ಬಿಬಿಎಂಪಿ | 'ನಮ್ಮ ಕ್ಲಿನಿಕ್‌' ಸಿಬ್ಬಂದಿ ನೇಮಕಾತಿಗೆ ಆಗಸ್ಟ್ 10-11ರಂದು ನೇರ ಸಂದರ್ಶನ

namma clinic
  • 'ನಮ್ಮ ಕ್ಲಿನಿಕ್’ ಸ್ಥಾಪನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ
  • 'ನಮ್ಮ ಕ್ಲಿನಿಕ್' ತೆರೆಯಲು ₹53 ಕೋಟಿ ಅನುದಾನ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 243 ವಾರ್ಡ್‌ಗಳಲ್ಲಿ ಆರಂಭಿಸುತ್ತಿರುವ ‘ನಮ್ಮ ಕ್ಲಿನಿಕ್’ಗೆ ಅರ್ಹ ಅಭ್ಯರ್ಥಿಗಳ ನೇರ ನೇಮಕಾತಿಗೆ ಆಗಸ್ಟ್ 10 ಮತ್ತು 11ರಂದು ಬಿಬಿಎಂಪಿ ಕೇಂದ್ರ ಕಚೇರಿ ನೌಕರರ ಭವನದಲ್ಲಿ ಸಂದರ್ಶನ ನಡೆಯಲಿದೆ. 

ರಾಜ್ಯ ಸರ್ಕಾರ ಜನರ ಆರೋಗ್ಯ ಸೇವೆಗೆ 'ನಮ್ಮ ಕ್ಲಿನಿಕ್' ಆರಂಭಿಸುತ್ತಿದೆ. ಸೃಜನಾತ್ಮಕ ಮತ್ತು ನವೀನ ‘ಲೋಗೋ’ ವಿನ್ಯಾಸ ಮಾಡಲು ಅನುವು ಮಾಡಿಕೊಟ್ಟಿದೆ. 

ರಾಜ್ಯ ಸರ್ಕಾರ 'ನಮ್ಮ ಕ್ಲಿನಿಕ್' ತೆರೆಯಲು ₹53 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಒಂದು ವರ್ಷದ ಗುತ್ತಿಗೆಗೆ 940 ಸಿಬ್ಬಂದಿ, ವೈದ್ಯರು, ದಾದಿಯರು ಸೇರಿದಂತೆ ನಾನಾ ಹುದ್ದೆಗಳ ನೇಮಕ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ| ಸಿದ್ದರಾಮಯ್ಯ ಜನ್ಮದಿನೋತ್ಸವಕ್ಕೆ ಫ್ಲೆಕ್ಸ್‌ ಅಳವಡಿಸಿದವರ ವಿರುದ್ಧ ಎಫ್‌ಐಆರ್ ದಾಖಲು

ಪ್ರಸಕ್ತ ಬಜೆಟ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ‘ನಮ್ಮ ಕ್ಲಿನಿಕ್’ ಸ್ಥಾಪನೆಗೆ ಘೋಷಿಸಿದ್ದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕ್ಲಿನಿಕ್‌ಗಳನ್ನು ತೆರೆಯಲು ಕೆಲವು ಬಿಬಿಎಂಪಿ ಕಟ್ಟಡಗಳನ್ನು ಗುರುತಿಸಲಾಗಿದ್ದು, ಇನ್ನುಳಿದ ಕಡೆ ಬಾಡಿಗೆ ಕಟ್ಟಡಗಳನ್ನು ಪಡೆಯಲಾಗಿದೆ. ಮೇ ತಿಂಗಳಲ್ಲಿ ಸಾರ್ವಜನಿಕರ ಸೇವೆಗೆ 'ನಮ್ಮ ಕ್ಲಿನಿಕ್' ಲಭ್ಯವಾಗುವ ಸಾಧ್ಯತೆ ಇದೆ.

ನಿಮಗೆ ಏನು ಅನ್ನಿಸ್ತು?
0 ವೋಟ್