ಬಿಬಿಎಂಪಿ ಚುನಾವಣೆ: ನಾಗರಬಾವಿ ವಾರ್ಡ್‌ ಮೀಸಲಾತಿ ಬದಲು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಾರ್ಡ್‌ವಾರು ಮೀಸಲಾತಿ ಸಂಬಂಧಿಸಿದಂತೆ, ಆಗಸ್ಟ್ 16ರಂದು ಹೊರಡಿಸಿದ್ದ ನಾಗರಬಾವಿ ವಾರ್ಡ್‌ನ ಮೀಸಲಾತಿಯನ್ನು ಬದಲಿಸಿ ರಾಜ್ಯ ಸರ್ಕಾರ ಆದೇಶಿಸಿದೆ.

ಬಿಬಿಎಂಪಿಯ 243 ವಾರ್ಡ್‌ಗಳ ಅಂತಿಮ ಮೀಸಲಾತಿ ಅಧಿಸೂಚನೆಯಲ್ಲಿ ವಾರ್ಡ್ ಸಂಖ್ಯೆ 153 ನಾಗರಬಾವಿ ವಾರ್ಡ್‌ನ ಮೀಸಲಾತಿಯನ್ನು ಹಿಂದುಳಿದ ವರ್ಗ–ಬಿ (ಮಹಿಳೆ) ಎಂದು ನಮೂದಿಸಲಾಗಿತ್ತು. ಇದನ್ನು ತಿದ್ದುಪಡಿ ಮಾಡಿ ‘ಹಿಂದುಳಿದ ವರ್ಗ-ಬಿ’ ಮೀಸಲಾತಿ ಎಂದು ತಿದ್ದುಪಡಿ ಮಾಡಿ ಆದೇಶಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್