
- ಪಾಲಿಕೆಯ 243 ವಾರ್ಡ್ಗಳಲ್ಲಿ ಒಟ್ಟು 79,19,563 ಮತದಾರರಿದ್ದಾರೆ
- ಬಿಬಿಎಂಪಿಯ ಅಧಿಕೃತ ವೆಬ್ಸೈಟ್ bbmp.gov.inನಲ್ಲಿ ಪ್ರಕಟ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ, ವಾರ್ಡ್ವಾರು ಅಂತಿಮ ಮತದಾರರ ಪಟ್ಟಿಯನ್ನು ಸೆಪ್ಟೆಂಬರ್ 29ರಂದು ಪ್ರಕಟಿಸುವುದಾಗಿ ಚುನಾವಣಾ ಆಯೋಗ ಹೇಳಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟಿಸುವ ಕುರಿತು ಸುತ್ತೋಲೆ ಹೊರಡಿಸಿರುವ ಆಯೋಗ, "ಪಾಲಿಕೆಯ 243 ವಾರ್ಡ್ಗಳಲ್ಲಿ ಒಟ್ಟು 79,19,563 ಮತದಾರರಿದ್ದಾರೆ. ಈ ಪೈಕಿ 41,14,383 ಪುರುಷರು, 38,03,747 ಮಹಿಳೆಯರು ಹಾಗೂ 1,433 ಇತರೆ ಮತದಾರರಿದ್ದಾರೆ" ಎಂದು ಹೇಳಿದೆ.
"ಮತದಾರರ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಪಟ್ಟಿಯನ್ನು ಸೆ.29ರಂದು ಬಿಬಿಎಂಪಿಯ ಅಧಿಕೃತ ವೆಬ್ಸೈಟ್ bbmp.gov.in ಮತ್ತು ಎಲ್ಲ ಮತದಾರರ ನೋಂದಣಾಧಿಕಾರಿ/ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿಗಳಲ್ಲಿ ಹಾಗೂ ವಾರ್ಡ್ ಕಛೇರಿಗಳಲ್ಲಿ ಪ್ರಕಟಿಸಲಾಗುವುದು" ಎಂದು ಆಯೋಗ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ? ಬಾಗ್ಮನೆ ಟೆಕ್ಪಾರ್ಕ್ ಒತ್ತುವರಿ ತೆರವು | ಲೋಕಾಯುಕ್ತ ಮಧ್ಯಪ್ರವೇಶಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ
"ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳ ಬಯಸುವವರು ಮೊಬೈಲ್ ಆಪ್ ವೋಟರ್ ಹೆಲ್ಪ್ಲೈನ್ (Voter Helpline) ಮತ್ತು ಎನ್ವಿಎಸ್ಪಿ ಪೋರ್ಟಲ್ (NVSP Portal)ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಸುತ್ತೋಲೆಯಲ್ಲಿ ತಿಳಿಸಿದೆ.