ಬಿಬಿಎಂಪಿ 243 ವಾರ್ಡ್‌ಗಳ ವಾರ್ಡ್‌ವಾರು ಮೀಸಲಾತಿ 2011ರ ಜನಸಂಖ್ಯೆ ಪರಿಶಿಷ್ಟಜಾತಿ/ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿಲ್ಲ. 243 ವಾರ್ಡ್‌ಗಳಲ್ಲಿ, 57 ವಾರ್ಡ್ ಮೀಸಲಾತಿ ಮಾತ್ರ ಸರಿಯಾದ ಕ್ರಮದಲ್ಲಿದ್ದು, ಇನ್ನುಳಿದ 187 ವಾರ್ಡ್‌ ಮೀಸಲಾತಿಯು ಜನಗಣತಿಯ ಪ್ರಕಾರ ಇಲ್ಲ" ಎಂದು ತಜ್ಞರು ಆರೋಪಿಸಿದ್ದಾರೆ. 

"ಆಗಸ್ಟ್ 3 ರಂದು ಮೀಸಲಾತಿ ಕುರಿತಂತೆ ಆಕ್ಷೇಪಣೆ ಸಲ್ಲಿಕೆಗೆ ಆಹ್ವಾನಿಸಿ ಅಧಿಸೂಚನೆ ಹೋರಡಿಸಿದ್ದು, ಆಗಸ್ಟ್ 6 ನೇ ತಾರೀಕಿನವರೆಗೂ ಆಕ್ಷೇಪಣೆಗಳು ನೂರರ ಗಡಿ ದಾಟಿಲ್ಲ. ಮೀಸಲಾತಿಯ ಕುರಿತು ಹಲವು ಗೊಂದಲ, ಆರೋಪಗಳಿವೆ. ಅವುಗಳನ್ನು ಆಕ್ಷೇಪಣೆಯ ಮೂಲಕ ಸರ್ಕಾರ ತಲುಪಬೇಕಿದೆ" ಎಂದಿದ್ದಾರೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ 14 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳ ಮೀಸಲಾತಿ ಮಾತ್ರ ನಿಯಮದ ಅನುಸಾರವಿದೆ. ಇನ್ನುಳಿದಂತೆ ವಿಜಯನಗರ, ಗೋವಿಂದರಾಜನಗರ ಕೇತ್ರಗಳಲ್ಲಿ ತಲಾ 5 ವಾರ್ಡ್, ಸರ್ವಜ್ಞನಗರ, ಶಾಂತಿನಗರ ಕ್ಷೇತ್ರಗಳಲ್ಲಿ ತಲಾ 4 ವಾರ್ಡ್, ರಾಜರಾಜೇಶ್ವರಿ ನಗರದ 3 ವಾರ್ಡ್. ಬೆಂಗಳೂರು ದಕ್ಷಿಣದ 3, ಬ್ಯಾಟರಾ ಯನಪುರ, ಸಿ.ವಿ ರಾಮನ್ ನಗರ, ರಾಜಾಜಿನಗರ, ಚಾಮರಾಜಪೇಟೆ ಕ್ಷೇತ್ರಗಳಲ್ಲಿ ತಲಾ 2 ವಾರ್ಡ್‌ಗಳ ಮೀಸಲಾತಿ ಸರಿಯಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕ, ಹೆಬ್ಬಾಳ ಕ್ಷೇತ್ರಗಳ ಯಾವ ವಾರ್ಡ್‌ಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ನಿಗದಿಯಾಗಿಲ್ಲ. ದಾಸರಹಳ್ಳಿ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಹೆಬ್ಬಾಳ, ಕೆ.ಆರ್ ಪುರ, ಶಿವಾಜಿನಗರ, ಬಿಟಿಎಂ ಲೇಔಟ್, ಬಸವನಗುಡಿ, ಅನೇಕಲ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಒಂದೇ ಒಂದು ವಾರ್ಡ್ ಮೀಸಲಾತಿ ಮಾತ್ರ ನಿಯಾಮಾನುಸಾರವಾಗಿದೆ ಎಂದು ನಗರಾಭಿವೃದ್ಧಿ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಅಧಿಕಾರಿಗಳು ಹೇಳಿರುವುದಾಗಿ 'ಪ್ರಜಾವಾಣಿ' ವರದಿ ಮಾಡಿದೆ. 

ಈ ಸುದ್ದಿ ಓದಿದ್ದೀರಾ?: ರೈಲ್ವೆ ಅಪಘಾತ | ಕಳೆದ ಏಳು ವರ್ಷಗಳಲ್ಲಿ 5,210ಕ್ಕೂ ಅಧಿಕ ಮಂದಿ ಸಾವು

“ಈ ಹಿಂದೆ ವಾರ್ಡ್ ಪುನರ್ ವಿಂಗಡಣೆಯ ಅಂತಿಮ ಎರಡು ದಿನದಲ್ಲಿ ಸಾಕಷ್ಟು ಆಕ್ಷೇಪಣೆಗಳು ಎದುರಾಗಿದ್ದವು. ಮೀಸಲಾತಿ ವಿಷಯದಲ್ಲೂ ಅಂತಿಮ ದಿನಗಳಲ್ಲಿ ಹೆಚ್ಚು ಸಮಸ್ಯೆ ಎದುರಾಗಬಹುದು" ಎಂದರು.

“ಮೀಸಲಾತಿ ನಿಗದಿಪಡಿಸುವಲ್ಲಿ ಸಾಕಷ್ಟು ಸಮಸ್ಯೆಯಾಗಿದ್ದು, ಬಿಜಿಪಿ ಪಕ್ಷದ ಹಿರಿಯರು, ನಾಗರಿಕರು, ಶಾಸಕರ ಗಮನಕ್ಕೆ ತಂದಿದ್ದೇವೆ. ಈಗಾಗಲೇ ಕರುಡು ಪಟ್ಟಿ ಬಿಡುಗಡೆ ಮಾಡಲಾಗಿದೆ. ಮೀಸಲಾತಿಯ ಅಂತಿಮ ಅಧಿಸೂಚನೆಯ ವೇಳೆ ಶೇಕಡಾ.30 ರಷ್ಟು ಬದಲಾವಣೆಯ ಸಾಧ್ಯತೆ ಇದೆ” ಎಂದು ಬಿಜೆಪಿ ಮುಖಂಡರು ಮಾತನಾಡಿದ್ದಾರೆ.

"ಕಾಂಗ್ರೆಸ್‌ನ ಪ್ರಮುಖ ನಾಯಕರಿಗೆ ಮೀಸಲಾತಿ ಸೌಲಭ್ಯ ದೊರೆಯದಂತೆ, ಬಿಜೆಪಿಯವರು ಪಕ್ಷಪಾತ ಮಾಡಿದ್ದಾರೆ. ಮೂರ್ನಾಲ್ಕು ಬಾರಿ ಒಂದು ವಾರ್ಡ್‌ನಲ್ಲಿ ಸ್ಪರ್ಧಿಸಿರುವ ಕಾಂಗ್ರೇಸ್ ನಾಯಕರಿಗೆ, ಆ ವಾರ್ಡ್‌ನಲ್ಲಿ ಸ್ಪರ್ಧಿಸದಂತೆ ಮಿಸಲಾತಿ ನಿಗದಿ ಮಾಡಿದ್ದಾರೆ" ಎಂದು ಕಾಂಗ್ರೆಸ್‌ನ ಮಾಜಿ ಕಾರ್ಪೋರೇಟ್ ಕೇಶವಮೂರ್ತಿ ಆರೋಪಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್