ಬಿಬಿಎಂಪಿ ಚುನಾವಣೆ | ಪ್ರತಿಪಕ್ಷಗಳಷ್ಟೇ ಅಲ್ಲ, ಬಿಜೆಪಿಯಿಂದಲೂ ಮೀಸಲಾತಿಗೆ ಆಕ್ಷೇಪ!

  • ಮೀಸಲಾತಿ ವಿರುದ್ಧ ಬಿಜೆಪಿಗರ ಅಸಮಾಧಾನ
  • ಟೀಕಿಸುವವರು ಆಕ್ಷೇಪಣೆಗಳನ್ನು ಸಲ್ಲಿಸಬಹುದು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ, ರಾಜ್ಯ ಸರ್ಕಾರ ಪ್ರಕಟಿಸಿದ ವಾರ್ಡ್‌ವಾರು ಮೀಸಲಾತಿಗೆ ಪ್ರತಿಪಕ್ಷಗಳು ಅಷ್ಟೇ ಅಲ್ಲದೇ, ಬಿಜೆಪಿಯೂ ಆಕ್ರೋಶ ವ್ಯಕ್ತಪಡಿಸಿದೆ.

ಕಾಂಗ್ರೆಸ್ ನಾಯಕರಿಗಷ್ಟೇ ಅಲ್ಲದೇ, ಬಿಜೆಪಿಯ ಪ್ರಭಾವಿ ನಾಯಕರ ವಾರ್ಡ್‌ಗಳಲ್ಲೂ ಕೂಡ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ. 

ಕಂದಾಯ ಸಚಿವ ಆರ್ ಅಶೋಕ ಅವರ ಆಪ್ತ ಪದ್ಮನಾಭ ರೆಡ್ಡಿ ಅವರ ಕಾಚರಕನಹಳ್ಳಿ ವಾರ್ಡ್ ಹಾಗೂ ಮಾಜಿ ಮೇಯರ್ ಬಿ ಎಸ್ ಸತ್ಯನಾರಾಯಣ ಅವರ ಬಸವನಗುಡಿ ವಾರ್ಡ್‌ಗಳನ್ನು ಸಾಮಾನ್ಯ ಅಭ್ಯರ್ಥಿ (ಮಹಿಳೆ)ಗೆ ಮೀಸಲಿಡಲಾಗಿದೆ.

ಬಿಬಿಎಂಪಿ ಚುನಾವಣೆ ನಡೆಸಲು ಮನಸ್ಸಿಲ್ಲದ ಬಿಜೆಪಿ ಸರ್ಕಾರ ಅವೈಜ್ಞಾನಿಕ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದೆ ಎಂದು ಪ್ರತಿಪಕ್ಷಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆ| ವಾರ್ಡ್‌ವಾರು ಮೀಸಲಾತಿ ವಿರುದ್ಧ ಸಿಡಿದೆದ್ದ ವಿಪಕ್ಷಗಳು!

ಈ ಕುರಿತಂತೆ ಬಿಜೆಪಿಯ ಕೆಲ ಮಾಜಿ ಕಾರ್ಪೋರೇಟರ್‌ಗಳು ಕೂಡ ಮೀಸಲಾತಿ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. "ಬಿಜೆಪಿ ಪಕ್ಷದಲ್ಲಿ ಹಲವು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮ್ಮ ಪಕ್ಷವೇ ಅಧಿಕಾರದಲ್ಲಿದ್ದರೂ ನಮಗೆ ಅನ್ಯಾಯ ಆಗಿದೆ. ಸತತವಾಗಿ ಎರಡು ಮೂರು ಬಾರಿ ಗೆದ್ದಿರುವ ವಾರ್ಡ್‌ಗಳಲ್ಲಿ ಸ್ಪರ್ಧೆಗೆ ಅವಕಾಶವಿಲ್ಲದಂತೆ ವಾರ್ಡ್‌ವಾರು ಮೀಸಲಾತಿ ನಿಗದಿ ಮಾಡಲಾಗಿದೆ. ನಮ್ಮ ವಾರ್ಡ್‌ಗಳಲ್ಲಿ ನಮಗೆ ಮೀಸಲಾತಿ ಇತ್ತು. ಆದರೆ, ಈಗ ನಮ್ಮ ಪಕ್ಷವೇ ನಮ್ಮನ್ನು ತಿರಸ್ಕರಿಸಿದೆ" ಎಂದು ಬಿಜೆಪಿಯ ಹಲವು ಮಾಜಿ ಕಾರ್ಪೊರೇಟರ್‌ಗಳು ಅಸಮಾಧಾನ ಹೊರಹಾಕಿದ್ದಾರೆ.

ಈ ಕುರಿತಂತೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಜೆಪಿ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ”ವಾರ್ಡ್‌ವಾರು ಮೀಸಲಾತಿಯನ್ನು ನ್ಯಾ ಭಕ್ತವತ್ಸಲ ಸಮಿತಿಯು ವೈಜ್ಞಾನಿಕವಾಗಿ ಮಾಡಿದೆ. ಇದಕ್ಕೆ ಟೀಕಿಸುವವರು ಆಕ್ಷೇಪಣೆಗಳನ್ನು ಸಲ್ಲಿಸಬಹುದು” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್