ಬಿಬಿಎಂಪಿ | ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ; ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು

  • ಉಚಿತವಾಗಿ ಮತದಾನದ ಅರಿವು ಮೂಡಿಸುತ್ತೇವೆ ಎಂದಿತ್ತು ಚಿಲುಮೆ ಸಂಸ್ಥೆ
  • ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು ಮಾಡಿ, ನೋಟಿಸ್ ಜಾರಿ ಮಾಡಿದ ಬಿಬಿಎಂಪಿ

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ರದ್ದು ಮಾಡಿ, ನೋಟಿಸ್ ಜಾರಿ ಮಾಡಲಾಗಿದೆ. ಸಂಸ್ಥೆ ವಿರುದ್ಧ ದೂರನ್ನೂ ದಾಖಲಿಸಲಾಗಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.

ಬೆಂಗಳೂರಿನ ಬಿಬಿಎಂಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "2018ರಿಂದ ಚಿಲುಮೆ ಸಂಸ್ಥೆಗೆ ಮತದಾನದ ಜಾಗೃತಿ ನಡೆಸಲು ಕೆಲವು ನಿಬಂಧನೆಗಳನ್ನು ವಿಧಿಸಿ ಅನುಮತಿ ನೀಡಲಾಗಿತ್ತು. ಈ ವರ್ಷ ಸಂಸ್ಥೆ ಉಚಿತವಾಗಿ ಮತದಾನದ ಅರಿವು ಮೂಡಿಸುವುದಾಗಿ ತಿಳಿಸಿತ್ತು" ಎಂದರು.

Eedina App

"ಚಿಲುಮೆ ಸಂಸ್ಥೆಯನ್ನು 'ವೋಟರ್‌ ಐಡಿ' ಜೊತೆಗೆ ಆಧಾರ್ ಜೋಡಣೆ ಬಗ್ಗೆಯೂ ಜಾಗೃತಿ ಮೂಡಿಸಲು ಬಳಸಿದ್ದೇವೆ. ಆದರೆ, ಬಿಬಿಎಂಪಿಯಿಂದ 'ಪಿಎಲ್‌ಓ ಐಡಿ' ಬಂದಿದೆ ಎಂದು ಸಮರ್ಥಂ ಸಂಸ್ಥೆ ಪಾಲಿಕೆಗೆ ದೂರು ನೀಡಿತ್ತು. ಆ ಹಿನ್ನೆಲೆಯಲ್ಲಿ ನ.2ರಂದು ಈ ಕುರಿತು ತನಿಖೆ ಪ್ರಾರಂಭಿಸಿದೆವು. ಪ್ರಕರಣದ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಗೆ ಮಾಹಿತಿ ನೀಡಿದ್ದೇವೆ" ಎಂದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ನ.18ರಿಂದ 20ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ

AV Eye Hospital ad

"ಚಿಲುಮೆ ಸಂಸ್ಥೆಗೆ ಮತದಾರರ ಸರ್ವೆ ಮಾಡುವ ಮತ್ತು ಖಾಸಗಿ ಮಾಹಿತಿಯನ್ನು ಸಂಗ್ರಹ ಮಾಡುವ ಅಧಿಕಾರ ಇಲ್ಲ. ಈಗಾಗಲೇ ಈ ಬಗ್ಗೆ ತನಿಖೆ ನಡೆಸಲು ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಪ್ರಾದೇಶಿಕ ಆಯುಕ್ತರು ತನಿಖೆ ಮಾಡಲಿದ್ದಾರೆ; ಮಾಹಿತಿ ಪಡೆದು ಕ್ರಮ ತೆಗೆದುಕೊಳ್ಳುತ್ತೇವೆ. 48 ಗಂಟೆಯೊಳಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಯಾರೆಲ್ಲ ಐಡಿ ಕಾರ್ಡ್ ಹಂಚಿಕೆ ಮಾಡಿದ್ದಾರೋ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app