ಬಿಬಿಎಂಪಿ | ಚರಂಡಿಗಳ ಹೂಳು ತೆಗೆಯುವಂತೆ ಪತ್ರ ಬರೆದ ಜೆ ಪಿ ನಗರದ 4ನೇ ಹಂತದ ನಿವಾಸಿಗಳು

ಜೆ ಪಿ ನಗರದ 4ನೇ ಹಂತದಲ್ಲಿ ಚರಂಡಿ ನೀರು ಪ್ರವಾಹದ ಪರಿಸ್ಥಿತಿಯನ್ನು ನಿರ್ಮಾಣ ಮಾಡುತ್ತಿದ್ದು, ಚರಂಡಿಗಳ ಹೂಳು ತೆಗೆಯುವಂತೆ ನಗರದ ನಿವಾಸಿಗಳು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿರುವ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಜೆಪಿ ನಗರ 4ನೇ ಹಂತದ ಸದಸ್ಯರು ಕೂಡಲೇ ಚರಂಡಿಗಳ ಹೂಳು ತೆಗೆಯುವಂತೆ ಮನವಿ ಮಾಡಿದ್ದಾರೆ.

ಡಾಲರ್ಸ್ ಕಾಲೊನಿ ಮತ್ತು ಬನ್ನೇರುಘಟ್ಟ ರಸ್ತೆ ಮಧ್ಯೆ ರಾಜಕಾಲುವೆ 30 ಅಡಿಯಿಂದ 8 ಅಡಿಯವರೆಗೆ ಕಿರಿದಾಗಿದ್ದು, ನೀರಿನ ಹರಿವಿಗೆ ಅಡ್ಡಿಯಾಗಿದೆ. ಅದೇ ರೀತಿ, ರಂಕಾ ಕಾಲೋನಿ ಬಳಿ ಚರಂಡಿಯನ್ನು ರಸ್ತೆಯಿಂದ ಮುಚ್ಚಲಾಗಿದ್ದು,  ಹೂಳು ತೆಗೆಯುವ ಕಾಮಗಾರಿಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ”ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೆಲವು ಸ್ಥಳಗಳಲ್ಲಿ ಚರಂಡಿಗಳ ಅಸಮರ್ಪಕ ಕಾಮಗಾರಿಯಿಂದ ಚರಂಡಿ ನೀರು ಹಿಮ್ಮುಖವಾಗಿ ಹರಿಯುತ್ತಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ. ಸಮಾನಾಂತರ ಚರಂಡಿ ನಿರ್ಮಾಣಕ್ಕೆ 10 ಕೋಟಿಗೆ ಅನುಮೋದನೆ ನೀಡಲಾಗಿದೆ. ಆದರೆ, ಯಾವುದೇ ಪ್ರಗತಿ ಕಂಡಿಲ್ಲ. ಹೀಗಾಗಿ ಅಧಿಕಾರಿಗಳು ಕಾಮಗಾರಿಯನ್ನು ತ್ವರಿತಗೊಳಿಸಬೇಕು ಎಂದು ನಿವಾಸಿಯೊಬ್ಬರು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180